December 22, 2024

ಬಿಜೆಪಿ ಭದ್ರಕೋಟೆ ಭೇದಿಸಿದ ರಾಜಶೇಖರ್.ಕೊಪ್ಪಳ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮಡಿಲಿಗೆ

ಕೊಪ್ಪಳ :

2024ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್

ಬಿಜೆಪಿ ಅಭ್ಯರ್ಥಿ

ಡಾ. ಬಸವರಾಜ ಕ್ಯಾವಟರ್ ವಿರುದ್ಧ ಗೆಲುವಿನ ನಗೆ ಬೀರುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಕೊಪ್ಪಳ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿ ಕಂಡುಬಂದಿದ್ದು ಮೂರು ಬಾರಿ 2009, 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು

ಸಾಧಿಸುವುದರೊಂದಿಗೆ ಹ್ಯಾಟ್ರಿಕ್ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

ಸತತ ಮೂರು ಗೆಲುವಿಗಳಿಂದ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ರಾಜಶೇಖರ ಹಿಟ್ನಾಳ 40,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದು ಬಿಜೆಪಿಯ ಭದ್ರಕೋಟೆಯನ್ನು ಛೀದ್ರಗೊಳಿಸಿದ್ದು ಕೊಪ್ಪಳ ಲೋಕಸಭಾ ಕಾಂಗ್ರೆಸ್ ಮಡಿಲಿಗೆ ಬಂದಂತಾಗಿದೆ.

 

ಅಭ್ಯರ್ಥಿಗಳ ಆಯ್ಕೆ ವಿಚಾರದಿಂದ ಪ್ರಾರಂಭವಾದ ಗೊಂದಲವು ಬಿಜೆಪಿ ಪಾಳಯದಲ್ಲಿ ಮುಂದುವರೆದುಕೊಂಡು ಬಂದಿದ್ದು ಮತದಾನದವರೆಗೂ ಹಲವು ಗೊಂದಲಗಳನ್ನು ಮೂಡಿಸಿತ್ತು. ತಳಮಟ್ಟದ ಕಾರ್ಯಕರ್ತರ ಪರಿಗಣನೆಗೆ ತೆಗೆದುಕೊಳ್ಳದೆ ಇರುವುದೇ ಬಿಜೆಪಿ ಸೋಲಲು ಕಾರಣ ಎನ್ನಲಾಗುತ್ತಿದ್ದು,

ಕೊನೆಯದಾಗಿ ಬಿಜೆಪಿಯ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಸೋಲನ್ನು ಒಪ್ಪಿಕೊಂಡಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ರಾಜಶೇಖರ ಹಿಟ್ನಾಳ ಗೆಲುವಿನ ನಗೆ ಬೀರಿದ್ದಾರೆ.

ಇತ್ತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಹಿಟ್ನಾಳ್ ಕುಟುಂಬದ ಅಭಿಮಾನಿಗಳಲ್ಲಿ ಹರ್ಷ ಮನೆ ಮಾಡಿದ್ದು ಪರಸ್ಪರ ಬಣ್ಣ ಎರಚಿ ಸಿಹಿ ಹಂಚಿ ಗೆಲುವನ್ನು ಸಂಭ್ರಮಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!