December 22, 2024

ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಕರಿಮಣಿ ಮಾಲೀಕ

ಬೆಳಗಾoವಿ “ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು 20 ವರ್ಷದ ವಿವಾಹಿತೆಯೋರ್ವಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಜಿಲ್ಲಾಸ್ಪತ್ರೆಗೆ ದಾಖಲಾದ ಯತ್ನಿಸಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.
ಕಳೆದ 18 ಅಕ್ಟೋಬರ್ 2022ರಂದು ಗಣೇಶ ಗುಡ್ಯಾಳಕರ ಜೊತೆಗೆ ಕನವಿಕಾ ಎಂಬಾಕೆಯನ್ನು ಮದುವೆ ಮಾಡಿಕೊಂಡಿದ್ದ. ನಾನು ಬಿಇ ಪದವೀಧರ ಎಂಜಿನಿಯರ್ ಕೆಲಸ ಮಾಡುತ್ತೇನೆ ಎಂದು ನಂಬಿಸಿ ಮೋಸದಿಂದ ನನಗೆ ಮದುವೆಯಾದ ಇಲ್ಲಿನ ಗಣೇಪುರದ ನಿವಾಸಿ ಗಣೇಶಗೆ ಮದುವೆ ವೇಳೆ ನಾಲ್ಕು ತೊಲೆ ಬಂಗಾರದ ಬಳೆ, ಐದು ತೊಲೆ ನಕಲೇಸ್ ಹಾಗೂ ನಾಲ್ಕು ತೊಲೆ ಮಂಗಳಸೂತ್ರ ಹಾಗೂ ಕಿವಿ ಓಲೆಗಳನ್ನು ನೀಡಿದ್ದರು. ಅದನ್ನು ಎಲ್ಲ ಕಸೆದುಕೊಂಡಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಕನವಿಕಾ ಸುದ್ದಿಗಾರರ ಎದುರು ನೋವು ತೋಡಿಕೊಂಡಳು.
ಮದುವೆಯಾದ ಬಳಿಕ ಸಂಸಾರ ಮಾಡಲು ಗಂಡನ ಮನೆಗೆ ಹೋದಾಗ ಆರು ತಿಂಗಳುಗಳ ಕಾಲ ಚೆನ್ನಾಗಿಯೇ ನೋಡಿಕೊಂಡಿದ್ದರು. ನಂತರ ಗಂಡನ ಮನೆಯವರು ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡುವುದು, ಹೊಡೆಯುವುದು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರಲ್ಲದೆ, ತವರು ಮನೆಯಿಂದ ಹಣ ತರುವಂತೆ ಸತಾಯಿಸುತ್ತಿದ್ದರು ಎಂದು ದೂರಿದಳು.
ನನ್ನ ಗಂಡನ ಮನೆಯಲ್ಲಿ ಅವರ ತಂದೆ ತಮ್ಮಣ್ಣಾ, ತಾಯಿ ಸುಜಾತಾ, ಅವನ ಅಕ್ಕ ಸೌಮ್ಯ ನಿತ್ಯ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂಧಿಸುತ್ತಿದ್ದರು. ಐದು ಲಕ್ಷ ಹಣ ತೆಗೆದುಕೊಂಡು ಬಾ ಎಂದು ಸತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾಳೆ.
ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಗಂಡ ಮದ್ಯವ್ಯಸನಿಯಾಗಿದ್ದ ಆತನಿಗೆ ನಾನು ಏಳು ಲಕ್ಷ ರೂ. ಹಣ ನೀಡಿದ್ದೇನೆ. ಈಗ ಗಂಡನ ಮನೆಯವರು ಈಗ ಮನೆ ಬಿಟ್ಟು ಹೊರಗೆ ಹಾಕಿದ್ದಾರೆ. ನನಗೆ ‌ನ್ಯಾಯ ಕೊಡಿಸಬೇಕೆಂದು ಸುದ್ದಿಗಾರರ ಮುಂದೆ ಒತ್ತಾಯಿಸಿದ್ದಾಳೆ.”
ವರದಿ ಲಕ್ಕಪ್ಪ ನಾಯ್ಕ್

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!