December 23, 2024

ಮಣ್ಣು ಕಸ ಮಿಶ್ರಿತ ನೀರು ಪೂರೈಕೆ; ಗ್ರಾಮಸ್ಥರ ಆಕ್ರೋಶ

 

ಕುಕನೂರು

 

ಗ್ರಾಮ ಪಂಚಾಯಿತಿ ವತಿಯಿಂದ ಪೂರೈಸುವ ನೀರಿನಲ್ಲಿ ಮಣ್ಣು ಹಾಗೂ ಕಸ ಮಿಶ್ರಿತತವಾಗಿ ಬರುತ್ತಿದ್ದು ಗ್ರಾಮಸ್ಥರು ಸ್ಥಳೀಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

ತಾಲೂಕಿನ ಕುದುರಿಮೋತಿ ಗ್ರಾಮದಲ್ಲಿ ಸ್ಥಳೀಯ ಆಡಳಿತದಿಂದ ಪೂರ್ವ ಸತ್ತಿರುವ ನೀರಿನಲ್ಲಿ ಮಣ್ಣು ಹಾಗೂ ಕಸದ ತ್ಯಾಜ್ಯಗಳು ಕನಿಸಿಕೊಳ್ಳುತ್ತಿದ್ದು ಶುದ್ಧ ನೀರನ್ನು ಪೂರೈಸುವಂತೆ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.

 

ಕಳೆದ ಕೆಲವು ತಿಂಗಳಗಳಿಂದ ಕಲುಷಿತ ನೀರನ್ನು ಗ್ರಾಮ ಪಂಚಾಯಿತಿ ವತಿಯಿಂದ ಪೂರೈಸುತ್ತಿದ್ದು ಅನೇಕವರೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಶುದ್ಧ ನೀರನ್ನು ಪೂರೈಸುವಂತೆ ಗ್ರಾಮಸ್ಥರು ಒತ್ತಾಯಿಸಿದರು ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗದೆ ಕುದುರೆಮೋತಿ ಗ್ರಾಮದ ಗ್ರಾಮಸ್ಥರು ಸ್ಥಳೀಯ ಆಡಳಿತ ಪೂರೈಸಿದ ನೀರನ್ನೇ ಶುದ್ಧೀಕರಿಸಿ, ಕಾಯಿಸಿ ತಮ್ಮ ದಾಹವನ್ನು ನಿಗಿಸಿಕೊಳ್ಳುತ್ತಿದ್ದಾರೆ.

 

 

ಜನಸಾಮಾನ್ಯರು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳಿಗೆ ಜನಸಾಮಾನ್ಯರು ಇಡಿ ಶಾಪ ಹಾಕುತ್ತಿದ್ದಾರೆ.

 

ಕಲುಷಿತ ನೀರನ್ನು ಸೇವನೆಯಿಂದ ಅನೇಕ ರೋಗ ರುಜಣೆಗಳು ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು ಕುಡಿಯಲು ಶುದ್ಧ ನೀರನ್ನು ಪೂರೈಸುವಂತೆ ಬೇಡಿಕೊಳ್ಳುತ್ತಿದ್ದಾರೆ.

 

ಈಗಲಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೆಚ್ಚೆತ್ತು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

 

 

 

ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮಳೆಯ ಅಬ್ಬರಕ್ಕೆ ಪೈಪ್ ಲೈನ್ ತುಂಡಾಗಿದ್ದು ಕಲುಷಿತ ನೀರು ಪುರಕ್ಕೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಪೈಪ್ ಲೈನ್ ಕಾಮಗಾರಿಯನ್ನು ತೊರೆತ ಗತಿಯಲ್ಲಿ ಸರಿಪಡಿಸಿ ನೀರನ್ನು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

 

ಫರೀದಾ ಬೇಗಂ

ಅಧ್ಯಕ್ಷರು ಗ್ರಾ

ಮ ಪಂಚಾಯಿತಿ ಕುದುರಿಮೋತಿ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!