ಕುಕನೂರು .
ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತರ ಜಮೀನಿಗೆ ನುಗ್ಗಿ ಹೆಸರು ಬೆಳೆಯನ್ನು ಹಾನಿ ಮಾಡುತ್ತಿವೆ.
ಜಿಂಕೆಗಳು ರೈತಾಪಿ ಜನರ ಸುಳಿವು ಇಲ್ಲದ ಸಮಯ ನೋಡಿ 70.ರಿಂದ.80.ಕ್ಕೂ ಹೆಚ್ಚು ಜಿಂಕೆಗಳು ತಂಡೊಪ ತಂಡವಾಗಿ ರೈತರ ಜಮೀನಿಗೆ ನುಗ್ಗಿ ಸಣ್ಣ ಹೆಸರು ಬೆಳೆಯನ್ನು ಜಿಂಕೆ ಸಾಲು ಹಿಡಿದು ತಿಂದು ನಾಶ ಮಾಡಿದೆ ಇದರಿಂದ ರೈತರು ಬೇಸತ್ತು ಪುನಃ ಸಾಲ ಸೂಲ ಮಾಡಿ ಹೆಸರು ಬಿತ್ತನೆ ಮಾಡಬೇಕು ಅಂದ್ರು ಸಹ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಹ ಕೊಡುವುದಿಲ್ಲ ಇದಕ್ಕೆ ಕಾರಣ ರೈತ ಸಂಪರ್ಕ ಕೇಂದ್ರದಲ್ಲಿ ಒಂದು ಸಲ ಆಧಾರ್ ಕಾರ್ಡ್ ಎಂಟ್ರಿ ಮಾಡಿ ರೈತರಿಗೆ ಬೀಜ ಕೊಟ್ಟ ಮೇಲೆ ಎರಡನೇ ಸಲ ಬಿತ್ತನೆ ಬೀಜಕ್ಕಾಗಿ ರೈತರು ಖರೀದಿಸಲು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ನಿಮ್ಮ ಆಧಾರ್ ಕಾರ್ಡ್ ಆನ್ಲೈನ್ ನಲ್ಲಿ ಇಂಟ್ರಿ ಆಗಿದೆ ನಿಮಗೆ ಬಿತ್ತನೆ ಬೀಜ ಬರುವುದಿಲ್ಲ ಎಂದು ರೈತರಿಗೆ ಹೇಳಿ ಕಳಿಸುತ್ತಾರೆ.ರೈತರ ಕಷ್ಟ ತಪ್ಪಿಸಬೇಕೆಂದರೆ.
ಕೊಪ್ಪಳ ಜಿಲ್ಲೆಯ ಜಂಟಿ ನಿರ್ದೇಶಕ ಅಧಿಕಾರಿಗಳು ಪುನಃ ಬಿತ್ತನೆ ಮಾಡುವಂತ ರೈತರಿಗೆ ಬಿತ್ತನೆ ಬೀಜ ಕೊಡುವಂತೆ ಮಾಡಬೇಕು
ಈ ವೇಳೆಯಲ್ಲಿ ರೈತರು ಒಂದು ಸಲ ಬಿತ್ತನೆ ಮಾಡಬೇಕಾದರೆ ಸಾಲ ಸೂಲ ಮಾಡಿ ಕಷ್ಟಪಟ್ಟು ಬಿತ್ತನೆ ಮಾಡಿದ್ದಾರೆ ಪುನಃ ರೈತರು ಸಾಲಮಾಡಿ ಬಿತ್ತನೆ ಮಾಡಬೇಕೆಂದರೆ ರೈತರಿಗೆ ಇದು ಕಷ್ಟದ ಮೇಲೆ ಕಷ್ಟವಾಗಿದೆ ಅದಕ್ಕಾಗಿ ಸರ್ಕಾರ ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಹೆಸರು ಬೆಳೆ ಹಾಳಾದ ಪರಿಹಾರವನ್ನು ರೈತರಿಗೆ ಕೊಡಬೇಕೆಂದು ಗ್ರಾಮದ ರೈತನಾದ ದ್ಯಾಮಣ್ಣ ಶಂಬಣ್ಣ ವಿರಾಪೂರ ಇವರು ಆರೋಪಿಸಿದ್ದಾರೆ.
ಕೂಡಲೇ ಸರ್ಕಾರ ಜಿಂಕೆ ತಡೆಗಟ್ಟಲು ಅರಣ್ಯ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಯಾವ ಜಿಲ್ಲೆ ಗಳಲ್ಲಿ ಆದರೂ ಒಂದು ಜಿಂಕೆ ಪಾರ್ಕ್ ನಿರ್ಮಾಣ ಮಾಡಿ ಉತ್ತರ ಕರ್ನಾಟಕದ ರೈತರ ಕಷ್ಟಗಳನ್ನು ತಪ್ಪಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ರವರು ಸರ್ಕಾರಕ್ಕೆ ಆಗ್ರಹಿಸಿದರು.
ಹೌದು ಜಿಂಕೆ ಕಾಟಕ್ಕೆ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಭಾಗದ ರೈತರು ಹಲುವಾರು ವರ್ಷಗಳಿಂದ ಜಿಂಕೆ ಹಾವಳಿಯಿಂದ ಬೇಸತ್ತು ಪ್ರತಿ ವರ್ಷ ಬಿತ್ತನೆ ಮಾಡಿದ ಜಮೀನಿನಲ್ಲಿ ಬೆಳೆ ಕಳೆದುಕೊಂಡು ಸರ್ಕಾರದಿಂದ ಜಿಂಕೆ ಪರಿಹಾರ ಇಲ್ಲದೇ ರೈತರ ಕೈಯಲ್ಲಿ ಹಣ ಇಲ್ಲದೇ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಸರ್ಕಾರದಿಂದ ಯಾವ ರೈತರಿಗೂ ನೈಯ ಪೈಸೆ ಜಿಂಕೆ ಹಾವಳಿ ಪರಿಹಾರ ಕೊಟ್ಟಿರುವುದಿಲ್ಲ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಬರ ಪೀಡಿತ ಪರಿಹಾರ ರಾಜ್ಯಕ್ಕೆ ಬಂದರೂ ಕೂಡ ಒಬ್ಬ ರೈತರಿಗೆ ಪರಿಹಾರ ಬಂದರೆ ಇನ್ನೊಬ್ಬ ರೈತರಿಗೆ ಪರಿಹಾರ ಬಂದಿರುವುದಿಲ್ಲ ಸಮಯಕ್ಕೆ ಸರಿಯಾಗಿ ಯಾವ ರೈತರಿಗೂ ಬರ ಪರಿಹಾರವು ಸಮರ್ಪಕವಾಗಿ ಮುಟ್ಟುವಂತೆ ಆಗಿಲ್ಲ ಈ ಸರ್ಕಾರ ರೈತರನ್ನು ಹೀನಾಯವಾಗಿ ಕಾಣುತ್ತಾರೆ. ಹೀಗಾಗಿ ಜಿಲ್ಲೆಯ ರೈತರು ಸಾಲ ಭಾದೆಯಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಸರ್ಕಾರಕ್ಕೆ ಆಗ್ರಹಿಸಿದರು
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷರಾದ ನಾಗರಾಜ ಗೋನಲ.ರೈತ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ. ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ.ಅಣ್ಣಪ್ಪ ನರೇಗಲ್ಲ್.ಮಾರುತಿ ಮರಡಿ.ಶರಣಪ್ಪ ಹಿರೇಹೋಳಿ.ಗುದ್ನಪ್ಪ ಪೂನ್ನೆದ.ಹೊನ್ನಪ್ಪ ಮರಡಿ.ರವಿ ಹೊಸಮನಿ.ಬಸವರಾಜ ಅಳವಂಡಿ ಇತರರು ಆರೋಪಿಸಿದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು