December 23, 2024

ತಪಾಸಣೆಗೆ ಒಳಪಟ್ಟು ಆರೋಗ್ಯವಂತರಾಗಿ;ವೈಜನಾಥ ಸಾರಂಗಮಠ.

 

ಕುಕನೂರು.

ನರೇಗಾ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿ ಹತ್ತಿರದ ಆರೋಗ್ಯ ಚಿಕಿಸ್ತಾ ಕೇಂದ್ರಗಳಿಗೆ ಭೇಟಿ ನೀಡಿ ತಪಾಸನೆಯನ್ನು ಮಾಡಿಸಿಕೊಂಡು ಸದೃಢ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಬಸವ ಹಂಚಿನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗ ಮಠ ಹೇಳಿದರು.

ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾವರಾಳ ಗ್ರಾಮದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಭಿರ, ವಿಶ್ವ ಜನಸಂಖ್ಯಾ ದಿನಾಚರಣೆ, ಮಲೆರಿಯಾ ವಿರೋಧಿ ಮಾಸಾಚರಣೆ, ರೋಜಗಾರ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರನದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ವೈಜನಾಥ ಸಾರಂಗಮಠ ಮಾತನಾಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪಾಲ್ಗೊಳ್ಳುವ ಎಲ್ಲ ಕೂಲಿಕಾರರು ಆರೋಗ್ಯ ವಂತರಾಗಿರಬೇಕು, ಮತ್ತು ಆರೋಗ್ಯ ತಪಾಸಣೆ ಈಗ ಕಾಮಗಾರಿ ಸ್ಥಳದಲ್ಲಿಯೇ ಮಾಡುವುದರಿಂದ ಕೂಲಿಕಾರರು, ಹಿರಿಯ ನಾಗರೀಕರು, ಮಹಿಳಾ ಕೂಲಿಕಾರರು ಪ್ರಯೋಜನ ಪಡೆದುಕೊಳ್ಳಬೇಕು, ಎಂದರು

ನಂತರ ವೈದ್ಯಾಧಿಕಾರಿಗಳಾದ ಪ್ರಕಾಶ ಸರ್ ಮಾತನಾಡಿ ಮಳೆಗಾಲ ಸಮಯದಲ್ಲಿ ಮಲೆರಿಯಾ, ಡೆಂಗೂ, ಜ್ವರ, ನೆಗಡಿ ಇಂಥ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ ಅದಕ್ಕಾಗಿವದುಡಿಯುವ ಕೂಲಿಕಾರರು ಮುನ್ನೆಚ್ಚರಿಕೆ ವಹಿಸಬೇಕು, ಕಾಯಿಸಿ ಆರಿಸಿದ ನೀರು ಕುಡಿಯಬೇಕು, ಜನಸಂಖ್ಯೆ ನಿಯಂತ್ರಣ ವನ್ನುಮಾಡಲು ಮಹಿಳೆಯರು, ಮತ್ತು ಪುರುಷರು ಶಸ್ತ್ರಚಿಕಿತ್ಸೆ ಇಲ್ಲದೆ ಮಕ್ಕಳುವಾಗದಂತೆ ತಡೆಯಬಹುದು, ಎಂದರು,

 

 

ಸ್ಥಳದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್ ಗಾವರಾಳ, ವೈದ್ಯಕೀಯ ಸಿಬ್ಬಂದಿಗಳು,ಐ.ಇ.ಸಿ ಸಂಯೋಜಕರು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಕೂಲಿಕಾರರು ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!