December 23, 2024

ಡಾ.ಷಣ್ಮುಖಯ್ಯ ತೋಟದಗೆ ಕಲಾ ವಿಭೂಷಣ ಪ್ರಶಸ್ತಿ

ಕೊಪ್ಪಳ :
ತಾಲೂಕಿನ ಮೈನಹಳ್ಳಿ ಗ್ರಾಮದ ಕವಿ ಡಾ. ಷಣ್ಮುಖಯ್ಯ ತೋಟದರವರು ಕಳೆದ ನಾಲ್ಕು ದಶಕಗಳಿಂದ ರಂಗಭೂಮಿ ,ಸಾಹಿತ್ಯದಲ್ಲಿ ಸಲ್ಲಿಸಿದ ಸಾಧನೆಯನ್ನು ಗುರುತಿಸಿ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ) ಬ್ಯಾಕೂಡ ತಾ!! ರಾಯಭಾಗ ಇವರು ಕನ್ನಡ ಗಂಡು ಮೆಟ್ಡಿನ ನಾಡು ಚಾಲುಕ್ಯರ ಬೀಡಿನಲ್ಲಿ ದಿ:-23.06.24 ರ ಡಾ. ಬಿ.ಎಸ್. ಗದ್ದಿಗಿಮಠ ವೇದಿಕೆಯ ಕನ್ನಡ ಸಾಹಿತ್ಯ ಭವನ ಬಾದಾಮಿ ಸಭಾಂಗನದಲ್ಲಿ” ಕಲಾ ವಿಭೂಷಣ ರಾಜ್ಯ ಪ್ರಶಸ್ತಿ” ನೀಡಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಪ.ಪೂ ಶ್ರೀ . ಡಾ. ಕಾಲಜ್ಞಾನ ಬ್ರಹ್ಮಸದ್ಗರು ಶರಣಬಸವ ಮಹಾಸ್ವಾಮಿಗಳು ಗಜೇಂದ್ರಗಡ ವಹಿಸಿದ್ದರು. ಮತ್ತು
ಪ.ಪೂ.ಡಾ. ವೀರಯ್ಯ ಮಹಾಸ್ವಾಮಿಗಳು ಹಾಗು
ಪ.ಪೂ.ಶ್ರೀ . ಕೈಲಾಸಪತಿ ಮಹಾಸ್ವಾಮಿಗಳು ಹಾಗು
ಸಾನಿಧ್ಯ ವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು
ಸಿದ್ರಾಮ .ಎಮ್‌.ನಿಲಜಗಿ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ತಗಳಲ್ಲಿ ಸಾಧನೆಗೈದ ಅನೇಕ ಶಾದಕರನ್ನು ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!