ಮೊದಲ ಬಾರಿಗೆ ನನಗೆ ಜನ ಮನ್ನಣೆ; ಡಾ.ಬಸವರಾಜ ಕ್ಯಾವಟರ್
ಕುಷ್ಟಗಿ:ಜೂ ೧೮
ನನಗೆ ಸೋಲಾಗಿರಬಹುದು ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತೆಗೆದುಕೊಂಡ ಮತಗಳಿಗಿಂತ ಅತಿ ಹೆಚ್ಚು ಮತಗಳು ನನಗೆ ಬಂದಿವೆ ಕಾರಣ ಮುಂದೆ ನಾನು ನನ್ನ ವೈದ್ಯಕೀಯ ಸೇವೆಯೊಂದಿಗೆ ಸದಾ ಪಕ್ಷದ ಮತ್ತು ಕಾರ್ಯಕರ್ತರ ಸಲುವಾಗಿ ದುಡಿಯುವೆ ಎಂದು ಲೋಕಸಭಾ ಪರಾಜಿತ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಬಿಜೆಪಿಯ ಅಂಜನಾದ್ರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಕೇಂದ್ರ ದಲ್ಲಿ ನಮ್ಮ ಸರಕಾರವು ನರೇಂದ್ರ ಮೋದಿಯವರು ಮತ್ತೊಂದು ಬಾರಿ ಪ್ರಧಾನಿಯಾಗಿದ್ದಾರೆ ಅವರ ಕೈ ಬಲಪಡಿಸುವ ಸಲುವಾಗಿ ಚುನಾವಣೆ ಎದುರಿಸಿದ್ದೇವೆ ನನ್ನ ಸೋಲಿಗೆ ಯಾರನ್ನು ದೂಷಿಸುವದಿಲ್ಲಾ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಗಳು ಮತ್ತು ರಾಜ್ಯದ ಮುಖ್ಯ ಮಂತ್ರಿ ಆದಿಯಾಗಿ ಎಲ್ಲರೂ ಈ ಕ್ಷೇತ್ರದ ಗೆಲುವಿಗಾಗಿ ನಿರಂತರವಾದ ಪ್ರಯತ್ನ ಕೂಡಾ ಕಾರಣ ಎಂದು ಹೇಳಿದರು.
ಶಾಸಕ ಹಾಗೂ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಾತನಾಡಿ ಡಾ ಬಸವರಾಜ ಅವರು ಸೋಲಿನಿಂದ ಕಂಗೆಡದೆ ಪಕ್ಷದ ಸಂಘಟನೆಯಲ್ಲಿ ತೋಡಗಿಸಿಕೊಳ್ಳುವಂತೆ ಹೇಳಿದ ಅವರು ಮುಂಬರುವ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಚುನಾವಣೆ ಬಗ್ಗೆ ಕಾರ್ಯಕರ್ತರೊಂದಿಗೆ ಬೇರೆಯಬೇಕು .ಸೋಲು ಗೆಲುವು ಹೊಸತಲ್ಲಾ ನಾನು ಕೂಡಾ ಸೋತು ಗೆದ್ದಿದ್ದೆನೆ ಎಂದು ಸಮಾಧಾನದ ಮಾತುಗಳು ಹೇಳಿದರು.ಪಕ್ಷವನ್ನು ಸಂಘಟಿಸುವ ಮೂಲಕ ಮುಂದಿನ ದಿನಗಳಲ್ಲಿ ಪುಟಿದೇದ್ದು ಬಿಜೆಪಿಯ ಭದ್ರ ಬುನಾದಿ ಹಾಕೋಣ ಎಂದು ಹೇಳಿದರು.
ಪ್ರಾಸ್ತಾವಿಕ ವಾಗಿ ಬಿಜೆಪಿಯ ಮಂಡಲ ಅಧ್ಯಕ್ಷ ಮಹಾಂತೇಶ ಬದಾಮಿ, ಪಕ್ಷದ ಮುಖಂಡರಾದ ಫಕೀರಪ್ಪ ಚಳಗೇರಿ, ಕೆ.ಮಹೇಶ, ಜೆಡಿಎಸ್ ಅಧ್ಯಕ್ಷ ಶರಣಪ್ಪ ಕುಂಬಾರ,ಪ್ರಭಾಕರ ಚಿಣಿ ಮಾತನಾಡಿ ಸೋಲು ಗೆಲುವಿನ ಮೆಟ್ಟಿಲು, ಕಾರಣ ಶಾಸಕರು ಸಣ್ಣಪುಟ್ಟ ಜಾತಿಗಳನ್ನು ಗಣನೆಗೆ ತೆಗೆದುಕೊಂಡು ಮುಂಬರುವ ತಾಲೂಕು ಪಂಚಾಯತ ಜಿಲ್ಲಾ ಪಂಚಾಯತ ಚುನಾವಣೆ ಎದುರಿಸಲಿ ಆಗ ಅತಿ ಹೆಚ್ಚು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾದ್ಯ ಆ ಮುಖಾಂತರ ವಿರೋಧ ಪಕ್ಷದ ಟೀಕೆಗೆ ಉತ್ತರಿಸೋಣ ಎಂದು ಅಭಿಪ್ರಾಯ ಪಟ್ಟರು.
ವರದಿಗಾರರು :ಶರಣಪ್ಪ ಲೈನದ್ ಕುಷ್ಟಗಿ
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು