December 23, 2024

ಲ್ಲರು ಒಂದಾಗಿ ಶಾಂತಿ ಸೌಹಾರ್ದತೆಯಿಂದ ಮೊಹರಂ ಹಬ್ಬವನ್ನು ಆಚರಿಸೋಣ

ಕುಷ್ಟಗಿ
ಎಲ್ಲರು ಒಂದಾಗಿ ಶಾಂತಿ ಸೌಹಾರ್ದತೆಯಿಂದ ಮೊಹರಂ ಹಬ್ಬವನ್ನು ಆಚರಿಸೋಣ , ಹೊಸ ಪದ್ದತಿಯನ್ನು ಮಾಡಬೇಡಿ , ಮೊದಲಿನಿಂದಲು ಯಾವ ರೀತಿ ಹಬ್ಬವನ್ನು ಆಚರಿಸಲಾಗುತ್ತಿತ್ತು.‌ಅದೇ ರೀತಿ ಹಬ್ಬ ಆಚರಿಸಬೇಕು ಎಂದು ಸಿಪಿಐ ಯಶವಂತ ಬಿಸನಳ್ಳಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೊಹರಂ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಯಾರೂ ಸಹ ಯಾವುದೇ ವದಂತಿಗೆ ಕಿವಿಗೊಡಬೇಡಿ, ಪ್ರಕೃತಿ ನಮಗೆ ಭೇದ ಭಾವ ಮಾಡಿಲ್ಲ, ನಾವೂ ಸಹ ಭೇದ ಮಾಡುವುದು ಬೇಡ ಎಂದರು.

ಪಿಎಸ್ ಐ ಮುದ್ದುರಂಗಸ್ವಾಮಿ ಮಾತನಾಡಿ, ಸೌಹಾರ್ದತೆ ಊರು ಎಂದು ಪ್ರಸಿದ್ಧ ಪಡೆದ ಕುಷ್ಟಗಿ ಪಟ್ಟಣವು ಎಲ್ಲಾ ಹಬ್ಬಗಳನ್ನು ಎಲ್ಲರೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿದ್ದಿರೀ.‌ ಅದೇ ರೀತಿ ಎಲ್ಲರೂ ಒಂದಾಗಿ ಮೊಹರಂ‌ ಹಬ್ಬವನ್ನು ಆಚರಿಸೋಣ, ಕಾನೂನು‌ ವಿರುದ್ಧವಾಗಿ ಯಾರೂ ಸಹ ನಡೆದು ಕೊಳ್ಳಬಾರದು ಎಂದರು.

ಸಭೆಯಲ್ಲಿ ಎಂ‌ಡಿ ಇಸ್ಮಾಲ್, ಸಣ್ಣ ಹುಸೇನಪ್ಪ, ಅಮಿನೂದ್ದಿನ್, ಬಾಷಾ, ಅನ್ವರ್, ಸಲಿಂ, ಆಂಜನೇಯ , ಶಿವನಗೌಡ ಮದಲಗಟ್ಟಿ,ಮಹಾಂತೇಶ, ಶರಣಪ್ಪ, ಸಂಗಮೇಶ ಶಿವನಗುತ್ತಿ, ಈಶಪ್ಪ ಭೋಮಿ,
ಮಹಿಬೂಬ, ದೊಡ್ಡಬಸಪ್ಪ ರ್ಯಾವಣಕಿ‌ ಸೇರಿದಂತೆ ಪಟ್ಟಣದ ಸರ್ವ ಧರ್ಮದ ಮುಖಂಡು ಪಾಲ್ಗೊಂಡಿದ್ದರು.
ವರದಿಗಾರರು ಶರಣಪ್ಪ ಲೈನದ್ ಹೀರೆಮನ್ನಾಪುರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!