December 23, 2024

ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ (ರಿ) ವತಿಯಿಂದ ಪ್ರಶಸ್ತಿಗೆ ಅರ್ಜಿ ಅಹ್ವಾನ,

ಕೊಪ್ಪಳ: ಕನ್ನಡ ನಾಡಿನ ನೆಲ ಜಲ ಭಾಷೆ ಕಲೆ ಸಂಗೀತ ಸಾಹಿತ್ಯ ಜಾನಪದ ನೃತ್ಯ ರಂಗಭೂಮಿ ಶಿಕ್ಷಣ ಸಂಘಟನೆ ಕೃಷಿ ಸಾಮಾಜಿಕ ಮಾಧ್ಯಮ ಸೇರಿದಂತೆ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಧಕರನ್ನು ಗುರುತಿಸಿ ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಆಸಕ್ತಿಯುಳ್ಳ ವಿವಿಧ ಕ್ಷೇತ್ರದ ಸಾಧಕರು ಭಾಗವಹಿಸಲು ಟ್ರಸ್ಟ್ ಅಧ್ಯಕ್ಷರು ತಿಳಿಸಿದ್ದಾರೆ, ಕಳೆದ ವರ್ಷ ಧಾರವಾಡದ ರಂಗಾಯಣ ಸಮುಚ್ಚಯ ಭವನದಲ್ಲಿ ನಡೆದ ಸಾಧಕರ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಶ್ರೀ ಮಾತಾ ಮಂಜಮ್ಮ ಜೋಗತಿ ಇವರ ಅಮೃತ ಹಸ್ತದಿಂದ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಜಾನಪದ ಸಂಗೀತ ಸಾಹಿತ್ಯ ನೃತ್ಯ ರಂಗಭೂಮಿ ಮಾಧ್ಯಮ ಸಂಘಟನೆ ಸಾಮಾಜಿಕ ಸೇವಾ ಶಿಕ್ಷಣ ಕೃಷಿ ಕಾನೂನು ಸೇವಾ ಸೇರಿದಂತೆ ವಿವಿಧ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು, ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮನುಸೂರು ಮಠದ ಶ್ರೀ ಬಸವರಾಜ್ ದೇವರು,ರಂಗಾಯಣದ ರವಿ ಪರವಿ ನಾಯ್ಕರ್, ಕನ್ನಡ ಮತ್ತು ಸಂಸ್ಕೃತಿ ಕ ಇಲಾಖೆಯ ಮಂಜುಳಾ ಎಲಿಗಾರ್,ಪಿಎಸ್ಐ ಮಲ್ಲಪ್ಪ ಕೆ, ಮಾಧ್ಯಮ ಮಿತ್ರರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು, ಆಸಕ್ತಿಯುಳ್ಳವರು ತಮ್ಮ ಸ್ವ ವಿವರದೊಂದಿಗೆ
ಸಂಪರ್ಕಿಸಲು ಕೋರಲಾಗಿದೆ: ಸ್ವ-ವಿವರ ಕಳಿಸಲು ಕೊನೆಯ ದಿನಾಂಕ:01/07/2024
ಸಂಪರ್ಕಸಿ: ವಾಟ್ಸಪ್ 7022246893, 88675 36046,

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!