December 23, 2024

ನರೇಗಾ ಯೋಜನೆಯಡಿ ಇ-ಟೆಂಡರ್ ಪ್ರಕಟಣೆ ತರಬೇತಿ.

ಕೊಪ್ಪಳ

 

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ರೂ.5.00 ಲಕ್ಷ ವೆಚ್ಚದ ಸಾಮಾಗ್ರಿ ಆಧಾರಿತ ಕಾಮಗಾರಿಗಳ ಅನುಷ್ಠಾನಗೊಳಿಸುವ ಪೂರ್ವದಲ್ಲಿ ಇ-ಟೆಂಡರ್‌ ಪ್ರಕಟಣೆಯನ್ನು ಹೊರಡಿಸುವ ಕುರಿತು ತಾಲೂಕ ಪಂಚಾಯತ ಸಭಾಂಗಣ ಕೊಪ್ಪಳದಲ್ಲಿ ಜಿಲ್ಲಾ ಪಂಚಾಯತ ಮಾನ್ಯ ಉಪಕಾರ್ಯದರ್ಶಿಗಳು ಹಾಗು ಮಹಾತ್ಮಾ ಗಾಂಧಿ ನರೇಗಾ ಜಿಲ್ಲಾ ನೋಡಲ್‌ ಅಧಿಕಾರಿಗಳಾದ ಶ್ಮಲ್ಲಿಕಾರ್ಜುನ ತೊದಲಬಾಗಿ ಇವರ ಅಧ್ಯಕ್ಷತೆಯಲ್ಲಿ ತಾಲೂಕ ಹಾಗು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಗಣಕಯಂತ್ರ ನಿರ್ವಾಹಕರಿಗೆ ಒಂದು ದಿನದ ತಾಲೂಕ ಮಟ್ಟದ ತರಬೇತಿ ಜರುಗಿತು.

 ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ಕೊಪ್ಪಳ ತಾಲೂಕ ಪಂಚಾಯತಿಯ ನರೇಗಾ ಸಹಾಯಕ ನಿರ್ದೇಶಕರಾದ ಯಂಕಪ್ಪ, ಪ್ರಭಾರಿ ಜಿಲ್ಲಾ ಎಂಐಎಸ್‌ ಸಂಯೋಜಕ ಚನ್ನಬಸವ ಪವರ್‌ ಪ್ರಸಟೆಂಷನ್‌ ಮೂಲಕ ಸರ್ಕಾರದ ಸುತ್ತೋಲೆ ಪ್ರಕಾರ ಮಾಹಿತಿ ನೀಡಿ ಇ-ಟೆಂಡರ್‌ ಪ್ರಕಟಣೆ ಹೊರಡಿಸುವ ಕುರಿತು ಹಂತವಾರು ಸವಿವರವಾಗಿ ಮಾಹಿತಿ ನೀಡಿದರು.

ತರಬೇತಿಯಲ್ಲಿ ಅನುಷ್ಠಾನ ಇಲಾಖೆಯ ಸಾಮಾಜಿಕ ಅರಣ್ಯಾಧಿಕಾರಿಗಳು, ಎಲ್ಲಾ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಗಣಕಯಂತ್ರ ನಿರ್ವಾಹಕರು ಭಾಗವಹಿಸಿದ್ದರು.

ಸದರಿ ತರಬೇತಿಯಲ್ಲಿ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ಜಿಲ್ಲಾ ಪಂಚಾಯತಿಯ ಎಡಿಪಿಸಿ ಮಹಾಂತಸ್ವಾಮಿ, ತಾಲೂಕ ಎಂಐಎಸ್‌ ಸಂಯೋಜಕ ಶರಣು ಪಾಟೀಲ್‌, ತಾಂತ್ರಿಕ ಸಂಯೋಜಕರಾದ ಯಮನೂರ, ಕವಿತಾ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಆಡಳಿತ ಸಹಾಯಕ ಮಹೇಶ್‌ ಹಾಜರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!