ಸಂಜಿವಿನಿ ಯೋಜನೆಯ GPLF ಸದಸ್ಯರಿಗೆ 03 ದಿನಗಳ ತರಬೇತಿ
ಕೊಪ್ಪಳ:-
ಗ್ರಾಮ ಪಂಚಾಯತಿಯಲ್ಲಿ ಸ್ಥಾಪಿಸಲಾದ ಘನತ್ಯಾಜ್ಯ ನಿರ್ವಹಣೆಯಲ್ಲಿ ಸಂಜಿವಿನಿ ಒಕ್ಕೂಟ ಸದಸ್ಯರ ಪಾತ್ರ ಬಹು ಮುಖ್ಯವೆಂದು ಜಿಲ್ಲಾ ಪಂಚಾಯತ ಮಾನ್ಯ ಉಪಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತೊದಲಬಾಗಿ ಕರೆ ನೀಡಿದರು.
ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ ಮೈಸೂರು ಮತ್ತು ಜಿಲ್ಲಾ ಪಂಚಾಯತ ಕೊಪ್ಪಳ ಸಹಯೋಗದಲ್ಲಿ ವತಿಯಿಂದ ಸುಸ್ಥಿರ ನಡೆ ಸ್ವಚ್ಛತೆ ಕಡೆ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ನಿರತರಾದ ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಕೊಪ್ಪಳ ತಾಲೂಕ ಪಂಚಾಯತಿ ಆವರಣದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 03 ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ನಿತ್ಯ ಕೆಲಸದಲ್ಲಿ ನಿರತರಾದ ಸಂದರ್ಭದಲ್ಲಿ ನಿಮಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ನಿರ್ವಹಿಸಿದಲ್ಲಿ ಕಸವನ್ನು ರಸವನ್ನಾಗಿ ಮಾಡಬಹುದು. ನಿಮ್ಮ ಕೆಲಸವು ಸಣ್ಣ ಕೆಲಸ ಎಂಬ ತಾತ್ಸಾರ ಮನೋಭಾವನೆ ಹೊಂದದೇ ಮುನ್ನುಗ್ಗಿ ಕಸ ನಿರ್ವಹಣೆ ಮಾದರಿ ಗ್ರಾಮ ಪಂಚಾಯತನ್ನಾಗಿ ನಿರ್ಮಿಸಿದಲ್ಲಿ ನಿಮ್ಮಗಳ ಕೊಡುಗೆ ಅವಿಸ್ಮರಣೀಯವಾದದು. ಆದ್ದರಿಂದ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಕಸ ನಿರ್ವಹಣೆ ಸಮಸ್ಯೆ ನಿವಾರಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣಾಭಿವೃದ್ದಿ ತರಬೇತಿಯ ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಭೀಮಣ್ಣ ಹಾವಳಿ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಕನಕಗಿರಿ, ಕಾರಟಗಿ ತಾಲೂಕಿನ ಸಂಜೀವಿನಿ ಸಂಘದ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು