December 22, 2024

ಕುಷ್ಟಗಿ ತಾಲೂಕಿನ ಕಳಮಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಧನೆ ಇಲ್ಲದೆ ವಸತಿ ಶಾಲೆಗೆ ಆಯ್ಕೆ

ಕುಷ್ಟಗಿ:ಜು ೧೫ ತಾಲೂಕಿನ ಗಡಿ ಗ್ರಾಮ ಕಳಮಳ್ಳಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 12 ವಿದ್ಯಾರ್ಥಿಗಳು ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ ಯಾವುದೇ ಖಾಸಗಿ ಕೋಚಿಂಗ್ ಹೋಗದೆ ಸರಕಾರಿ ಶಾಲೆಯ ಶಿಕ್ಷಕರ ಬೋಧನೆಯಿಂದ ನಾನಾ ವಸತಿ ಶಾಲೆಗಳಿಗೆ ಆಯ್ಕೆಯಾಗುವ ಮೂಲಕ ತಾಂಡಾದ ಕೀರ್ತಿ ಹೆಚ್ಚಿಸಿದ್ದಾರೆ 5ನೇ ತರಗತಿಯ 27 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ 9 ವಿದ್ಯಾರ್ಥಿಗಳು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾದರೆ ಮೂರು ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಯಮನೂರಪ್ಪ ಮುಂದಲಮನಿ ತಿಳಿಸಿದರು. ತಯಾರಿ: ಮುಖ್ಯ ಶಿಕ್ಷಕ ಯಮನೂರಪ್ಪ ಮುಂದಲಮನಿ ಸಹ ಶಿಕ್ಷಕರಾದ ಹನುಮಂತಪ್ಪ ದೊಡ್ಡಮನಿ ವೆಂಕಟೇಶ್ ಗೊಲ್ಲರ್ ಪಿಕಲಪ್ಪ ಪವಾರ್ ಮರಿಯಪ್ಪ ರ್ಯಾವಣಿಕೆ ಲಕ್ಷ್ಮಣ ಚೌಹಾಣ್ ಅವರು ಐದನೆಯ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ ಬೋಧನೆ ಮಾದರಿಯ ಪ್ರಶ್ನೆ ಪತ್ರಿಕೆ ಬಿಡಿಸುವುದು ಸೇರಿ ನಾನಾ ವಿಷಯಗಳನ್ನು ಬೋಧಿಸಿದ್ದಾರೆ ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಂದ್ರ ಕಾಂಬಳೆ ಶಿಕ್ಷಣ ಸಂಯೋಜಕ ರಾಘಪ್ಪ ಶ್ರೀ ರಾಮ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ದವಲಸಾಬ ವಿದ್ಯಾರ್ಥಿಗಳಾದ ಭೂಮಿಕ ಚಂದ್ರು ಪ್ರಶಾಂತ ನೇತ್ರ ಶಿಕ್ಷಕರ ಮಾರ್ಗದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿಗಾರರು ಶರಣಪ್ಪ ಲೈನದ್ ಹೀರೆಮನ್ನಾಪುರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!