December 23, 2024

ಪ್ರತಿಯೊಬ್ಬರೂ ನೈತಿಕ ಹೊಣೆ ಹೊತ್ತು ಗಿಡ ನೆಟ್ಟು ಪೋಷಿಸಬೇಕು:ಯಮನೂರ ಭಟ್*

 

ಗಂಗಾವತಿ.ಜೂ.12: ನಗರದ ನಗರಸಭೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲೂಕಾ ಘಟಕದ ವತಿಯಿಂದ ಪರಿಸರ ದಿನಾಚರಣೆ ನಿಮಿತ್ತ ಬುಧವಾರದಂದು ಸಸಿ ನೆಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಹಯೋಗದಲ್ಲಿ ನಗರಸಭೆ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ತಾಲೂಕು ಅಧ್ಯಕ್ಷ ಯಮನೂರ ಭಟ್ ಅವರು, ಆಧುನೀಕರಣ ಹಾಗೂ ಅಭಿವೃದ್ಧಿ ನೆಪದಲ್ಲಿ ಕಾಡು ನಾಶವಾಗುತ್ತಿದೆ. ನಗರಗಳಲ್ಲಿ ಸಿಮೆಂಟ್ ಕಟ್ಟಡಗಳು ಹೆಚ್ಚುತ್ತಿದ್ದು, ದಿನೆದಿನೇ ಗಿಡ, ಮರಗಳು ನಾಶವಾಗುತ್ತಿದೆ. ಇದರಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಸದ್ಯಕ್ಕೆ ಮಳೆಗಾಲ ಆರಂಭವಾಗಿದ್ದು, ಪ್ರತಿಯೊಬ್ಬರೂ ನೈತಿಕ ಹೊಣೆ ಹೊತ್ತು ಗಿಡ ನೆಟ್ಟು ಪೋಷಿಸಬೇಕು. ನಾವು ಪರಿಸರ ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪ್ರಾಥಮಿಕ ಹಂತವಾಗಿ ಇಂದು ನಗರಸಭೆ ಆವರಣದಲ್ಲಿ ನಮ್ಮ ಸಂಘಟನೆ ವತಿಯಿಂದ ಗಿಡ ನೆಟ್ಟಿದ್ದೇವೆ. ಮುಂದೆ ಹಂತ ಹಂತವಾಗಿ ನಗರದ ಪ್ರಮುಖ ಪ್ರದೇಶಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುವುದು ಎಂದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲೂಕಾ ಘಟಕದ ಪದಾಧಿಕಾರಿಗಳಾದ ಪವನ್ ಕುಮಾರ್ ಗಡ್ಡಿ ತಾಲೂಕು ಪ್ರಧಾನ ಕಾರ್ಯದರ್ಶಿ, ಹುಲಿಯಪ್ಪ ಅರೇಗಾರ್ ಗೌರವ್ಯಾಧ್ಯಕ್ಷ, ಹನುಮೇಶ್ ಕುರುಬರು ನಗರ ಘಟಕ ಅಧ್ಯಕ್ಷ, ಸುನಿಲ್ ಕುಮಾರ್ ಕುಲಕರ್ಣಿ ತಾಲೂಕು ಯುವ ಘಟಕ ಅಧ್ಯಕ್ಷ, ನಯೀಮ್ ಪಾಷಾ ತಾಲೂಕು ಉಪಾಧ್ಯಕ್ಷ, ಮುತ್ತುರಾಜ್ ಕುಷ್ಟಗಿ, ರಮೇಶ್ ಕುಮಾರ್ ತಾಲೂಕು ಉಪಾಧ್ಯಕ್ಷ, ಸುರೇಶ್ ಕುಮಾರ್ ಚನ್ನಳ್ಳಿ ಗಿಡ್ಡಪ್ಪ ತಾಲೂಕು ಆಟೋ ಸಂಚಾಲಕ ಅಧ್ಯಕ್ಷ, ಮಂಜುನಾಥ್ ವೀರಘಂಟಿ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!