December 22, 2024

ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯ ಅವಶ್ಯ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವತ್ತಿ ಕೌಶಲ್ಯ ಮೈಗೂಡಿಸಿಕೊಳ್ಳಲು ಮುಂದಾಗಿ

ಯಲಬುರ್ಗಾ :  ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ವೃತ್ತಿ ಕೌಶಲ್ಯ ಮೈಗೂಡಿಸಿಕೊಳ್ಳಬೇಕು ಎಂದು  ಮುನಿರಾಬಾದ್ ಅಭಿವೃದ್ಧಿ ಡಯಟ್ ಉಪ ನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ತಿಳಿಸಿದರು.
ತಾಲೂಕಿನ ಹಿರೇವಂಕಲಕುಂಟಾ ಸರಕಾರಿ ಪದವಿ ಪೂರ್ವ ಕಾಲೇಜ್  ಫ್ರೌಢ ಶಾಲಾ ವಿಭಾಗದ ವತಿಯಿಂದ ಒಂದು ದಿನದ ಓರಿಯೆಂಟೇಷನ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದವ  ಅವರು ರಾಷ್ಟೀಯ ವೃತ್ತಿ ಶಿಕ್ಷಣ ಕೌಶಲ್ಯ ಚೌಕಟ್ಟು ಮಕ್ಕಳ ಭವಿಷ್ಯಕ್ಕೆ ಹೆದ್ದಾರಿಯಾಗಲಿದೆ. 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಷನ್ ತರಬೇತಿಯನ್ನ ಪಡೆದು ಕೊಳ್ಳಬೇಕು   2024 -2025 ನೇ ಸಾಲಿಗೆ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಚಯಿಸಿರುವ ಎನ್,ಎಸ್,ಕ್ಯೂ ಏಫ್  ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ್ಯ ಚೌಕಟ್ಟು ವಿದ್ಯಾರ್ಥಿಗಳ ಬದುಕಿಗೆ ಅಡಿಪಾಯ ಹಾಕಲಿದೆ ಎಂದು ಅಭಿಪ್ರಾಯ ಪಟ್ಟರು
ಭಾರತ ಇತರೆ ದೇಶಗಳಿಗೆ ಹೋಲಿಸಿದರೆ ಯುವ ಸಮೂಹ  ಹೇರಳ ವಾಗಿದ್ದು, ದೇಶದ ಅನೇಕ ಯುವಕರು ಹೊರ ರಾಷ್ಟ್ರ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಯುವಕರು ಪದವಿ ಮುಗಿದ ನಂತರ ಕಂಪೆನಿಗಳಲ್ಲಿ ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಬೇಕಾದರೆ ಪದವಿ ಹಂತದಲ್ಲಿ ವತ್ತಿ ಕೌಶಲ್ಯ ತಿಳಿದುಕೊಳ್ಳಬೇಕು. ಸಂವಹನದ ಕಲೆ, ಬರವಣಿಗೆ ಹಾಗೂ ಇನ್ನಿತರ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯಯಿದೆ ಎಂದು ತಿಳಿಸಿದರು.
ಡಯಟ್ನ ಉಪನ್ಯಾಸಕ  ಮಹಾಂತಯ್ಯ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು  ಸತ್ಪ್ರಜೆಗಳಾಗಿ  ದೊಡ್ಡ ಕನಸುಗಳನ್ನು ಕಂಡು ಅದನ್ನು ಸಾಕಾರಗೊಳಿಸುವಲ್ಲಿ ಮುಂದಡಿ ಇಡಬೇಕು. ವಿದ್ಯಾರ್ಥಿಗಳು ತಮ್ಮನ್ನು ತಾವು ಅವಲೋಕಿಸಿ ಕೊಂಡು ಜೀವನದಲ್ಲಿ ಒಳ್ಳೆಯವರಾಗಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿ, ಭಾರತದ ಸತ್ಪ್ರಜೆಯಾಗಬೇಕು. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ನೀಡಿ ಅವರ ಮಾರ್ಗದರ್ಶನದಲ್ಲಿ ನಡೆದರೆ ವೈಯಕ್ತಿಕವಾಗಿ ಬೆಳವಣಿಗೆ ಕಾಣುವುದರ ಜೋತೆಗೆ ಓದಿದ ಕಾಲೇಜಿಗೆ ಕೀರ್ತಿ ತಂದು ಸಮಾಜದಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗುತ್ತದೆ  ಹೇಳಿದರು.
ಉಪ ಪ್ರಾಂಶಪಾಲ ಬಾಬುಸಾಬ ಲೈನದಾರ  ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು. ಉನ್ನತ ಹಂತದ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗಿದ್ದು, ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು. ಪದವಿ ಹಂತದಲ್ಲಿ ತಮಗೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ ಹಿರೇವಂಕಲಕುಂಟಾ .ಹಿರೇ ಅರಳಿಹಳ್ಳಿ
ಹಾಗೂ ಬೇವೂರ ಪ್ರೌಢಶಾಲೆಗಳಿಂದ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ  ತಿಮ್ಮಣ್ಣ ಜಗ್ಗಲ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪ ಪ್ರಾಂಶಪಾಲ
ಚಂದ್ರಕಾಂತಯ್ಯ ಕಲ್ಯಾಣಮಠ, ಹಿರೇ ಅರಳಿಹಳ್ಳಿ ಪ್ರೌಢ ಶಾಲೆಯ  ಮುಖ್ಯೋಪಾಧ್ಯಾಯ  ಸಿದ್ದರಾಮಪ್ಪ ಪತ್ತಾರ.
 ಬೇವೂರು ಪ್ರೌಢಶಾಲೆಯ ಮುಖ್ಯೋಪಾಧ್ಯ
ಗಣೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!