December 23, 2024

ತಾಲೂಕಿನ ಹಿರೇಮನ್ನಾಪೂರು ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ಹಿರೇಮನ್ನಾಪೂರು ಗ್ರಾಮ ಘಟಕದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು

ಕುಷ್ಟಗಿ
ಗ್ರಾಮದ ಸಾರ್ವಜನಿಕ ಆಸ್ಪತ್ರೆಯಿಂದ ಕಾಲ್ನಡಿಗೆ ಜಾಥಾ ಮುಖಾಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು ಇದರಿಂದ ಕೆಲವೊತ್ತು ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿತ್ತು.

ಗ್ರಾಮಸ್ಥರ ವಿವಿಧ ಬೇಡಿಕೆಗಳಾದ ಹಿರೇಮನ್ನಾಪೂರ ಗ್ರಾಮವನ್ನು ಕೇಂದ್ರವಾಗಿಟ್ಟುಕೊAಡು ಕಂದಾಯ ಹೋಬಳಿಯನ್ನು ರಚಿಸುವುದು. ಗ್ರಾಮ ವ್ಯಾಪ್ತಿಯಲ್ಲಿ ಸೋಲಾರ್ ಮತ್ತು ಪವನ ವಿದ್ಯುತ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರ ಸಹಾಯವನ್ನು ಪಡೆದು ಗ್ರಾಮದ ಮುಖ್ಯರಸ್ತೆಗೆ ಬೀದಿ ದೀಪಗಳನ್ನು ಅಳವಡಿಸಬೇಕು. ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಕುಷ್ಟಗಿ-ಸಿಂಧನೂರು ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿ ಪಡಿಸಬೇಕು.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ್ದಕ್ಕೆ, ವಿವಿಧ ಕಡೆ ರಸ್ತೆಗೆ ತ್ಯಾಜ್ಯ ನೀರು ಹರಿದು ಬರುತ್ತಿದ್ದು, ಇದರಿಂದಾಗಿ ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿದೆ. ಈ ಬಗ್ಗೆ ಗ್ರಾಮಪಂಚಾಯತಿಯವರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಗ್ರಾಮಪಂಚಾಯತಿ ಅಧೀನದಲ್ಲಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಗ್ರಂಥಾಲಯವು ಪ್ರಸ್ತುತ ಹಳೆಯ ಕಟ್ಟಡದಲ್ಲಿ ಇದ್ದು, ಮಳೆ ಬಂದಾಗ ಕಟ್ಟಡ ಸೋರುತ್ತಿದ್ದು ಓದುಗರಿಗೆ ತೊಂದರೆಯಾಗಿದೆ ಮತ್ತು ಪುಸ್ತಕಗಳು ಮಳೆನೀರಿನಿಂದ ತೊಯ್ದು ಹಾಳಾಗುತ್ತಿವೆ. ಸದರಿಗ್ರಂಥಾಲಯವನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಕೈಗೊಳ್ಳಬೇಕು. ಗ್ರಾಮದ ಬಸ್‌ನಿಲ್ದಾಣದ ಪಕ್ಕದಲ್ಲಿ ಇರುವ ಶೌಚಾಲಯವನ್ನು ಹೈಟೆಕ್ ಶೌಚಾಲಯವನ್ನಾಗಿ ಮೇಲ್ದರ್ಜೆಗೇರಿಸುವುದು. ಸದರಿ ಶೌಚಾಲಯವು ಶಿಥಿಲಗೊಂಡಿದೆ. ಮಹಿಳೆಯರು ಮತ್ತು ಮರುಷರಿಗೆ ಪ್ರತ್ಯೇಕ ಶೌಚಾಲಯ ಇದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಗ್ರಾಮದಲ್ಲಿ ತ್ಯಾಜ್ಯನೀರು ಅಲ್ಲಲ್ಲಿ ಮಡುಗಟ್ಟಿ ನಿಂತು ಅನಾರೋಗ್ಯ ವಾತಾವರಣ ನಿರ್ಮಾಣವಾಗಿದೆ. ತ್ಯಾಜ್ಯನೀರು ಸರಾಗ ಹರಿದು ಹೋಗಲು ವ್ಯವಸ್ಥೆ ಮಾಡುವುದರ ಜೊತೆಗೆ ಬ್ಲೀಚಿಂಗ್ ಪೌಡರ್ ಹಾಕುವ ಹಾಗೂ ಸೊಳ್ಳೆಗಳ ಉಪಟಳ ತಡೆಯಲು ಡಿಡಿಟಿ ಸಿಂಪಡಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಆಸುರಕ್ಷಿತ ಜಾಗದಲ್ಲಿ ಇರುವ ವಿದ್ಯುತ್ ಪರಿವರ್ತಕವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಹಿರೇಮನ್ನಾಪೂರ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಅಸಮರ್ಪಕವಾಗಿವೆ. ಅನೇಕ ಕಡೆ ನಲ್ಲಿಗಳನ್ನು ಅಳವಡಿಸಿಲ್ಲ. ಪೈಪ್‌ಲೈನ್ ಕಾಮಗಾರಿಯು ಕಳಪೆಯಾಗಿದ್ದು, ಯೋಜನೆಯಂತೆ ಆಳವಾಗಿ ಪೈಪ್ ಗಳನ್ನು ಅಳವಡಿಸುವ ಬದಲಿಗೆ ಮೇಲ್ಬಾಗದಲ್ಲಿಯೇ ಅಳವಡಿಸಲಾಗಿದೆ. ಪೈಪ್ ಲೈನ್ ಅಳವಡಿಕೆಗಾಗಿ ಅಗೆದಿರುವ ರಸ್ತೆಯನ್ನು ಮೂಲ ಸ್ಥಿತಿಗೆ ತಂದಿರುವುದಿಲ್ಲ. ಪೈಪ್‌ಲೈನ್‌ಗೆ ಅಗೆದ ಮಣ್ಣನ್ನು ಮುಚ್ಚಿಲ್ಲ ಮತ್ತು ಸಿಸಿ ರಸ್ತೆ ಹೊಡೆದಿದ್ದು, ದುರಸ್ತಿಗೊಳಿಸಿರುವುದಿಲ್ಲ. ಜಲಜೀವನ ಮಿಷನ್ ಯೋಜನೆಯಡಿ ನಿರಂತರವಾಗಿ ನೀರು ಸರಬರಾಜು ಆಗುತ್ತಿಲ್ಲ. ಪೈಪ್‌ಲೈನ್ ಅಲ್ಲಲ್ಲಿ ಸೋರಿಕೆಯಾಗಿ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೇ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಗ್ರಾಮದ ವಿವಿಧ ಕಡೆ ರಸ್ತೆ ಮೇಲೆಯೇ ಕಸದ ರಾಶಿ ಎದ್ದು ಕಾಣುತ್ತಿದೆ. ಸರಕಾರ ಪ್ರತಿ ಗ್ರಾಮಪಂಚಾಯತಿಗೂ ಕಸವಿಲೇವಾರಿ ಘಟಕವನ್ನು ಮಂಜೂರು ಮಾಡಿದ್ದರೂ ಗ್ರಾಮದಲ್ಲಿನ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಗ್ರಾಮದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳಿದ್ದು, ಅವರು ಅಭ್ಯಾಸಮಾಡಲು ಸರಿಯಾದ ಕ್ರೀಡಾಂಗಣದ ವ್ಯವಸ್ಥೆ ಇಲ್ಲ. ಗ್ರಾಮ ವ್ಯಾಪ್ತಿಯಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಪ್ರಾಥಮಿಕ ಶಾಲೆ ಸುತ್ತ ಕೊಳಚೆ ಇದೆ.

ತೆರವುಗೊಳಿಸಬೇಕು. ಗ್ರಾಮದ ಸರಕಾರಿ ಮಾದರಿ ಹಿರಿಯ ದುರಸ್ತಿಗೊಳಿಸಿ ಮಕ್ಕಳಿಗೆ ಮೈದಾನದ ವ್ಯವಸ್ಥೆ ಮಾಡಬೇಕು.
ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತ ಕೊಳಚೆ ಇದೆ. ತೆರವುಗೊಳಿಸಬೇಕು. ಸುತ್ತ ಇರುವ ಹಳೆಯ ಕಟ್ಟಡಗಳನ್ನು ದುರಸ್ತಿಗೊಳಿಸಿ ಮಕ್ಕಳಿಗೆ ಮೈದಾನದ ವ್ಯವಸ್ಥೆ ಮಾಡಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಗ್ರಾಮದ ಶಾಲೆಯಲ್ಲಿ ದೈಹಿಕ ಶಿಕ್ಷಕ ಹುದ್ದೆ ಬಹಳ ದಿನಗಳಿಂದ ಖಾಲಿ ಇದ್ದು, ಕೂಡಲೇ ದೈಹಿಕ ಶಿಕ್ಷಕರನ್ನು ನಿಯೋಜನೆ
ಮಾಡಬೇಕು. ಗ್ರಾಮಕ್ಕೆ ಸರಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ವಸತಿ ಶಾಲೆಯ ಅಗತ್ಯವಿದ್ದು, ಈ ಬಗ್ಗೆ ಸರಕಾರಕ್ಕೆ ಇದೇ ವರ್ಷ ಪ್ರಸ್ತಾವನೆಯನ್ನು ಸಲ್ಲಿಸಬೇಕು.ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆಯ ಕೊರತೆ ಇದೆ. ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು. ಆರೋಗ್ಯ ಕೇಂದ್ರದಲ್ಲಿ ಸೇರಿದಂತೆ, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಹಾಜರಾಗದೇ, ರೋಗಿಗಳು ಕಾಯಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಗ್ರಾಮಗಳು ಬರುತ್ತಿದ್ದು, ಸದರಿ ಕೇಂದ್ರಕ್ಕೆ ಒಂದು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಬೇಕು. ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ರಕ್ತ ಪರೀಕ್ಷೆ ಮತ್ತು ಉಳಿದ ಪರೀಕ್ಷೆಗಳನ್ನು ರೋಗಿಗಳು ಹೊರಗಡೆ ಮಾಡಿಸಿಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಪ್ರಯೋಗಾಲಯಕ್ಕೆ ಅಗತ್ಯ ಪರಿಕರಗಳನ್ನು ಆರೋಗ್ಯ ಇಲಾಖೆಯಿಂದ ಪೂರೈಸಬೇಕು. ಆರೋಗ್ಯ ಕೇಂದ್ರಕ್ಕೆ ಅಗತ್ಯ ಔಷಧ ಸರಬರಾಜು ಆಗುತ್ತಿಲ್ಲ. ವೈದ್ಯರು ಹೊರಗಡೆ ಔಷಧ ಚೀಟಿಯನ್ನು ಬರೆಯುತ್ತಾರೆ. ಆರೋಗ್ಯ ಕೇಂದ್ರಕ್ಕೆ ಇನ್ನೊಬ್ಬ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು. ಹಿರೇಮನ್ನಾಪೂರ ಗ್ರಾಮಕ್ಕೆ ೧೧೬ವಿ ಸ್ಟೇಶನ್ ಮಂಜೂರಾಗಿದ್ದು, ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ಗ್ರಾಮದ ಮನೆಗಳ ಮೇಲಿನಿಂದ ವಿದ್ಯುತ್ ತಂತಿಗಳು ಹಾದು ಹೋಗಿವೆ. ಮತ್ತು ಅವುಗಳು ಗಾಳಿಗೆ ನೇತಾಡುತ್ತಿದ್ದು, ಅಪಾಯಕಾರಿ ಸ್ಥಿತಿಯಲ್ಲಿವೆ. ಮನೆಗಳ ಮೇಲೆ ಇರುವ ವಿದ್ಯುತ್ ತಂತಿಗಳನ್ನು ರಸ್ತೆ ಬದಿಗೆ ಸ್ಥಳಾಂತರಿಸಬೇಕು. . ಹೊಸ ಕಂಬಗಳನ್ನು ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರ ಶೃತಿ ಎಂ ಮಳ್ಳಪ್ಪಗೌಡರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಕರವೇ ತಾಲೂಕಾ ಗೌರವಾಧ್ಯಕ್ಷ ಆದಪ್ಪ ಉಳ್ಳಾಗಡ್ಡಿ, ತಾಲೂಕಾ ಅಧ್ಯಕ್ಷ ಪ್ರಕಾಶ ಮನ್ನೆರಾಳ, ಉಪಾಧ್ಯಕ್ಷ ಚನ್ನಪ್ಪ ನಾಲಗಾರ, ಗ್ರಾಮ ಘಟಕದ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ, ಪಂಪಣ್ಣ ಹಡಪದ, ಮರಿಯಪ್ಪ ಮುಳ್ಳೂರು, ಮಂಜುನಾಥ ಕಜ್ಜಿ, ಹುಸೇನಪ್ಪ ಕೊಳೂರು, ಕಿರಣ ಕೊನ್ನೂರು, ಬಸವರಾಜ ಕತ್ತಿ, ಉಮೇಶ ವಡ್ಡರ, ಮಹಾಂತೇಶ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಇದ್ದರು.

ವರದಿಗಾರರು ಶರಣಪ್ಪ ಲೈನದ್ ಹೀರೆಮನ್ನಾಪುರ ಕುಷ್ಟಗಿ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!