December 23, 2024

ಬೆಲೆ ಏರಿಕೆಯ ಮೂಲಪುರುಷರು ಬಿಜೆಪಿಗರು.    ಭಾಗ್ಯಗಳ ಮೂಲಕ ರಾಜ್ಯದ ಜನತೆಯ ಕಲ್ಯಾಣ; ಶಿವರಾಜ ತಂಗಡಗಿ 

 

 

ಕೊಪ್ಪಳ.

 

ಶಾಸಕ ರಾಘವೇಂದ್ರ ಹಿಟ್ನಾಳ ಪ್ರತಿಭಟನೆಯ ನೇತೃತ್ವದಲ್ಲಿ ನಗರದ ಅಶೋಕ್ ವೃತ್ತದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ಏಕವಚನದ ವಾಗ್ದಾಳಿ ನಡೆಸಿದ್ದನ್ನು ವಿರೋದಿಸಿ ಶಾಸಕ ರೆಡ್ಡಿ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಲಾಯಿತು.

 

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಜನಗಳಿಗೆ ಭಾಗ್ಯಗಳ ಮೂಲಕ ರಾಜ್ಯದ ಜನತೆಯ ಕಲ್ಯಾಣ ಮಾಡುತ್ತಿದೆ.ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸುತ್ತಿರುವ ಬಿಜೆಪಿಗರು ಬೆಲೆ ಏರಿಕೆಯನ್ನು ಜನರು ಮೇಲೆ ಏರಿದ್ದರಲ್ಲಿ ಮೊದಲಿಗರು.

ಇವರಿಗೆ ರಾಜ್ಯ ಸರ್ಕಾರದ ಬಗ್ಗೆಯಾಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸುವ ನೈತಿಕತೆ ಕಳೆದುಕೊಂಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ಏರಿಕೆ ಬಗ್ಗೆ ಮಾತನಾಡುವ ಬಿಜೆಪಿಗರು ಇಂಧನದ ದರ ಶತಕ ದಾಟಲು ಯಾರು ಕಾರಣ ಎಂಬುದನ್ನು ತಿಳಿದುಕೊಳ್ಳಿ.

ಗ್ಯಾರಂಟಿಗಳ ಯೋಜನೆಯಿಂದ ಇಡೀ ದೇಶದ ಗಮನ ಸೆಳೆದಿರುವ ಸಿದ್ದರಾಮಯ್ಯನವರ ವಿರುದ್ಧ ಟೀಕಿಸುವ ನೈತಿಕ ಹಕ್ಕು ಜನಾರ್ದನ ರೆಡ್ಡಿಯಾಗಲಿ ಅಥವಾ ಇನ್ನಿತರ ಬಿಜೆಪಿಯ ಮುಖಂಡರಿಗಾಗಲಿ ಇಲ್ಲ ಜನಾರ್ದನ ರೆಡ್ಡಿ ಅವರು ಮಣ್ಣು ಕಳ್ಳತನ ಮಾಡಿದ ಆರೋಪದಿಂದ ಬಳ್ಳಾರಿ ಜಿಲ್ಲೆಯಿಂದ ಗಡಿಪಾರು ಆಗಿದ್ದಾರೆ ಇನ್ನು ಮುಂದಾದರು ಜವಾಬ್ದಾರಿಯುತು ಹೆಜ್ಜೆ ಇಡದಿದ್ದರೆ ಕೊಪ್ಪಳ ಜಿಲ್ಲೆಯಿಂದಲೂ ಸಹ ಗಡಿಪಾರಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!