December 23, 2024

ಕಿನ್ನಾಳದ ಅನು ಪ್ರಕರಣ ಭೇದಿಸಿದ ಪೊಲೀಸರು.

 

 

 

 

 

ಕೊಪ್ಪಳ:

 

ಇಡೀ ಕೊಪ್ಪಳ ಜಿಲ್ಲೆಯನ್ನೆ ಬೆಚ್ಚಿ ಬೆಳೆಸಿದ್ದ

ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ

ನಡೆದ ಅನು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕೊಪ್ಪಳದ ಪೊಲೀಸರು ಯಶಸ್ವಿಯಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

 

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ಒಂಟಗೋಡಿ ಮಾಹಿತಿ ನೀಡುತ್ತಾ ತಾಲೂಕಿನ ಕಿನ್ನಾಳ ಗ್ರಾಮದ 7ನೇ ವಾರ್ಡ್‌ನ ರಾಘವೇಂದ್ರ ಮಡಿವಾಳರ ಅವರ ಪುತ್ರಿ ಅನುಶ್ರೀ ಏಪ್ರಿಲ್ 19ರಂದು ಮಧ್ಯಾಹ್ನ ಕಾಣೆಯಾಗಿದ್ದಳು. ಎರಡು ದಿನಗಳ ಬಳಿಕ ಗೋಣಿಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದಳು, ಬಾಲಕಿಯ ಮನೆ ಪಕ್ಕದಲ್ಲಿಯೇ ವಾಸವಾಗಿದ್ದ ಆರೋಪಿ ಸೀದ್ದಲಿಂಗಯ್ಯ ನಾಯ್ಕಲ್ ಗುಟ್ಕಾ ತರುವಂತೆ ಅನುಶ್ರೀಗೆ ಹೇಳಿ ತರಿಸಿಕೊಂಡಿದ್ದ. ಅದೇ ದಿನ ಮತ್ತೊಂದು ಸಲ ಗುಟ್ಕಾ ತಂದುಕೊಡುವಂತೆ ಹೇಳಿದಾಗ ಇದಕ್ಕೆ ಅನುಶ್ರೀ ಒಪ್ಪಿಲ್ಲ. ಇದಕ್ಕಾಗಿ ಸಿಟ್ಟಿಗೆದ್ದ ಆರೋಪಿ ಪಕ್ಕದಲ್ಲಿದ್ದ ಕಟ್ಟಿಗೆಯಿಂದ ಬಾಲಕಿಯ ತಲೆಗೆ ಜೋರಾಗಿ ಹೊಡೆದಿದ್ದರಿಂದ ಅನುಶ್ರೀ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.

 

 

 

ಈ ಸವಾಲಿನ ಪ್ರಕರಣವನ್ನು ನಮ್ಮ ತಂಡದವರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.ಆರೋಪಿಯ ಬಗ್ಗೆ ತಿಳಿಸಿದವರಿಗೆ ರೂ. 25 ಸಾವಿರ ಬಹುಮಾನ ಘೋಷಿಸಲಾಗಿತ್ತು.ಜನನಿಬಿಡ ಪ್ರದೇಶದಲ್ಲಿಯೇ ಈ ಘಟನೆ ನಡೆದಿದ್ದರೂ ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ವಿಶೇಷ ತಂಡವನ್ನೂ ರಚಿಸಲಾಗಿತ್ತು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹೇಮಂತಕುಮಾರ್ ಆರ್‌., ಡಿವೈಎಸ್‌ಪಿ ಮುತ್ತಣ್ಣ ಸರವಗೋಳ, ಮಹಿಳಾ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಂಜನೇಯ ಡಿ.ಎಸ್‌., ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ವರ ಪಾಟೀಲ, ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ ಡಿ., ತನಿಖೆ ವೇಳೆ ಗ್ರಾಮೀಣ ಠಾಣೆಯ ಪಿಎಸ್‌ಐ ಆಗಿದ್ದ ಡಾಕೇಶ ಸೇರಿ ಇತರ ಸಿಬ್ಬಂದಿಯವರು ಈ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು.

ಆರೋಪಿ ಕೃತ್ಯಕ್ಕೆ ಬಳಸಿದ ಕೋಲು, ಮುಚ್ಚಿಟ್ಟಿದ್ದ ಬಾಲಕಿಯ ಚಪ್ಪಲಿ ಮತ್ತು ಮೃತದೇಹ ಕಾಣದಂತೆ ಅಡ್ಡಲಾಗಿ ಇರಿಸಿದ್ದ ನೀರಿನ ಸ್ಟೀಲ್ ಟ್ಯಾಂಕ್‌ ವಶಕ್ಕೆ ಪಡೆದುಕೊಳ್ಳಲಾಗಿದೆ.

ಘಟನೆ ನಡೆದ ದಿನ ಹಾಗೂ ತನಿಖೆ ಸಲುವಾಗಿ ಪೊಲೀಸರು ಅನೇಕ ಬಾರಿ ಕಿನ್ನಾಳಕ್ಕೆ ತೆರಳಿದ್ದಾಗ ಅವರ ಎದುರೇ ಆರೋಪಿ ಓಡಾಡಿದ್ದ. ಪೊಲೀಸರೇ ಬಂದು ನನ್ನನ್ನು ಬಂಧಿಸಲಿ, ಪ್ರಶ್ನಿಸಲಿ ಎಂದು ಗಟ್ಟಿಗನಾಗಿಯೇ ಇದ್ದ.

ಒಂದು ಸಲ ಪೊಲೀಸರು ಠಾಣೆಗೆ ಕರೆದು ವಿಚಾರಣೆ ಮಾಡಿದ್ದರೂ ಆರೋಪಿ ದೃಢಪಟ್ಟಿರಲಿಲ್ಲ, ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಆರೋಪಿಯನ್ನು ವಶಕ್ಕೆ ಪಡೆದು ತನಗೆ ನಡೆಯುತ್ತಿದೆ ಎಂದು ತಿಳಿಸಿದರು.

 

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡೆ ಬಹುಮಾನ ಘೋಷಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!