December 22, 2024

ಚುಟುಕು ಸಾಹಿತಿ ಹನಮಂತಪ್ಪ ಅಂಡಗಿ ನಿಧನಕ್ಕೆ ಸಂತಾಪ

ವರದಿ; ಶ್ರೀಕಾಂತಗೌಡ ಮಾಲಿಪಾಟೀಲ್

ಯಲಬುರ್ಗಾ :

ಚುಟುಕು ಸಾಹಿತಿ ಹನಮಂತಪ್ಪ ಅಂಡಗಿ ಅವರ ಅನಿರೀಕ್ಷಿತ ಸಾವಿನಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ಸಾಹಿತಿ ಹನಮಂತಪ್ಪ ವಡ್ಡರ ಸಂತಾಪ ಸೂಚಿಸಿ ಮಾತನಾಡಿದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು ಹನಮಂತಪ್ಪ ಅಂಡಗಿ ಯವರು ಸಾಹಿತ್ಯ ಕ್ಷೇತ್ರದ ಜೋತೆ ಜೋತೆಗೆ ಉಪನ್ಯಾಸಕರಾಗಿ ,ಪ್ರಾಂಶಪಾಲರಾಗಿ ,ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕ ಅಧ್ಯಕ್ಷ ಶ್ರೀಕಾಂತಗೌಡ ಮಾಲಿ ಪಾಟೀಲ್ ಮಾತನಾಡಿ ಚುಟುಕು ಸಾಹಿತ್ಯದ ಜೊತೆಗೆ ಜನಪದ ಹಾಡುಗಾರಿಕೆ ಅವರಲ್ಲಿತ್ತು ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರ ಹಾಗೂ ಜನಪದ ಸಾಹಿತ್ಯ ಬಡವಾಗಿದೆ ಎಂದು ಹೇಳಿದರು.

ಸಂತಾಪದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ಮಲ್ಲೀಕಾರ್ಜುನ ಹಡಪದ, ಸಾಹಿತಿ ಎಸ್,ದಾನಕೈ. ಪತ್ರಕರ್ತರಾದ ವಿ,ಎಸ್,ಶಿವಪ್ಪಯ್ಯನಮಠ ,
ಹುಸೇನ್ ಸಾಬ ಮೋತೆಖಾನ್, ನೀಲಪ್ಪ ಖಾನಾವಳಿ,
ಶ್ಯಾಮೀದಸಾಬ ತಾಳಕೇರಿ.ಸಿ,ಎ,ಆದಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!