December 23, 2024

ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧನ ಅಂತ್ಯಕ್ರಿಯೆ

ಫೈಲ್: ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧನ ಅಂತ್ಯಕ್ರಿಯೆ

 

ಇಲಕಲ್.

 

ಅಪಘಾತದಲ್ಲಿ ಮೃತನಾದ ಯೋಧನ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

 

ಇಲಕಲ್ ತಾಲೂಕಿನ ಅಮ್ಮೀನಗಡ ಸಮೀಪದ ಸುಳಿಭಾವಿ ಗ್ರಾಮದ ನಾಗರಾಜ್ ಕತ್ತಿ ಮೃತ ಯೋದ.ರಜೆಗೆಂದು ಸ್ವ ಗ್ರಾಮಕ್ಕೆ ಮರಳಿದ್ದ ನಾಗರಾಜ್ ಕತ್ತಿ ಎಂಬ ಯೋಧ ಸಾಯಂಕಾಲ ಸ್ನೇಹಿತರೊಂದಿಗೆ ವಾಯು ವಿಹಾರಕ್ಕೆ ಎಂದು ತೆರಳಿದ ಸಂದರ್ಭದಲ್ಲಿ ಕುಣಿಬೆಂಚಿ ಕ್ರಾಸ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟದ್ದಾನೆ. ನಾಗರಾಜ್ ಭಾರತೀಯ ವಾಯು ಸೇನೆ ಇಂಡಿಯಾ ಏರ್ ಫೋರ್ಸ್ ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದು ಕಳೆದ ಆರು ವರ್ಷಗಳ ಹಿಂದೆ ನೇಮಕಾತಿ ಹೊಂದಿದ್ದನೆಂದು ತಿಳಿದು ಬಂದಿದೆ.

 

ಈ ಘಟನೆಗೆ ಸಂಬಂಧಿಸಿದಂತೆ ಅಮಿನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಎಂದು ತಿಳಿದುಬಂದಿದೆ.

 

ವರದಿ;ಶರಣು

ಚಿಮ್ಮಲಗಿ

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!