December 23, 2024

ಮಧ್ಯದ ಅಂಗಡಿ ತೆರೆಯದಂತೆ ಮಹಿಳೆಯರಿಂದ ಗ್ರಾಮ ಪಂಚಾಯತಿ ಮುತ್ತಿಗೆ

 

ಕುಕನೂರು :

ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ಸಿಮಾದಲ್ಲಿ ಮಧ್ಯದ ಅಂಗಡಿ ತೆರೆಯದಂತೆ ಮಹಿಳೆಯರಿಂದ ಇಟಗಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.ಬಾರ್ ಅಂಗಡಿ ತೆರೆಯುವುದನ್ನು ವಿರೋಧಿಸಿ ಸ್ಥಳೀಯ ಇಟಗಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆಯರು
ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ಸೀಮೆಯಲ್ಲಿ ಹೊಸದಾಗಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಬಾರ್ ಲೈಸೆನ್ಸ್ ದಾರರು ಹೊರಟಿದ್ದು ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಕೂಡ ಮಧ್ಯದ ಅಂಗಡಿಯನ್ನು ತೆರೆಯಲು ಗ್ರಾಮದ ಮಹಿಳೆಯರು ಬಿಡುವುದಿಲ್ಲ.

ಮಂಡಲಗೇರಿ ಗ್ರಾಮದಿಂದ ಗೊರ್ಲೆಕೊಪ್ಪ ಕಡೆಗೆ ಬರುವ ದಾರಿಯಲ್ಲಿ ಹೊಸದಾಗಿ ಬಾರ್ ಅಂಗಡಿಗೆ ಕುಕನೂರು ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ಲೈಸೆನ್ಸ್ ಪಡೆದಿದ್ದು ಗೊರ್ಲೆಕೊಪ್ಪದಂತಹ ಸಣ್ಣ ಹಳ್ಳಿಯ ಹತ್ತಿರ ಮದ್ಯದ ಅಂಗಡಿ ತೆರೆಯಲು ಪ್ರಯತ್ನ ನಡೆಸಿದ್ದಾರೆ. ಇದನ್ನು ಮನಗಂಡಿರುವ ಗ್ರಾಮದ ಮಹಿಳೆಯರು ಯಾವುದೇ ಕಾರಣಕ್ಕೆ ಗೊರ್ಲೆಕೊಪ್ಪ ಗ್ರಾಮದ ಸಿಮಾದಲ್ಲಿ ಬಾರ್ ಅಂಗಡಿ ತೆರೆಯಲು ಬಿಡುವುದಿಲ್ಲ, ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವೆ. ಅಗತ್ಯ ಬಿದ್ದರೆ ಹೆಚ್ಚಿನ ಹೋರಾಟ ಮಾಡುತ್ತೇವೆ ಎಂದು ಮಹಿಳೆಯರು ಎಚ್ಚರಿಸಿದ್ದಾರೆ.


ಈ ಸಂದರ್ಭದಲ್ಲಿ ಮಹಿಳೆಯರಾದ ಪಾರಮ್ಮ ಪೊಲೀಸ್ ಪಾಟೀಲ್, ಶಶಿಕಲಾ ಬಿನ್ನಾಳ್, ರತ್ಮಮ್ಮ ಪಾಟೀಲ್, ಗಂಗಮ್ಮ ಜೂಲ್ಪಿ, ದ್ರಾ ಕ್ಷಣಮ್ಮ ಗುನ್ನಳ್, ಜಯಮ್ಮ ಹಿರೇಮಠ ಸೇರಿದಂತೆ ಅನೇಕ ಮಹಿಳೆಯರು ಪಂಚಾಯತ್ ಅಧಿಕಾರಿಗಳಿಗೆ ಮದ್ಯದ ಅಂಗಡಿ ತೆರೆಯಲು ವಿರೋಧಿಸಿ ಮನವಿ ಸಲ್ಲಿಸಿದ್ದಾರೆ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!