December 23, 2024

ಗ್ರಾಮದ ಅಭಿವೃದ್ಧಿಗೆ ಯುವಕರ ಪಾತ್ರ ಅತ್ಯವಶ್ಯ

ಯಲಬುರ್ಗಾ  : ಗ್ರಾಮದ  ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವುದು ಅತ್ಯಗತ್ಯವಾಗಿದೆ. ಗ್ರಾಮಗಳ ಸ್ವಚ್ಛತೆಗೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಗ್ರಾಮದ ಹಿರಿಯ ಮುಖಂಡ ಅಮೃತಪ್ಪ ದೇಸಾಯಿ ಹೇಳಿದರು
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ  ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಬೀದಿ ನಾಟಕ ಪ್ರದರ್ಶನ ಭೂಮಿಕಾ ಜ್ಞಾನವಿಕಾಸ ಕೇಂದ್ರದ ವತಿಯಿಂದ   ಶೌಚಾಲಯ ನಿರ್ವಹಣೆ ಹಾಗೂ ಪರಿಬರ ನೆಲ ಜಲ ಸಂರಕ್ಷಣೆ.ಬಾಲ್ಯ ವಿವಾಹ. ಕುರಿತು  ಜಾಗೃತ ಗೋಳಿಸಲು ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು
ಮಹಾತ್ಮಗಾಂಧೀಜಿ ಅವರು ರಸ್ತೆಗಳ ಕಸಗೂಡಿಸಿದರು ಹಾಗೂ ಶೌಚಾಲಯ ಶುಚಿಗೊಳಿಸುವ ಮೂಲಕ ಸ್ವಚ್ಛ ಭಾರತದ ಕನಸು ಕಂಡಿದ್ದರು. ಗಾಂಧೀಜಿ ಅವರ ಮಾದರಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮುಂದುವರೆಯಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಇಂದಿನ ತುರ್ತು ಅಗತ್ಯವಾಗಿದೆ. ಶಿಕ್ಷಕರಿಂದ ನಾಯಕರನ್ನು ನಿರ್ಮಿಸಲು ಸಾಧ್ಯ, ಸ್ವಚ್ಛತೆ ಕುರಿತು ಶಿಕ್ಷಕರು ಇಂದು ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಆರೋಗ್ಯವಂತ ಸಮಾಜದಿಂದ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ. ವಾರಕ್ಕೆ ಒಂದು ದಿನವಾದರೂ ವಿದ್ಯಾರ್ಥಿಗಳ ತಂಡದೊಂದಿಗೆ ಗ್ರಾಮದೊಳಗೆ ಸಂಚಾರಮಾಡಿ ಗ್ರಾಮಸ್ಥರಿಗೆ ಸ್ವಚ್ಛತೆಯ ಜಾಗೃತಿ, ಮೀತ ನೀರು ಬಳಕೆ, ಪರಿಸರ ಸಂರಕ್ಷಣೆ ಬಗ್ಗೆ ಶೌಚಾಲಯ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ಮುಂದಾಗ ಬೇಕೆಂದು ಸಲಹೆ ನೀಡಿದರು ಇದೆ ವೇಳೆ  ಕುಂದಗೋಳ ತಾಲೂಕಿನ ಯುವ ಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪೂರ ಕಲಾ ತಂಡದ ಕಲಾವಿಧರಿಂದ ಜಾಗೃತಿ ಗೋಳಿಸಿ ಬೀದಿ ನಾಟಕ ಪ್ರದರ್ಶನಗೈದರು.
ಈ ಸಂದರ್ಭದಲ್ಲಿ  ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪುರತಂಡದ ಮುಖಂಡರುಗಳಾದ ಸಾಂಬಯ್ಯ ಸಂಗಯ್ಯ ಹಿರೇಮಠ ಸಹ ಕಲಾವಿದರುಗಳಾದ ನಾಗರಾಜ ಗೌಡಣ್ಣನವರ ಈಶ್ವರ್ ಅರಳಿ ಶರೀಫ ದೊಡ್ಮನಿ ಮಲ್ಲಪ್ಪ ಮುಳುಗುಂದ ಹನುಮಂತಪ್ಪ ತಳಗಡೇ ಅರುಂಧತಿ ಆರ್ಯರ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಿನ್ನಭಾಷಾ ಅತ್ತಾರ, ಒಕ್ಕೂಟದ ಅಧ್ಯಕ್ಷೆ  ಗೀತಾ, ಸಮನ್ವಯಧಿಕಾರಿ ಎನ್  ಗೀತಾ  ಸೇವಾ ಪ್ರತಿನಿಧಿ ಸಂಗನಗೌಡ, ಸೇರಿದಂತೆ ಮತ್ತೀತರರು  ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!