December 23, 2024

ನಿವೃತ್ತ ನೌಕರರಿಗೆ ಬಿಳ್ಗೋಡಿಗೆ ಸಮಾರಂಭ.

 

 

ಗಂಗಾವತಿ

 

ವಯೋ ನಿವೃತ್ತಿಗೊಂಡ ಮರಳಿ ಗ್ರಾಪಂ ಕಾರ್ಯದರ್ಶಿಗಳು ಹಾಗೂ ತಾ.ಪಂ. ನಿಯೋಜಿತ ವಿಷಯ ನಿರ್ವಾಹಕರಾದ ಅಧಿಕಾರಿಗಳಾದ ವಿರುಪಾಕ್ಷಗೌಡ ಹಾಗೂ ಬಸಾಪಟ್ಟಣ ಗ್ರಾ.ಪಂ. ಕಾರ್ಯದರ್ಶಿಗಳಾದ ನಾಗೇಶ ಸಜ್ಜನ್ ಅವರ ಬೀಳ್ಕೊಡುಗೆ ಸಮಾರಂಭವನ್ನು ತಾಲೂಕು ಪಂಚಾಯತಿ ವತಿಯಿಂದ ಆಚರಿಸಲಾಯಿತು.

 

 

 

 

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀ ದೇವಿ ಅವರು ಮಾತನಾಡಿ, ಕಾರ್ಯದರ್ಶಿಗಳು ಹಾಗೂ ತಾ.ಪಂ. ವಿಷಯ ನಿರ್ವಾಹಕರಾದ ವಿರುಪಾಕ್ಷಗೌಡ ಹಾಗೂ ಬಸಾಪಟ್ಟಣ ಗ್ರಾ.ಪಂ. ಕಾರ್ಯದರ್ಶಿಗಳಾದ ನಾಗೇಶ ಸಜ್ಜನ್ ಅವರು ಆಡಳಿತ ಅವಧಿಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಆಡಳಿತ ನಿರ್ವಹಣೆಯಲ್ಲಿ ಶ್ರದ್ಧೆ ಮತ್ತು

ಪ್ರಾಮಾಣಿಕತೆ ಮೆರೆದಿದ್ದಾರೆ. ಮುಂದಿನ ನಿವೃತ್ತಿ ಸುಖಕರವಾಗಿರಲಿ ಎಂದು ಹಾರೈಸಿದರು.

 

ನಂತರ ನಿವೃತ್ತಿಗೊಂಡ ನೌಕರರಿಗೆ ವಯೋ ನಿವೃತ್ತಿ ಆದೇಶ ಪ್ರತಿಯನ್ನು ಮಾನ್ಯರು ನೀಡಿದರು.

 

ನಿವೃತ್ತಿಗೊಂಡ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ತಾ.ಪಂ. ಸಹಾಯಕ ನಿರ್ದೇಶಕರಾದ (ಗ್ರಾ.ಉ) ಮಹಾಂತಗೌಡ ಪಾಟೀಲ್ ಅವರು ಮಾತನಾಡಿ, ನಿವೃತ್ತಿಗೊಂಡ ನೌಕರರು ಸರಳ, ಸಜ್ಜನಿಕೆಗೆ ಹೆಸರಾಗಿದ್ದಾರೆ. ತಮ್ಮ ಕೆಲಸದಲ್ಲಿ ಪಾಮಾಣಿಕತೆ, ಬದ್ಧತೆ ಮೆರೆದಿದ್ದಾರೆ. ಎಲ್ಲ ನೌಕರರಿಗೂ ಮಾದೆ- ರಿಯಾಗಿದ್ದಾರೆ ಎಂದರು.

 

ಗಂಗಾವತಿ ತಾಪಂ ಯೋಜನಾಧಿಕಾ ರಿಗಳಾದ ಗುರುಪ್ರಸಾದ, ಕಾರಟಗಿ ತಾಪಂ ಯೋಜನಾಧಿಕಾರಿಗಳಾದ ರಾಘವೇಂದ್ರ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರಾಮು ನಾಯ್ಕ, ತಾಲೂಕು ಅಧ್ಯಕ್ಷರಾದ ಬಸವರಾಜಗೌಡ್ರು,

 

ತಾಪಂ ಅಧಿಕಾರಿಗಳು, ಸಿಬ್ಬಂದಿಗಳು, ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್ ಡಿಎ ಅವರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!