December 23, 2024

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಯಲಬುರ್ಗಾ.

 

ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ

ಭಾರತೀಯ ಜನತಾ ಪಾರ್ಟಿ ಯಲಬುರ್ಗಾ ಮಂಡಲದ ವತಿಯಿಂದ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

 

ಪಟ್ಟಣದ ಬಿಜೆಪಿ ಕಚೇರಿಯಿಂದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ವರೆಗೆ ಬ್ಲಂಟಿಂಗ್ ಹಿಡಿದು ಪಾದಯಾತ್ರೆ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಗಳನ್ನು ಕೂಗುತ್ತಾ ಸಾಗಿದರು.

 

 

ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಮಂಡಲದ ಅಧ್ಯಕ್ಷರಾದ ಮಾರುತಿ ಗಾವರಾಳ ಮಾತನಾಡಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದೆ. ಗ್ಯಾರಂಟಿ ಗಳಿಗೆ ಹಣವನ್ನು ಒಂದುಕ್ಕೆ ಮಾಡಿದ್ದೇವೆ ಎಂದು ಹೇಳಿರುವ ಕಾಂಗ್ರೆಸ್ ನಾಯಕರು ಅಗತ್ಯ ವಸ್ತುಗಳ ಬೆಲೆಗಳನ್ನು ಸೇರಿಸಿ ಗ್ಯಾರಂಟಿಗಳಿಗೆ ಹಣವನ್ನು ಜೋಡಿಸುತ್ತಿದ್ದಾರೆ. ನಮ್ಮಿಂದಲೇ ಕಿತ್ತುಕೊಂಡು ಪುನಹ ನಮಗೆ ಕೊಡುವ ತಂತ್ರಗಾರಿಕೆಯನ್ನು ಕಾಂಗ್ರೆಸ್ಸಿನವರು ಎನಿದೆದ್ದು ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮೂರು ರೂಪಾಯಿ ಹೆಚ್ಚಳ ಮಾಡಿ ಬಡ ಜನರ ಮೇಲೆ ಹೆಚ್ಚಿನ ಹೊರೆಯನ್ನು ಹೋರಿಸಿದ್ದಾರೆ ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗವನ್ನು ಕೈಬಿಡಬೇಕೆಂದು ಅಗ್ರಹಿಸಿದರು.

ನಂತರ ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕಾಗಿ ಐವತ್ತು ನಾಲ್ಕು ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ತೆಗೆದಿದ್ದರೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಅಂತ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಅದಕ್ಕೆ ಗ್ಯಾರಂಟಿಗಳ ಲೇಪನವನ್ನು ಹಚ್ಚುತ್ತಿರುವ ಕಾಂಗ್ರೆಸ್ಸಿಗರು ಜನರ ಜೇಬಿಗೆ ಕತ್ತರೆ ಹಾಕುವ ಕೆಲಸ ಮಾಡುತ್ತಿದ್ದಾರೆ ಸರ್ಕಾರ ರಚನೆಯಾಗಿ ಒಂದು ವರ್ಷಗಳು ಕಳೆದರೂ ಕೂಡ ಯಾವೊಂದು ಅಭಿವೃದ್ಧಿ ಕಾರ್ಯಗಳು ಸಹ ನಡೆದಿಲ್ಲ. ಯಾವಂದೂ ಕಾಮಗಾರಿಗೂ ಗುದ್ದಲಿ ಪೂಜೆ ಸಹ ನಡೆದಿಲ್ಲ. ಬರೀ ಗ್ಯಾರಂಟಿಗಳನ್ನು ತೋರಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಕೊಕ್ ನೀಡಿ ಭ್ರಷ್ಟಾಚಾರದಲ್ಲಿ ಮುನಿಗಿದೆ.

 

ಹೊಸ ಕಾಮಗಾರಿಗಳನ್ನು ಮಾಡುವುದಿಲ್ಲ ಹಳೆಯ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲು ಸಹ ಇವರಲ್ಲಿ ಸಮಯವಿಲ್ಲ. ಯಾವ ಇಲಾಖೆ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರ ,ತಡೆಗಟ್ಟ ಕಾನೂನು ಸುವ್ಯವಸ್ಥೆ ಎಲ್ಲಂದರಲ್ಲಿ ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ ,ಅತ್ಯಾಚಾರ, ಅನಾಚಾರಗಳು ಹೆಚ್ಚಾಗಿದ್ದರು ಕಂಡರೂ ಕಾಣದಂಗೆ ಕಣ್ಣು ಮುಚ್ಚಿ ಕುಳಿತಿದೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕುಟುಕಿದರು.

 

ಈ ವೇಳೆ ಮುಖಂಡರಾದ ಬಸವಲಿಂಗಪ್ಪ ಬೂತೆ, ವೀರಣ್ಣ ಹುಬ್ಬಳ್ಳಿ, ಜೆಡಿಎಸ್ ಮುಖಂಡರಾದ ಮಲ್ಲನಗೌಡ್ರು ಕೋಣನಗೌಡ್ರು, ಪ್ರಮುಖರಾದ ಸಿ ಎಚ್ ಪೊಲೀಸ್ ಪಾಟೀಲ್, ರತನ್ ದೇಸಾಯಿ, ಅಯ್ಯನಗೌಡ್ರು ಕೆಂಚ್ಚಮನವರ್, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!