December 22, 2024

ಜನತಾ ತೀರ್ಪಿಗೆ ತಲೆಬಾಗುವೆ; ಡಾ. ಬಸವರಾಜ ಕ್ಯಾವಟರ್

 

ಕೊಪ್ಪಳ

ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯವಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಮತದಾರ ಪ್ರಭು ನೀಡಿದ ತೀರ್ಪಿಗೆ ತಲೆಬಾಗುವೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ
ಡಾ. ಬಸವರಾಜ್ ಕ್ಯಾವಟರ್ ಹೇಳಿದರು.

ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಪತ್ರಿಕೆಯೊಂದಿಗೆ ಮಾತನಾಡಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಅವಕಾಶ ಕಲ್ಪಿಸಿದ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರಗಳಿಗೆ, ನನ್ನ ಪರ ಪ್ರಚಾರ ಮಾಡಿ ಹಗಲಿರಳು ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ನನ್ನ ಪರವಾಗಿ ಮತದಾನ ಮಾಡಿದ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಮತದಾರರು ನೀಡಿದ ಪ್ರೀತಿ ವಾತ್ಸಲ್ಯಕ್ಕೆ ನಾನೆಂದು ಚಿರಋಣಿಯಾಗಿರುತ್ತೇನೆ.
ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯವಾಗಿದ್ದು ಕೊಪ್ಪಳ ಜನತೆಯ ತೀರ್ಪಿಗೆ ತಲೆಬಾಗುತ್ತೇನೆ ಹಾಗೂ ಕಾರ್ಯಕರ್ತರ ಜೊತೆ ನಿಂತು ಪಕ್ಷ ಸಂಘಟಿಸುವ ಮೂಲಕ ಮತ್ತೊಮ್ಮೆ ಕೊಪ್ಪಳದಲ್ಲಿ ಬಿಜೆಪಿ ಬಾವುಟವನ್ನು ಆರಿಸುವ ಕಾಯಕ ಮಾಡುತ್ತೇನೆ.
ಚುನಾವಣೆಯ ವೇಳೆ ಕೊಪ್ಪಳ ಲೋಕಸಭಾ ಕ್ಷೇತ್ರದ ಕುಷ್ಟಗಿ,ಕೊಪ್ಪಳ,ಗಂಗಾವತಿ, ಯಲಬುರ್ಗಾ, ಕನಕಗಿರಿ, ಮಸ್ಕಿ, ಸಿಂಧನೂರು, ಸಿರುಗುಪ್ಪ ವಿಧಾನಸಭಾ ಕ್ಷೇತ್ರಗಳ ನಾಯಕರು ಕಾರ್ಯಕರ್ತರು ನನ್ನ ಪರ ಪ್ರಚಾರ ಮಾಡಿದ್ದು ಪ್ರಚಾರದ ವೇಳೆ ಮನೆಯ ಮಗನಂತೆ ಪ್ರೀತಿ ತೋರಿದ್ದಾರೆ ಅವರಿಗೆ ನಾನು ಆಭಾರಿಯಾಗಿದ್ದೇನೆ. ಪರಾಜಿತಗೊಂಡರು ಕೂಡ ಜನರ ಮಧ್ಯೆ ಇದ್ದು ಜನರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!