December 23, 2024

ಎಡೆಗಡ್ಡಿ ಹೊಡೆಯಲು ಸೈಕಲ್ ಮಿಷಿನ್‌ ಯಂತ್ರಕ್ಕಾಗಿ ರೈತರ ಪರದಾಟ

ಎಡೆಗಡ್ಡಿ ಹೊಡೆಯಲು ಸೈಕಲ್ ಮಿಷಿನ್‌ ಯಂತ್ರಕ್ಕಾಗಿ ರೈತರ ಪರದಾಟ

ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಭಾಗದ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು ಶೀಂಗಾ ಇತರೇ ಬೆಳೆಗಳನ್ನು ಬಿತ್ತನೆ ಮಾಡಿದ್ದು

ತಾಲೂಕಿನ ರೈತರು ಬಿತ್ತನೆ ಮಾಡಿದ ಹೆಸರು ಬೆಳೆಯಲ್ಲಿ ಕಸ ಬಿದ್ದಿದೆ ಕಸ ಸ್ವಚ್ಛಗೊಳಿಸಲು ರೈತರಿಗೆ ಎಡೆಗಡ್ಡಿ ಹೋಡೆಯುವ ಸೈಕಲ್ ಮಿಷಿನ್‌ ಯಂತ್ರದ ಅವಶ್ಯಕತೆ ಇದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಸೈಕಲ್ ಯಂತ್ರ
ಸಿಗುತ್ತಿಲ್ಲ ಈ ಸೈಕಲ್ ಯಂತ್ರ ಸಿಗದೇಇದ್ದಕಾರಣ

ರೈತರು ಇಗ ಎಡೆಗಡ್ಡಿ ಹೋಡೆಯುವ ಅಬ್ಬರದಲ್ಲಿ ಇದ್ದಂತ ರೈತರು ಸೈಕಲ್ ಮಿಷಿನ್‌ ಯಂತ್ರವನ್ನು ತರಲೇಬೇಕು ಎನ್ನುವ ಛಲದಿಂದ ರೈತರು ತಾಲೂಕ ಕೇಂದ್ರಕ್ಕೆ ಹೋದರು ಸಹ

ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಅಲಿದಾಡಿದರು ಕೂಡ ಅಧಿಕಾರಿಗಳ ನಿರ್ಲಕ್ಷದಿಂದ ಈ ಎರಡು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಎಡೆಗಡ್ಡಿ ಹೋಡೆಯುವ ಸೈಕಲ್ ಮಿಷಿನ್‌ ಯಂತ್ರ ಸಿಗುತ್ತಿಲ್ಲ ಈ ಸೈಕಲ್ ಎಡೆಕುಂಟೆಯಂತ್ರ ಇಲ್ಲದೇ ಕಾರಣ ರೈತರು

ಪಕ್ಕದ ಗದಗ ಜಿಲ್ಲೆಯ ರೋಣ ತಾಲೂಕಿನ ನೆರೇಗಲ್ಲ್ ಪಟ್ಟಣಕ್ಕೆ ನೂರಾರು ರೈತರು ಹೋಗಿ ಎಡೆಗಡ್ಡಿ ಹೋಡೆಯುವ ಸೈಕಲ್ ಎಡೆಕುಂಟೆಯಂತ್ರವನ್ನು ತಂದಿದ್ದೇವೆ ಎಂದು ಚಿಕ್ಕೆನಕೊಪ್ಪದ ರೈತ ಮಂಜುನಾಥ್ ಮಾಟರಂಗಿ ಇವರು ಆಕ್ರೋಶ ವ್ಯಕ್ತಪಡಿಸಿದರು

ಕುಕನೂರು ತಾಲೂಕಿನ ಭಾಗದ ರೈತರ ಜಮೀನಿನಲ್ಲಿ ಎಡೆಕುಂಟೆ ಹೊಡೆಯಲು ಮತ್ತು ಇತರ ಕೃಷಿ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಳ್ಳಿಗಳಲ್ಲಿ ಎತ್ತುಗಳು ದೊರಕುತ್ತಿಲ್ಲ. ದೊರತೆರೂ ಸಹ ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಹಣ ಕೊಟ್ಟರೂ ಸಹ ಸರಿಯಾದ ಸಮಯಕ್ಕೆ ರೈತರ ಜಮೀನಿಗೆ ಎತ್ತುಗಳು ಬರುವುದಿಲ್ಲ ಇದರಿಂದಾಗಿ ರೈತಾಪಿ ಜನ ಬೇಸತ್ತು ಸೈಕಲ್ ಮಿಷಿನ್‌ ಯಂತ್ರವನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹರೀಶ್ ಹೋಕ್ಕಳದ ಹಾಗೂ ಬಸವರಾಜ ಇತರರು ಆಗ್ರಹಿಸಿದರು

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!