December 22, 2024

ಶ್ರೀ ಗಾಳೆಮ್ಮ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ

ಕುಕನೂರು

ತಾಲೂಕಿನ ವೀರಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಗಾಳೇಮ್ಮ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ(ಜೂನ್) ಜೂನ್ 11ರವರೆಗೆ ಜರುಗುವುದು ಎಂದು ಗಾಳಿ ದುರ್ಗಾದೇವಿ ದೇವಸ್ಥಾನ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

ವೀರಾಪುರ ಗ್ರಾಮದ ಗಾಳೇಮ್ಮ ದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜೂನ್ 7 ಶುಕ್ರವಾರ ಬೆಳಗ್ಗೆ ಶ್ರೀದೇವಿಯ ಕಂಕಣ ಕಟ್ಟುವ ಕಾರ್ಯಕ್ರಮ ಹಾಗೂ ಪ್ರತಿದಿನ ಭಕ್ತರಿಂದ ವಿಶೇಷ ಪೂಜೆ ವಿಧಾನಗಳು ಜರುಗುವುದರೊಂದಿಗೆ ಜೂನ್ ಹತ್ರ ಸೋಮವಾರ ರಾತ್ರಿ 10 ಗಂಟೆಗೆ ಶ್ರೀದೇವಿಯ ಪೂಜೆ, ಅಗ್ನಿ ಹಚ್ಚುವ ಕಾರ್ಯಕ್ರಮ ರಾತ್ರಿ ಹನ್ನೊಂದು ಗಂಟೆಗೆ ಭಕ್ತರಿಂದ ಮದ್ದು ಸುಡುವುದು ನಂತರ ಶ್ರೀ ದುರ್ಗಾದೇವಿ ಭಜನಾ ಸಂಘದವರಿಂದ ಶಿವಾನುಭವ ಗೋಷ್ಠಿ ಜರುಗಲಾಗುವುದು.

  •      
  •   ಜೂನ್ ಹನ್ನೋಂದರ ಬೆಳಗಿನ ಜಾವ ನಾಲ್ಕು ಗಂಟೆಗೆ ಮಂಗಳವಾದ್ಯಗಳೊಂದಿಗೆ ಗ್ರಾಮದ ಬಸವರಾಜು ಹೂಗಾರ್ ಇವರ ಮನೆಯಿಂದ ಹೂವಿನ ಮಾಲೆ ತರುವುದು ನಂತರ ದೇವಿಯ ತವರಮನೆ ಎಂಬ ಪ್ರತಿತಿ ಹೊಂದಿರುವ ಹಿರೇಗೌಡ್ರ ಅವರ ಮನೆಯಿಂದ ವಿಧಿ ವಿಧಾನಗಳಿಂದ ಉಡಿ ತುಂಬುವುದು ನಂತರ ಗಂಗಾ ಪೂಜೆ ನೆರವೇರಿಸಿ ಬೆಳಗ್ಗೆ 8 ಗಂಟೆಗೆ ಅಗ್ನಿ ಪ್ರವೇಶ ಜರುಗುವುದು ನಂತರ ಜಾತ್ರೆಗೆ ಆಗಮಿಸುವ ಸಕಲ ಭಕ್ತಾದಿಗಳಿಂದ ಹರಕೆ ಹಾಗೂ ಇಷ್ಟಾರ್ಥಗಳನ್ನು ಈಡೇರಿಸಿ, ಅನ್ನ ಸಂತರ್ಪಣೆ ಕಾರ್ಯಕ್ರಮ, ಸಂಜೆ 4:00 ಗಂಟೆಗೆ ಪುನಃ ಗಂಗಾ ಪೂಜೆ ನೆರವೇರಿಸಲಾಗುವುದು ನಂತರ ರಾತ್ರಿ 9:30ಕ್ಕೆ ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್ ಎಂಬ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನ ಸಮಿತಿಯವರು ತಿಳಿಸಿರುತ್ತಾರೆ.
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!