ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ರೈತರಿಗೆ ಕಷ್ಟವಾಗಿದೆ ಇದಕ್ಕೆ ಖಂಡಿಸಿದ ಅಂದಪ್ಪ ಕೋಳೂ
ಕೊಪ್ಪಳ ರಾಜ್ಯದ್ಯಂತ ರೈತರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಕೃಷಿ ಚಟುವಟಿಕೆ ಮಾಡುವಂತ ರೈತರಿಗೆ ಜನಸಾಮಾನ್ಯರಿಗೆ ತುಂಬಾ ಹೊರ ಆಗುತ್ತದೆ ಹಿಂದಿನ ದರದಲ್ಲಿಯೇ ರಾಜ್ಯದ ರೈತರು ಸಂಕಷ್ಟ ಎದುರಿಸಿದ್ದಾರೆ. ಜೊತೆಗೆ ಬರದ ಛಾಯದಿಂದ ರೈತರು ಕುಗ್ಗಿ ಹೋಗಿದ್ದಾರೆ ಇಂಥ ಸ್ಥಿತಿಯಲ್ಲಿ ರಾಜ್ಯದ ರೈತರಿಗೆ ಜನಸಾಮಾನ್ಯರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು ಅತ್ಯಂತ ಖಂಡನಿಯ ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಸರ್ಕಾರಕ್ಕೆ ಆಗ್ರಹಿಸಿದರು
ಈ ವೇಳೆಯಲ್ಲಿ ರಾಜ್ಯಾದ್ಯಂತ ರೈತರಿಗೆ ಮಳೆ ಆದರು ಕಷ್ಟ ಮಳೆ ಆಗದೆಇದ್ದರೂ ಕಷ್ಟ ಎನ್ನುವಂತ ರೀತಿಯಲ್ಲಿ ಕೊಪ್ಪಳ ಜಿಲ್ಲೆ ಸೇರಿದಂತೆ ಕುಕನೂರು-ಯಲಬುರ್ಗಾ ತಾಲೂಕಿನ ಭಾಗದ ರೈತರಿಗೆ ಮಳೆ ಆದ ಹಿನ್ನೆಲೆಯಲ್ಲಿ ರೈತರು ಉಲ್ಲಾಸದಿಂದ ಉಸುಗಿನ ಜಮೀನಿಗೆ ಹೆಸರು ಶೀಂಗಾ ಇತರೇ ಬೆಳೆಯನ್ನು ಬಿತ್ತನೆ ಮಾಡಿದ ಬೆಳೆಗಳು ಮಳೆ ಅವಾಂತರದಿಂದ ಉಸುಗಿನ ಜಮೀನಿನಲ್ಲಿ ಹೆಸರು ಬೆಳೆ ಹುಟ್ಟಿದ ಬೆಳೆ ಹೆಚ್ಚು ಮಳೆನೀರಿಗೆ ಎಲ್ಲಾ ಬೆಳೆ ಬತ್ತಿ ಕೊಳೆತು ಹೋಗಿದೆ ಜಿಲ್ಲೆಯ ರೈತರು ಸಾವಿರಾರು ರೂಪಾಯಿ ಮೌಲ್ಯದ ಬೀಜ ರಸಗೊಬ್ಬರವನ್ನು ಖರ್ಚು ಮಾಡಿ ಬಿತ್ತನೆ ಮಾಡಿದ ಜಮೀನು ಬೆಳೆ ಅತಿವೃಷ್ಟಿಯಿಂದ ಕಾಲಿ ಉಳಿದುಕೊಂಡ ಜಮೀನನ್ನು ಪುನಃ ಸಾಲಸೂಲ ಮಾಡಿ ಬಿತ್ತನೆ ಮಾಡಬೇಕು ಇದೊಂದು ಕಡೆ ಆದರೆ ಈ ಭಾಗದ ಕೆಲವು ರೈತರ ಜಮೀನು ಎರಿ (ಕಪ್ಪುಮಣಿನ) ಜಮೀನಿನಲ್ಲಿ ಹೆಸರು ಬೆಳೆ ಚೆನ್ನಾಗಿದೆ ಇದೆ ಎಂದರೆ ಇನ್ನೊಂದು ಕಡೆ ಹೆಸರು ಬೆಳೆ ಹುಟ್ಟಿದ ಬಳಿಕ ಸಣ್ಣ ಹೆಸರು ಬೆಳೆಯನ್ನು ಜಿಂಕೆಗಳು ಸಾಲು ಸಾಲಾಗಿ ತಿಂದು ಹೆಸರು ಬೆಳೆ ನಾಶವಾಗಿದೆ ಜಿಂಕೆ ಕಾಟಕ್ಕೆ ಈ ಭಾಗದ ರೈತರು ಹಾಳಾಗಿದ್ದಾರೆ. ರಾಜ್ಯದ ರೈತರು ಇಂಥ ಸ್ಥಿತಿಯಲ್ಲಿ ಇದ್ದರೂ ಸಹ ಸಿಎಂ ಸಿದ್ದರಾಮಯ್ಯನವರು ನಮ್ಮ ರಾಜ್ಯದಲ್ಲಿ ದಿಡೀರನೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದಾರೆ. ಹೌದು.ರಾಜ್ಯದ ರೈತರು ಬೆಳೆದ ಸಿರಿಧಾನ್ಯಕ್ಕೆ ಇತರೇ ಬೆಳೆಗಳಿಗೆ ಸಿಎಂ ಸಿದ್ದರಾಮಯ್ಯನವರು ಬೆಲೆ ಏರಿಕೆ ಮಾಡಿಲ್ಲ ಇವರು ಮೊದಲು ರೈತರು ಬೆಳೆದಂತ ಬೆಳೆಗೆ ಬೆಲೆ ಏರಿಕೆ ಮಾಡುವುದು ಬಿಟ್ಟು ಇವರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮೇಲೆ ಸಿಎಂ ಸಿದ್ದರಾಮಯ್ಯನವರ ಕಣ್ಣು ಬಿದ್ದಿದೆ ರೈತರ ಮೇಲೆ ಕಾಳಜಿಇಲ್ಲ ಯಾಕೆ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆ ಮಾಡುವುದು ಅಗತ್ಯಇದ್ದಿಲ್ಲ ಪೆಟ್ರೋಲ್, ಡೀಸೆಲ್ ದರವನ್ನು ಕೂಡಲೇ ಸರ್ಕಾರ ಹಿಂದಕ್ಕೆ ಪಡೆಯಿರಿ ರಾಜ್ಯ ಸರ್ಕಾರ ಪ್ರತಿ ಪೆಟ್ರೋಲ್ ಲೀಟರಗೆ 3 ರೂ.ಹಾಗೂ ಡೀಸೆಲ್ 3.50 ರೂ. ಏರಿಸಿದೆ. ಈ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆದಂತಾಗಿದೆ ಕೂಡಲೇ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ಇಳಿಸುವಂತೆ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ನಾಗರಾಜ ಗೋನಾಲ.ಇವರು ಆಗ್ರಹಿಸಿದರು
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು