ವರದಿ;ಶರಣಪ್ಪ ಲೈನದ್ ಹಿರೇಮನ್ನಾಪೂರ
ಕುಷ್ಟಗಿ ಜು ೨೪
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ,ಉಪನ್ಯಾಸಕ ಡಾ ಹನುಮಂತಪ್ಪ ಹಂಡಗಿಯವರು ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನಾರಾಗಿದ್ದು.ಅವರ ನಿಧನಕ್ಕೆ ಕುಷ್ಟಗಿ ತಾಲೂಕಿನ ಸಾಹಿತಿಗಳು ,ಚಿಂತಕರು, ಬರಹಗಾರರು ,ಸಂಘಟನೆಯ ಪದಾಧಿಕಾರಿಗಳು ಕಂಬನಿ ಮಿಡಿದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಶರಣಪ್ಪ ವಡಗೇರಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ ಸಂಸ್ಥೆಗಳ ಪ್ರತಿನಿಧಿ ನಬಿಸಾಬ ಕುಷ್ಟಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಮಾಜಿ ಅಧ್ಯಕ್ಷ ನಟರಾಜ ಸೋನಾರ್,ರವಿಂದ್ರ ಬಾಕಳೆ, ಉಮೇಶ್ ಹಿರೇಮಠ, ಚಂದಪ್ಪ ಹಕ್ಕಿ, ಶ್ರೀನಿವಾಸ ಜಹಗೀರದಾರ,ಹನಮೇಶ ಗುಮಗೇರಿ, ಶರಣಪ್ಪ ಲೈನದ, ಸೇರಿದಂತೆ ಅನೇಕರು ದಿವಂಗತ ಡಾ ಹನುಮಂತಪ್ಪ ಹಂಡಗಿಯವರ ಒಡನಾಡಿಗಳಾಗಿ ಅವರನ್ನು ಸಮೀಪದಿಂದ ಕಂಡವರಾಗಿದ್ದು.
ಕೊಪ್ಪಳ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತನ್ನು ರಾಜ್ಯದಲ್ಲಿಯೇ ಅತ್ಯಂತ ಗಟ್ಟಿಗೋಳಿಸಿದ ಕೀರ್ತಿ ಅವರದು, ಹಲವಾರು ಯುವ ಕವಿ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಅವರಲ್ಲಿದ್ದ ಪ್ರತಿಭೆಗೆ ಅವಕಾಶ ನೀಡಿದ್ದ ಡಾ ಹನುಮಂತಪ್ಪ ಹಂಡಗಿಯವರ ನಿಧನ ದಿಂದಾಗಿ ಕೊಪ್ಪಳ ಜಿಲ್ಲೆಯ ಸಾಹಿತ್ಯ ಲೋಕ ಬಡವಾಗಿದೆ, ಅವರು ಸಾಕಷ್ಟು ಕ್ರಿಯಾಶೀಲರಾಗಿ ಜಿಲ್ಲಾ ಮಟ್ಟದಲ್ಲಿ ಸಮ್ಮೇಳನಗಳನ್ನು ಆಯೋಜಿಸಿದ್ದರು,ವಿವಿಧ ಕೃತಿಗಳು,ಹಲವಾರು ಸಂಪಾದನೆ ಪುಸ್ತಕಗಳನ್ನು ಹೊರತಂದಿರುವ ಅವರ ಸಾವು ನಮಗೆಲ್ಲ ನೋವು ತಂದಿದೆ ಎಂದು ಜನಪದ ಕಲಾವಿದ ಶರಣಪ್ಪ ವಡಗೇರಿ ಸ್ಮರಿಸಿದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು