December 22, 2024

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ;ವಿಜಯ ಪ್ರತಾಪ್

 

ಯಲಬುರ್ಗಾ

 

ಏರುತ್ತಿರುವ ಜಗತ್ತಿನ ತಾಪಮಾನವನ್ನು ನಿಯಂತ್ರಿಸಲು ಹಾಗೂ ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಜಯಪ್ರತಾಪ್ ಹೇಳಿದರು.

ಪಟ್ಪಣದ ಪೋಲೀಸ್ ಠಾಣೆಯಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಶಶಿ ನಡುವರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು

ಪರಿಸರವು ನಮ್ಮ ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಗೆ ಪ್ರಕೃತಿ ನೀಡಿರುವ ಅತ್ಯಂತ ಅಮೂಲ್ಯವಾದ ಕೊಡುಗೆ- ಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಕೆರೆ, ಹಳ್ಳ, ನದಿ, ಸಾಗರ ಇತ್ಯಾದಿಗಳನ್ನು ನಾವು ಉಳಿಸಿಕೊಂಡು ಹೋಗುವುದು ಇಂದು ಅತ್ಯಗತ್ಯವಾಗಿದೆ. ನಾವೆಲ್ಲರೂ ಅವಲಂಬಿತರಾಗಿರುವ ಈ ಪರಿಸರಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ.

 

ನಮ್ಮ ಮುಂದಿನ ಪೀಳಿಗೆಗೆ ನಾವು ಈ ಪರಿಸರವನ್ನು ಹಾಳು ಮಾಡದೆ ಉಳಿಸಿಕೊಂಡು ಹೋದಾಗ ಇಂದಿನ ಪರಿಸರ ದಿನಾಚರಣೆಗೆ ಒಂದು ಅರ್ಥ ಬರಲಿದೆ.

ನಾವೆಲ್ಲರೂ ವೈಜ್ಞಾನಿಕವಾಗಿ ಗಿಡಮರಗಳನ್ನು ಹೆಚ್ಚಾಗಿ ಪಡೆದ ಪರಿಣಾಮ ತಾಪಮಾನವು ಏರಿಕೆಯಾಗಿದ್ದು ತಾಪಮಾನವನ್ನು ನಿಯಂತ್ರಣಕ್ಕೆ ತರಲು ಪುನಃ ಅಧಿಕ ಸಂಖ್ಯೆಯಲ್ಲಿ ಗಿಡಮರಗಳನ್ನು ನೆಟ್ಟು ಅದರ ಪಾಲನೆ ಕೋಸನೆ ಜವಾಬ್ದಾರಿಯನ್ನು ಪ್ರತಿಯೊಬ್ಬರು ಒಂದೊಂದು ಮರಗಳನ್ನು ನೆಟ್ಟರೆ ಊರಿಗೆ ಒಂದು ವನವನ್ನು ನಿರ್ಮಾಣ ಮಾಡಬಹುದು. ಸಮಾಜ ಸೇವೆಯನ್ನು ಮರವನ್ನು ನೆಡುವ ಮೂಲಕವೂ ಮಾಡಬಹುದಾಗಿದೆ ಎಂದರು.

 

 

ಈ ಸಂದರ್ಭದಲ್ಲಿ ಪೇದೆಗಳಾದ ಬಾಳನಗೌಡ ಪಾಟೀಲ, ಲಕ್ಷ್ಮಣ್ಣ, ಶರಣಪ್ಪ, ಶಿವಾನಂದ, ಬಸಯ್ಯ, ಹುಸೇನಬಿ, ಹನುಮಕ್ಕ, ಕಳಕಮ್ಮ ಸೇರಿದಂತೆ ಇತರರು ಇದ್ದರು

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!