ಭಾರತೀಯ ಜನತಾ ಪಾರ್ಟಿ ಕೊಪ್ಪಳ ವತಿಯಿಂದ ದಲಿತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರವೂ ವಾಲ್ಮೀಕಿ ನಿಗಮದಲ್ಲಿ ಮಾಡಿರುವ 187 ಕೋಟಿ ರೂಪಾಯಿಗಳ ಹಗರಣವನ್ನೂ ಖಂಡಿಸಿ ಇಂದು ಕೊಪ್ಪಳ ನಗರದ ಅಶೋಕ್ ವೃತ್ತದಿಂದ ಜಿಲ್ಲಾ ಪ್ರಮುಖರೊಂದಿಗೆ ಹಾಗೂ 5000ಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಜಿಲ್ಲಾ ಆಡಳಿತ ಭವನದ ಎದುರುಗಡೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಈ ವೇಳೆ ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಗುಳಗಣ್ಣನವರ ಮಾತನಾಡಿ ರಾಜ್ಯ ಸರ್ಕಾರ ಹಗರಣ ಮಾಡಿ ಆ ಹಣವನ್ನು ಹೊರ ರಾಜ್ಯಗಳಿಗೆ ಅಕ್ರಮವಾಗಿ ಕಳುಹಿಸಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಳಸಿಕೊಂಡಿದೆ. ಅಧಿಕಾರಿಗಳ ಮೇಲೆ ಈ ಪ್ರಕರಣದ ಆರೋಪ ಹೊರಿಸಿ ಈ ಸರ್ಕಾರ ಬಚಾವಾಗಲು ಯತ್ನಿಸುತ್ತಿದೆ.
ನಮ್ಮನ್ನು ಹಾಗೂ ಕಾರ್ಯಕರ್ತರನ್ನೂ ಬಂಧಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನೂ ಪೊಲೀಸ್ ಇಲಾಖೆ ಮಾಡುತ್ತಿದೆ, ಪೊಲೀಸ್ ಇಲಾಖೆಯು ದಯವಿಟ್ಟು ರಾಜ್ಯ ಸರ್ಕಾರದ ಮಾತನ್ನು ಕೇಳದೆ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಲು ಅವಕಾಶ ನೀಡಬೇಕಿದೆ.
ರಾಜ್ಯ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಮೊತ್ತವನ್ನು ತೆಲಂಗಾಣ ರಾಜ್ಯದ 9 ಕಂಪೆನಿಗಳ ಹೆಸರಿನಲ್ಲಿ ವರ್ಗಾವಣೆ ಮಾಡಿ ಲೋಕಸಭಾ ಚುನಾವಣೆಗೆ ಬಳಸಿಕೊಂಡಿರುವುದು ರಾಜ್ಯದ ಜನತೆಗೆ ಮಾಡಿದ ಅನ್ಯಾಯವಾಗಿದ್ದು ಇದರ ಹೊಣೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ಸರ್ಕಾರವನ್ನು ವಿಸರ್ಜಿಸಬೇಕು ಎಂದು ತಾಕೀತು ಮಾಡಿದರು.
ನಂತರ ಗಂಗಾವತಿ ಶಾಸಕ ಗಾಲಿ ಜನರ ರೆಡ್ಡಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದಲೂ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿಗಳ ಮೊತ್ತವನ್ನು ಪಕ್ಕದ ತೆಲಂಗಾಣ ರಾಜ್ಯಕ್ಕೆ ಲೋಕಸಭಾ ಚುನಾವಣೆಯ ನಿಮಿತ್ತವಾಗಿ ಅಕ್ರಮವಾಗಿ ವರ್ಗಾವಣೆ ಮಾಡಿ ರಾಜ್ಯ ಜನತೆಗೆ ಅನ್ಯಾಯ ಮಾಡಿದೆ.
ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಣವನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ನೇಪ ಮಾತ್ರಕ್ಕೆ ಅಧಿಕಾರಿಗಳ ತೆಲೆದಂಡ ಮಾಡುತ್ತಿರುವುದು ರಾಜ್ಯ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಯತ್ನ ನಡೆಸುತ್ತಿದೆ.
ಈ ಸರ್ಕಾರದ ಆಡಳಿತವು ರಾಜ್ಯದ ಜನತೆಯನ್ನು ಕೈಂಗೆಡಿಸಿದ್ದು, ಈ ಸರ್ಕಾರಕ್ಕೆ ಜನತೆ ಇಡೀ ಶಾಪ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ,ಹಗ್ಗ ಜಗ್ಗಾಟ, ಕಸರತ್ತು ನಡೆಯುತ್ತಿದ್ದು ಒಬ್ಬರ ಮೇಲೊಬ್ಬರು ಗುಂಪುಗಾರಿಕೆ ನಡೆಸುತ್ತಿದ್ದಾರೆ. ಸದ್ಯದರಲ್ಲೇ ಈ ಸರ್ಕಾರ ಸ್ವಪಕ್ಷಿಯ ನಾಯಕರಿಂದಲೇ ಉರಳಲಿದ್ದು, ರಾಜ್ಯದ ಜನತೆ ಇವರ ಆಡಳಿತದಿಂದ ಮುಕ್ತಗೊಳ್ಳಲಿದೆ ಎಂದರು.
ಈ ಸಂಧರ್ಭದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ್ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಡಾ. ಬಸವರಾಜ್ ಕ್ಯಾವಟರ್ ಪಾಟೀಲ್,ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ , ಮಾಜಿ ಶಾಸಕರುಗಳಾದ ಶ್ರೀ ಬಸವರಾಜ ಧಡೆಸೂಗೂರ್, ಶ್ರೀ ಪರಣ್ಣ ಮುನವಳ್ಳಿ ಪಕ್ಷದ ಹಿರಿಯ ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜೊತೆಗಿದ್ದರು
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು