December 23, 2024

ಮುಸ್ಲಿಂ ಸಮುದಾಯದಿಂದ ತಾಲೂಕಿನಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

 

 

ಯಲಬುರ್ಗಾ :

ತಾಲೂಕಿನಾಧ್ಯಂತ ಮುಸ್ಲಿಂ ಸಮಾಜದವರು ವಿವಿಧ ಈದ್ಗಾ ಮೈದಾನದಲ್ಲಿ ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಯಲಬುರ್ಗಾ ಪಟ್ಟಣವು ಸೇರಿದಂತೆ ಸೋಮವಾರ ಮುಸ್ಲಿಮರು ಶ್ರದ್ಧೆಯಿಂದ ‘ಬಕ್ರೀದ್’ ಆಚರಿಸಿದರು.

 

ಹೊಸ ಬಟ್ಟೆಗಳನ್ನು ಧರಿಸಿ ಆಗಮಿಸಿದ ಮುಸ್ಲಿಮರು, ಪಟ್ಟಣದ ಮುದೋಳ ರಸ್ತೆಯ ಬದಿ ಇರುವ ಈದ್ಗಾ ಮೈದಾನ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಇದಲ್ಲದೆ ಯಲಬುರ್ಗಾ ಪಟ್ಟಣದ ಮುಸ್ಲಿಂ ಸಮಾಜದ ಖಾಜಿ ಮೊಹಮ್ಮದ್ ಅಬ್ದುಲ್ ಖಾದರ್ ಮುಷಾ

ಮುಖಂಡರುಗಳಾದ ಅಖ್ತಾರ ಸಾಬ ಖಾಜಿ,ಮೈಬೂಬ ಸಾಬ ಮಕಂದಾರ.ಎಂ,ಏಫ್,ನದಾಫ್,ಬಾಬುಸಾಬ ಕಂದಗಲ್.ಬಾಬುಸಾಬ ಕೊತ್ವಾಲ್ ಸಾಬೂದ್ಧಿನ್ ಏಲಿಗಾರ ಶರೀಫ್ ಕೊತ್ವಾಲ್,ಹೈಬಸಾಬ ಕೊಪ್ಪಳ, ರೇಹಮಾನ್ ಸಾಬ ನಾಯಕ.ಪಾಷಾ ಗುಳೇದಗುಡ್ಡ ಮೈನೂದ್ದಿನ್ ಏಲಿಗಾರ,ಖಾಜಾಸಾಬ ಕನಕಗಿರಿ,ಹಸನ್ ಸಾಬ ಮನ್ನಾಪೂರ,ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು

 

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಕ್ರೀದ್ ತ್ಯಾಗಬಲಿದಾನದ ನಿಮಿತ್ಯ ಮುಧೋಳ ಸಂಕನೂರು

ಹಿರೇವಂಕಲಕುಂಟಾ ಮಾಟಲದಿನ್ನಿ ,ತಾಳಕೇರಿ, ಯಾಪಲದಿನ್ನಿ ಹಾಗೂ ವಿವಿಧ ಗ್ರಾಮಗಳಲ್ಲಿನ ಈದ್ಗಾ ಮೈದಾನಗಳು ಮತ್ತು ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.ನಂತರ ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು.

 

ಬಕ್ರೀದ ಹಬ್ಬದ ಪ್ರಯುಕ್ತ ಕುರ್ಬಾನಿ ಪ್ರಾಣಿಬಲಿ ನೀಡಲು ಮುಸ್ಲಿಮರು ಸಿದ್ಧತೆ ಮಾಡಿಕೊಂಡಿದ್ದರು.‌ ನಮಾಜ್ ಮುಗಿದ ನಂತರ ಸಂಪ್ರದಾಯದಂತೆ ಕುರ್ಬಾನಿ ನೀಡಿದರು.ವಿವಿಧ ಮಜೀದಗಳಲ್ಲಿ ಇಸ್ಲಾಂ ಧರ್ಮಗುರು ಖಾರಿ ಜಾಕೀರ್ ಹುಸೇನ್ ಆರೀಫ್‌ ಖಾನ್ ಅವರು, ಹಬ್ಬದ ಸಂದೇಶ ಸಾರಿದರು.ಮಾಟಲದಿನ್ನಿಯ ಆಫೀಜ್ ಮುರ್ತುಜಾ ಸಾಬ ಮೇಲ್ಗಡೆ.

ಹಿರೇವಂಕಲಕುಂಟಾ ಗ್ರಾಮದ ಆಫೀಜ್ ಸಾದಸಾಬ ಮುಲ್ಲಾ ತಾಳಕೇರಿ ಗ್ರಾಮದ ಆಫೀಜ್ ನಾಸೀರ್ ಹುಸೇನ್ ನಾನಾಪೂರ ಯಾಪಲದಿನ್ನಿ ಗ್ರಾಮದ ಗುರುಗಳಾದ ಸಲಿಂಸಾಬ ಭಾಗವಾನ.

ಪೋಟೊ 1) ಯಲಬುರ್ಗಾ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪೋಟೋ 2) ಹಿರೇವಂಕಲಕುಂಟಾ ಗ್ರಾಮದಲ್ಲಿ ಮುಸ್ಲಿಂ ಸಮಾಜದವರಿಂದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸದರು.

ಪೋಟೋ 3) ಮಾಟಲದಿನ್ನಿ ಗ್ರಾಮದ ಈದ್ಗಾ ಮೈದಾನಲ್ಲಿ ಮುಸ್ಲಿಂ ಸಮಾಜದವರು ಪ್ರಾರ್ಥನೆ ಸಲ್ಲಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!