December 23, 2024

ಅನಧಿಕೃತ ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಿಸಲು ತಾಲೂಕ ಮಟ್ಟದ ಅಧಿಕಾರಿಗಳ ಸಭೆ.

ಇತ್ತೀಚಿಗೆ ಜರುಗಿದ ತಾಲೂಕಾ ಕೆಡಿಪಿ ಸಭೆಯಲ್ಲಿ ತಾಲೂಕಿನ ವಿವಿಧ ಸ್ಥಳಗಳಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ ಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆದು ತಾಲೂಕ ಮಟ್ಟದಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ತಂಡದ ರಚನೆ ಮಾಡಿ ಬಂದ್ ಮಾಡಿಸಲು ಮಾನ್ಯ ಶಾಸಕರು ಹಾಗೂ ತಾಲೂಕ ಕೆಡಿಪಿ ಸಭೆಯ ಅಧ್ಯಕ್ಷರು ಸೂಚಿಸಿದ ಪ್ರಯುಕ್ತ ಎಂದು ದಿನಾಂಕ 8.7.2024 ರಂದು ಬೆಳಿಗ್ಗೆ 11 ಗಂಟೆಗೆ ಮಾನ್ಯ ತಹಶೀಲ್ದಾರರು ಕುಷ್ಟಗಿ ಅವರ ಕಚೇರಿಯಲ್ಲಿ ತಹಶೀಲ್ದಾರ್ ಗ್ರೇಡ್ -02 ಕುಷ್ಟಗಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು ಕುಷ್ಟಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ, ಕ್ಷೇತ್ರ ಸಮನ್ವಯಾಧಿಕಾರಿಗಳು, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕುಷ್ಟಗಿ, ಅಗ್ನಿಶಾಮಕ ಠಾಣಾ ಅಧಿಕಾರಿಗಳು ಕುಷ್ಟಗಿ, ತಾಲೂಕಾ ಪಂಚಾಯತ್ ಇಲಾಖೆ ಕುಷ್ಟಗಿ,ಪುರಸಭೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು,ಶಿಕ್ಷಣ ಸಂಯೋಜಕರು,ಬಿಆರ್ಪಿ ಹಾಗೂ ಸಿ.ಆರ್.ಪಿಯವರು ಭಾಗವಹಿಸಿದ್ದರು. ಅನಧಿಕೃತ ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಿಸಲು ಕೈಗೊಂಡ ಕ್ರಮಗಳ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಬಹುತೇಕ 18 ಅನಧಿಕೃತ ಕೋಚಿಂಗ್ ಸೆಂಟರ್ ಗಳು ಬಂದ್ ಆಗಿರೋ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು ಅವುಗಳ ಮತ್ತು ಇನ್ನೂ ನಡೆಯುತ್ತಿರಬಹುದಾದ ಅಧಿಕೃತ ಕೋಚಿಂಗ್ ಸೆಂಟರ್ ಗಳ ಬಗ್ಗೆ ನಾಳೆ ಸಾಯಂಕಾಲದ ಒಳಗಾಗಿ ಬಂದ್ ಆಗಿರೋ ಬಗ್ಗೆ ಮತ್ತೊಮ್ಮೆ ಸಿ ಆರ್ ಪಿ ಮತ್ತು ಶಿಕ್ಷಣ ಸಂಯೋಜಕರು ಪರಿಶೀಲಿಸಿ ಕಾರ್ಯಾಚರಣೆ ಕೈಗೊಳ್ಳಲು ವರದಿ ಸಲ್ಲಿಸಲು ಸಭೆಯಲ್ಲಿ ತಿಳಿಸಲಾಯಿತು

ವರದಿಗಾರರು ಶರಣಪ್ಪ ಲೈನದ್ ಹೀರೆಮನ್ನಾಪುರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!