ಮುದ್ದೇಬಿಹಾಳ :
ಸಮಾಜದ ನಾಲ್ಕನೇ ಅಂಗವೆಂದು ಕರೆಯಿಸಿಕೊಳ್ಳುವ ಪತ್ರಕರ್ತರ ಬದುಕು ಡೋಲಾಯಮಾನ ಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರ ಪತ್ರಕರ್ತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಮೀನಮೇಷ ಮಾಡುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ನೇತೃತ್ವ ಹಾಗೂ ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್‌ನವರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ 16ಸಾವಿರ ಪತ್ರಕರ್ತರು ಭದ್ರತೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ.ಜಿಲ್ಲಾ ಮಟ್ಟದಲ್ಲಿ ಸಂಚರಿಸಲು ಪಾಸ್ ಕೊಡುವಂತೆ ಹೋರಾಟ ಮಾಡಿದ್ದರೂ ಬರೀ ಘೋಷಣೆ ಮಾಡಿ ಸರ್ಕಾರ,ಸಿಎಂ ಸಿದ್ಧರಾಮಯ್ಯನವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.ಮುಂಬರುವ ದಿನಗಳಲ್ಲಿ ಪತ್ರಕರ್ತರಿಗಾಗಿ ಕ್ಷೇಮಾಭಿವೃದ್ಧಿ ಆರಂಭಿಸಿ ಸಂಕಷ್ಟದಲ್ಲಿರುವ ಅಪಘಾತಗಳಲ್ಲಿ ಗಂಭೀರ ಪ್ರಕರಣಗಳು ಇದ್ದಲ್ಲಿ ಅಂತವರ ನೆರವಿಗೆ ಧ್ವನಿ ಸಂಘಟನೆ ಧಾವಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ,ಪತ್ರಕರ್ತರ ಸಂಘಟನೆಗಳು ಒಗ್ಗೂಡಿ ಕಾರ್ಯಕ್ರಮಗಳನ್ನು ಸಂಘಟಿಸುವAತಾಗಲಿ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಪತ್ರಕರ್ತರ ಆರೋಗ್ಯನಿಧಿಯ ಹೆಸರಿನಲ್ಲಿ 10 ಲಕ್ಷ ರೂ.ಗಳನ್ನು ಕರ್ನಾಟಕ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪತ್ರಕರ್ತರ ಆರೋಗ್ಯದ ವಿಮೆ ಸೌಲಭ್ಯ ಕಲ್ಪಿಸಲು ಮುಂದಡಿ ಇಡಲಿದೆ ಎಂದು ಭರವಸೆ ನೀಡಿದರು.
ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಮಾತನಾಡಿ, ಪತ್ರಕರ್ತರು ಸೂಜಿಯಂತೆ ಸಮಾಜದಲ್ಲಿರುವ ಸಮಸ್ಯೆಗಳಿಗೆ ಔಷಧಿ ಕೊಡುವ ಕೆಲಸ ಮಾಡುತ್ತಿದ್ದಾರೆ.ಬರವಣಿಗೆಯಲ್ಲಿ ಅಪಾರ ಶಕ್ತಿ ಅಡಗಿದ್ದು ಸಾಮಾಜಿಕ ಸುಧಾರಣೆಯಲ್ಲಿ ಪತ್ರಕರ್ತರ ಸೇವೆ ಮಹತ್ವದ್ದಾಗಿದೆ ಎಂದರು.
ಕುAಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಪತ್ರಿಕಾ ದಿನಾಚರಣೆ ಕಾರ್ಯಕ್ರಮಗಳನ್ನು ಎಲ್ಲರೂ ಮಾಡುತ್ತಾರೆ.ಬರೀ ಫೋಟೋಗಾಗಿ ಕಾರ್ಯಕ್ರಮ ಮಾಡುವುದಲ್ಲ.ಕಾರ್ಯಕ್ರಮವೇ ಫೋಟೋ ಆಗಬೇಕು.ಅಂತಹ ಕೆಲಸವನ್ನು ಧ್ವನಿ ಸಂಘಟನೆಯವರು ಕೈಗೊಂಡಿದ್ದಾರೆ.ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಬೇಕು ಎಂದರು.
ಸನ್ಮಾನಿತರ ಪರವಾಗಿ ಟಿವಿ5 ವಾಹಿನಿ ನಿರೂಪಕ ಸಂತೋಷ ರಾಠೋಡ ಮಾತನಾಡಿ, ಪತ್ರಕರ್ತರನ್ನು ಸಮಾಜದಲ್ಲಿ ಗೌರವದಿಂದ ಕಾಣುವ ಕೆಲಸ ಆಗಬೇಕು.ಸಮಾಜಕ್ಕೆ ಚಿಕಿತ್ಸೆ ಕೊಡುವ ಶಕ್ತಿ ಇರುವ ಪತ್ರಕರ್ತರಿಗೆ ತಮ್ಮ ವಯಕ್ತಿಕ ಬದುಕಿಗೆ ಭದ್ರತೆ ಕಂಡುಕೊಳ್ಳಲು ಹೆಣಗಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಪಿಎಸ್‌ಐ ಸಂಜಯ ತಿಪರೆಡ್ಡಿ,ಸಂಘಟನೆ ತಾಲ್ಲೂಕು ಅಧ್ಯಕ್ಷ ಶಂಕರ ಈ.ಹೆಬ್ಬಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾನಿಪ ಧ್ವನಿ ಜಿಲ್ಲಾ ಘಟಕದ ಅಧ್ಯಕ್ಷ ಮಹ್ಮದಯೂಸೂಫ್ ನೇವಾರ,ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ,ಗೃಹರಕ್ಷಕ ದಳದ ಘಟಕಾಧಿಕಾರಿ ಉಮೇಶ ಕಡಿ,ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್‌ನ ಮುಖ್ಯಸ್ಥ ಡಾ.ಸಿ.ಕೆ.ಶಿವಯೋಗಿಮಠ,ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಕಾಶೀಬಾಯಿ ರಾಂಪೂರ,ಕಾನಿಪ ಧ್ವನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ,ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ,ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಅಂಗಡಿ,ಅರಣ್ಯಾಧಿಕಾರಿ ಎಸ್.ಜೆ.ಸಂಗಾಲಕ,ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ,ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮಾರುತಿ ಹಿಪ್ಪರಗಿ,ಕಾರ್ಯಕಾರಿಣಿ ಸದಸ್ಯ ರವಿ ತೇಲಂಗಿ,ರವಿ ದಂಡಿನ,ಖಜಾAಚಿ ಹಣಮಂತ ನಲವಡೆ,ಬಿ.ಎಸ್.ಕುಂಟೋಜಿ.ಬಸಲಿAಗಪ್ಪ ಹೂಗಾರ,ಹಣಮಂತ ಚವ್ಹಾಣ,ಮುತ್ತು ಕನ್ನೂರ,ಸಾಮಾಜಿಕ ಕಾರ್ಯಕರ್ತರಾದ ರಾಜಶೇಖರ ಮ್ಯಾಗೇರಿ ಮತ್ತಿತರರು ಇದ್ದರು. ವಿಭಾಗೀಯ ಸೇವಾ ಪ್ರಶಸ್ತಿ ಪುರಸ್ಕೃತರಾದ ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾದ ಬುರಾನಸಾಬ ರುದ್ರವಾಡಿ,ಟಿವಿ5 ನಿರೂಪಕ ಸಂತೋಷ ರಾಠೋಡ,ವಿವಿಧ ಸಮಾಜದ ಸ್ಮಶಾನದಲ್ಲಿ ಸೇವೆ ಮಾಡುವ ಸೇವಾಕರ್ತರಿಗೆ ಸನ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತೀ ಹೆಚ್ಚು ಗಳಿಸಿದ ಮೂರು ಮಾಧ್ಯಮದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ಸAಗಮೇಶ ಶಿವಣಗಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.ಕಲಾವಿದ ಶ್ರೀಶೈಲ್ ಹೂಗಾರ ಸ್ವಾಗತಿಸಿದರು.ಟಿ.ಡಿ.ಲಮಾಣಿ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ ವಂದಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಈಚೇಗೆ ನಾಲತವಾಡದಲ್ಲಿ ಅಗಲಿದ ಪತ್ರಕರ್ತ ಉಮೇಶ ಆಲಕೊಪ್ಪರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
——
ಆರೋಗ್ಯ ಉಚಿತ ತಪಾಸಣೆ ಶಿಬಿರ:
ಮುದ್ದೇಬಿಹಾಳ ಪಟ್ಟಣದ ಶ್ರೀ ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್‌ನಲ್ಲಿ ರವಿವಾರ ಬೆಳಗ್ಗೆ ಪತ್ರಿಕಾ ದಿನಾಚರಣೆ ಅಂಗವಾಗಿ ಗೃಹರಕ್ಷಕ ದಳದ ಸಿಬ್ಬಂದಿಗೆ ಇಸಿಜಿ,ಆರ್.ಬಿ.ಎಸ್ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಾ.ಸಿ.ಕೆ.ಶಿವಯೋಗಿಮಠ ,ಶರಣು ಬೂದಿಹಾಳಮಠ ಸಂಚಾಲಕ ಮಹಾಂತೇಶ ಬೂದಿಹಾಳಮಠ ಮಾತನಾಡಿ, ಗೃಹರಕ್ಷಕ ದಳದ ಸಿಬ್ಬಂದಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳುವುದು ಸಮಾಜದ ಕಟ್ಟಕಡೆಯ ವರ್ಗವನ್ನು ಗುರುತಿಸಿದಂತಾಗಿದೆ ಎಂದರು.
ಈ ವೇಳೆ ಗೃಹರಕ್ಷಕ ದಳದ ಘಟಕಾಧಿಕಾರಿ ಉಮೇಶ ಕಡಿ,ಕಾನಿಪ ಧ್ವನಿ ತಾಲ್ಲೂಕಾಧ್ಯಕ್ಷ ಶಂಕರ ಹೆಬ್ಬಾಳ,ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ, ಹಣಮಂತ ನಲವಡೆ,ರವಿ ದಂಡಿನ,ಡೈಗ್ನೋಸ್ಟಿಕ್ ಸೆಂಟರ್‌ನ ಶಾಂತು ಶಿವಯೋಗಿಮಠ ಇದ್ದರು. ಇದೇ ವೇಳೆ ಗೃಹರಕ್ಷಕ ದಳದ ಸಿಬ್ಬಂದಿಗೆ ಆರ್.ಬಿ.ಎಸ್.,ಇಸಿಜಿ ಉಚಿತವಾಗಿ ತಪಾಸಣೆ ಮಾಡಲಾಯಿತು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು
ವಿದ್ಯಾರ್ಥಿಗಳು ಕಾನೂನು ಜ್ಞಾನ ಹೊಂದುವುದು ಅಗತ್ಯ: ಟಿ. ಗುರುರಾಜ