December 23, 2024

ವಿಕಲಚೇತನರಲ್ಲ ವಿಶೇಷಚೇತನರು: ಸಿಡಿಪಿಒ ಕುಷ್ಟಗಿ 


ಕುಷ್ಟಗಿ: ವಿಕಲಚೇತನರಿಗೆ ವಿಕಲಚೇತನ ಪದದ ಬದಲು ವಿಶೇಷ ಚೇತನ ಪದ ಬಳಸುವುದು ಕಾನೂನು ಬದ್ಧ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹೇಳಿದರು.
ಅವರು ತಾಲೂಕು ಪಂಚಾಯಿತಿಯಲ್ಲಿ ಜಿಲ್ಲಾ ವಿಶೇಷಚೇತನ ಇಲಾಖೆ, ಅಲಿಂಕೋ ಸಂಸ್ಥೆ ಬೆಂಗಳೂರು ಹಾಗೂ ಶಿವಶಕ್ತಿ ಗ್ರಾಮೀಣ ವಿವಿಧೋದ್ದೇಶ ಸೇವಾ ಸಂಸ್ಥೆ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಿಕಲಚೇತನರಿಗೆ ಮತ್ತು ಹಿರಿಯನಾಗರಿಕರಿಗೆ ಸಾಧನಾ ಸಲಕರಣಾ ಮೌಲ್ಯಮಾಪನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇಷ ಚೇತನರ ಸೇವಾ ಕಾರ್ಯ ಮಾಡುವುದು ದೇವರ ಸೇವೆ ಮಾಡಿದ್ದಕ್ಕಿಂತ ಹೆಚ್ಚು, ವಿಕಲಚೇತನ ಇಲಾಖೆ ಹಾಗೂ ವಿವಿಧ ಸಂಸ್ಥೆಯವರು ಇಂದು ಆಯೋಜಿರುವ ಸಾಧನಾ ಸಲಕರಣೆ ಶಿಬಿರದ ಸದುಪಯೋಗ ಪಡಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಪುನರ್ವಸತಿ ಯೋಜನಾ ಜಿಲ್ಲಾ ನಿರ್ದೇಶಕ ಟೇಕ್ ರಾಜ್ ಅಲಿಂಕೋ ಸಂಸ್ಥೆ ಯವರು ನೀಡುವ ಸಾಧನಾ ಸಲಕರಣೆಗಳು ತುಂಬಾ ಗುಣಮಟ್ಟದಿಂದ ಕೂಡಿರುತ್ತವೆ ಸೂಕ್ತ ದಾಖಲೆಗಳನ್ನು ನೀಡಿ ಸಾಧನಾ ಸಲಕರಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಚಂದ್ರಶೇಖರ ಹಿರೆಮನಿ ಮಾತನಾಡಿದರು.
ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುವರ್ಣಮ್ಮ ಅಲಿಂಕೋ ಸಂಸ್ಥೆ ಪದಾಧಿಕಾರಿಗಳು, ವೈದ್ಯಕೀಯ ಮಂಡಳಿ,ಶಿವ ಶಕ್ತಿ ಗ್ರಾಮೀಣ ವಿವಿಧೋದ್ದೇಶ ಸೇವಾ ಸಂಸ್ಥೆ ಅಧ್ಯಕ್ಷ ನಾಗರಾಜ ಮೇಲಿನ ಮನಿ , ಪುನರ್ವಸತಿ ಕಾರ್ಯಕರ್ತರಾದ ಆದಪ್ಪ ಮಾಲಿಪಾಟೀಲ, ಚಂದ್ರಶೇಖರ ಕುಂಬಾರ, ರಾಯನಗೌಡ ಶಿವಯ್ಯ ಗದ್ದಡಕಿ, ಹುಲಿಗೆಮ್ಮ, ದಾವಲಬಿ ಸೇರಿದಂತೆ ತಾಲೂಕಿನ ವಿಶೇಷ ಚೇತನರು, ಹಿರಿಯ ನಾಗರಿಕರು ಭಾಗವಹಿಸಿದ್ದರು.

ವರದಿಗಾರರು ಶರಣಪ್ಪ ಲೈನದ್ ಹೀರೆಮನ್ನಾಪುರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!