ಜು ೨೦ ಇಲ್ಲಿನ ಪೋಲಿಸ್ ಠಾಣೆಗೆ ನೂತನ ಪಿಎಸೈ ಆಗಿ ಹನುಮಂತಪ್ಪ ತಳವಾರ ಅಧಿಕಾರ ಸ್ವೀಕರಿಸಿದರು.
ಹಿಂದೆ ಇಲ್ಲಿ ಸೇವೆ ಸಲ್ಲಿಸಿದ ಮುದ್ದುರಂಗಸ್ವಾಮಿ ವರ್ಗಾವಣೆ ಯಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕಮಲಾಪೂರ ಠಾಣೆಯಿಂದ ಕುಷ್ಟಗಿ ಠಾಣೆಗೆ ವರ್ಗಾವಣೆ ಯಾದ ಪಿಎಸೈ ಹನುಮಂತಪ್ಪ ತಳವಾರ ಅವರು ಆಗಮಿಸಿ ಅಧಿಕಾರ ವಹಿಸಿಕೊಂಡರು
ಇವರಿಗೆ ನಿವೃತ್ತ ಯೋಧರು ಆಗಮಿಸಿ ಸನ್ಮಾನಿಸಿ ಗೌರವಿಸಿದರು. ನಂತರ ಮಾತನಾಡಿದ ನಿವೃತ್ತ ಯೋಧ ಶರಣಯ್ಯ ಹಿರೇಮಠ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಕಳ್ಳತನ ಪ್ರಕರಣಗಳು ಮತ್ತು ಅನಗತ್ಯವಾಗಿ ಬೈಕ್ ರೈಡ್ ಮಾಡುವ ಮಕ್ಕಳಿಗೆ ಕಡಿವಾಣ ಹಾಕಬೇಕು. ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ನೂತನ ಪಿಎಸೈ ಹನುಮಂತಪ್ಪ ತಳವಾರ ಕಾನೂನು ಉಲ್ಲಂಘನೆ ಮಾಡುವ ಯಾವುದೇ ಘಟನೆ ಗಳಿರಲಿ ಕ್ರಮ ಕೈಗೊಳ್ಳುತ್ಥೇವೆ ನಮ್ಮ ಸೇವೆ ಸಾರ್ವಜನಿಕರಿಗೆ ಸದಾ ಇರುತ್ತದೆ ಎಲ್ಲರ ಸಹಕಾರ ಇರಲಿ ಎಂದು ನುಡಿದರು.
ಸಂಧರ್ಬದಲ್ಲಿ ನಿವೃತ್ತ ಯೋಧರಾದ ಸುಭಾಸ ಮಡಿವಾಳರ,ಹಂಪನಗೌಡಾ ಬಳೋಟಗಿ, ಶಂಕ್ರಪ್ಪ ಕವಡಿಕಾಯಿ,ಸಂಗಮೇಶ ಎಮ್,ಬೀಮಣ್ಣ ಮ್ಯಾಗೇರಿ,ಹನಂತಪ್ಪ ಬಿ.ವೀರೇಶ ಹುನಗುಂದ. ಸೇರಿದಂತೆ ಅನೇಕರು ಉಪಸ್ಥಿತರಿದ್ದು ನೂತನ ಪಿಎಸೈ ಅವರಿಗೆ ಸ್ವಾಗತಿಸಿದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು