December 23, 2024

ಜಂಗಮ ಸಮಾಜಕ್ಕೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕು..! ರೇಣುಕಾ ಸ್ವಾಮಿಯ ಹತ್ಯೆಗೆ ಜಂಗಮ ಸಮಾಜ ಖಂಡನೆ: ಎಚ್.ಎಂ. ಸಿದ್ದರಾಮಯ್ಯ ಸ್ವಾಮಿ

 

ಗಂಗಾವತಿ: ಕನ್ನಡ ಚಿತ್ರರಂಗದ ಖ್ಯಾತ ಚಿತ್ರನಟ ದರ್ಶನ್ ಅವರ ಕುಮ್ಮಕ್ಕಿನಿಂದ ಬೆಂಗಳೂರಿನಲ್ಲಿ ಹತ್ಯೆಗೀಡಾದ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯ ಕೊಲೆ ಮಾಡಿರುವುದು ಅಕ್ಷಮ್ಯ ಅಪರಾಧ ಹಾಗೂ ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿ ಪೊಲೀಸ್ ವಶದಲ್ಲಿರುವ ಎಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಮತ್ತು ಹತ್ಯೆಗೀಡಾದ ಬೇಡ ಜಂಗಮ ಸಮಾಜದ ಯುವಕ ರೇಣುಕಾ ಸ್ವಾಮಿ ಕುಟುಂಬಕ್ಕೆ ಸರ್ಕಾರ ಸೂಕ್ತ ಭದ್ರತೆ ಹಾಗೂ ಅಗತ್ಯ ನೆರವು ನೀಡಿ ನ್ಯಾಯ ಒದಗಿಸುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮತ್ತು ಜಂಗಮ ಸಮಾಜದ ಹಿರಿಯರಾದ ಎಚ್.ಎಂ. ಸಿದ್ದರಾಮಯ್ಯ ಸ್ವಾಮಿ ಸರ್ಕಾರವನ್ನು ಒತ್ತಾಯಿಸಿ, ಈ ಕೊಲೆ ಪ್ರಕರಣವನ್ನು ಉಗ್ರವಾಗಿ ಖಂಡಿಸಿದ್ದಾರೆ.

ಬಂಧಿತ ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು, ನಮ್ಮ ಬಡಜಂಗಮ ಸಮಾಜ ಹುಬ್ಬಳ್ಳಿ ಯಲ್ಲಿ ನೇಹಾ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ನಮ್ಮ ಸಮಾಜದ ಯುವಕ ಕೊಲೆಯಾಗಿರುವುದು ನಿಜಕ್ಕೂ ದುರ್ದೈವ ಮತ್ತು ರಾಜ್ಯ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಬಿಜೆಪಿ ಹಿರಿಯ ಮುಖಂಡ ಮತ್ತು ಜಂಗಮ ಸಮಾಜದ ಮುತ್ಸದ್ದಿ ಎಚ್.ಎಂ. ಸಿದ್ದರಾಮಯ್ಯ ಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!