ಕುಕನೂರ,:
ಆಧುನಿಕ ಸುಪರ್ ಪಾಸ್ಟ್ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಕಾನೂನು ಜ್ಞಾನವನ್ನು ಸಹ ಹೊಂದುವುದು ಅಗತ್ಯವಾಗಿದೆ ಎಂದು ಕುಕನೂರ ಪೊಲೀಸ್ ಠಾಣೆಯ ಠಾಣಾಧಿಕಾರಿ ಟಿ. ಗುರುರಾಜ ಹೇಳಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಇಂದಿನ ಪೀಳಿಗೆಯ ಮಕ್ಕಳು ಅಂತರ್ಜಾಲವನ್ನು ಸದುಪಯೋಗ ಪಡೆಸಿಕೊಳ್ಳಬೇಕು.ಯುವ ಪೀಳಿಗೆ ಮೊಬೈಲ್ ಗಿಳಿಯಿಂದ ಹಾಳಾಗುತ್ತಿದೆ, ದುಶ್ಚಟಗಳು ದಾಸರಾಗುತ್ತಿವೆ. ವಿದ್ಯಾರ್ಥಿಗಳ ಉತ್ತಮ ಸಂಸಾರದೊಂದಿಗೆ ಬೆಳೆದು
ಉತ್ತಮ ಸಂಸ್ಕಾರದೊಂದಿಗೆ ಕೀರ್ತಿ ಬೆಳೆದು ದೇಶದ ಸತ್ಪಜೆಗಳಾಗುವದರ ಜೊತೆಗೆ, ಕಲಿತ ಶಾಲೆಗೆ ಹಾಗೂ ಪಾಲಕರಿಗೆ ಹೆಸರು ತರಬೇಕು
ನಂತರ ಪೊಲೀಸ್ ಇಲಾಖೆಯ ದೈನಂದಿನ ಕರ್ತವ್ಯದ ಬಗ್ಗೆ ಹಾಗೂ ಎಫ್‌ಐಆರ್, ಚಾರ್ಜಶಿಟ್ ದಾಖಲಿಸುವ ಕುರಿತು ಯುಡಿ ಆರ್ ಹಾಗೂ ಪೋಸ್ಕೋ, ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ಪ್ರಕಟಿಸಲಾಗಿದೆ.
ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ಮಕ್ಕಳ ಕಳ್ಳ ಸಾಗಾಣಿಕೆ, ಅಮಲು ಬರಿಸುವ ಮಧ್ಯ ಮಾದಕ ವಸ್ತುಗಳು, ತುಂಬಾಕು ಉತ್ಪನ್ನಗಳ ಬಗ್ಗೆ ಸದಾ ಮಹಿಳೆಯರು ಮಕ್ಕಳು ಜಾಗೃತರಾಗುತ್ತಾರೆ. ಬಾಲ್ಯ ವಿವಾಹಗಳು ನಡೆದಲ್ಲಿ ಮಕ್ಕಳ ಸಹಾಯವಾಣಿ 1098, ಇಲ್ಲವೇ ಪೊಲೀಸ್ ಸಹಾಯವಾಣಿ 112 ಕರೆ ಮಾಡಿ ಬಾಲ್ಯ ವಿವಾಹ ನಡೆಯುವುದನ್ನು ತಡೆಗಟ್ಟಬೇಕು ಎಂದು ಪ್ರಕಟಿಸಿದರು.
ಮದುವೆಗೆ ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ಕಡ್ಡಾಯ, ಹಾಗೂ ಸಾಮೂಹಿಕ ವಿವಾಹ ದಾಖಲಾತಿಗಳನ್ನು ಸಮರ್ಪಕವಾಗಿ ನಡೆಸಬೇಕು. ಬಾಲ ಕಾರ್ಮಿಕರು ಯಾವುದೇ ಅಂಗಡಿ ಮುಂಗಟ್ಟು ಅಥವಾ ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವ ಇಲಾಖೆ ಗಮನಕ್ಕೆ ತರಬೇಕು, ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ.
ಬಂದೂಕು, ಗುಂಡುಗಳನ್ನು ಬಳಸುವ ವಿಧಾನ ಹಾಗೂ ಉಪಯೋಗಿಸಲು ಚೌಕಟ್ಟುಗಳ ಬಗ್ಗೆ ಸವಿಸ್ತಾರವಾಗಿ ಪ್ರಕಟಿಸಿದೆ.
ಈ ಸಂದರ್ಭದಲ್ಲಿ ಕುಕನೂರ ಪೊಲೀಸ್ ಠಾಣೆಯ ಎಸ್‌ಎಸ್‌ಐ ಟಿ.ನಿರಂಜನ್, ಪೊಲೀಸ್ ಪೇದೆಗಳಾದ ಮಂಜುನಾಥ ಮ್ಯಾಳಿ, ಅಬ್ದುಲ್ ಖಾದರ್, ಹನುಮಂತಪ್ಪ, ಬಸಯ್ಯ, ಮಾರುತಿ, ಮಹಿಳಾ ಪೇದೆ ವಿದ್ಯಾವತಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು