December 23, 2024

ಹಕ್ಕು ಪತ್ರ ವಿತರಣೆಗಾಗಿ ಪ್ರತಿಭಟನೆ

ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಕೊಪ್ಪಳದ ಸಿಇಓ ರಾಹುಲ್ ರತ್ನಂ ಪಾಂಡೆ.

 

 

ಕುಕನೂರ

 

ತಾಲೂಕಿನ ಮಂಗಳೂರು ಗ್ರಾಮದಲ್ಲಿ ಗುರುವಾರ ದಿವಸ ಗ್ರಾಮ ಪಂಚಾಯಿತಿಯ ಮುಂದೆ 350ಕ್ಕೂ ಹೆಚ್ಚು ಕುಟುಂಬಗಳಿಗೆ 20 ವರ್ಷಗಳಾದರೂ ಕೂಡ ಹಕ್ಕುಪತ್ರ ವಿತರಣೆ ಯಾಗದ ಹಿನ್ನೆಲೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

 

ಪ್ರತಿಭಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿಯ ಸಿಇಒ ರಾಹುಲ್ ರತ್ನಂ ಮನವಿ ಸ್ವೀಕರಿಸಿ ಮಾತನಾಡಿ.

ಮಂಗಳೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಹಕ್ಕುಪತ್ರ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಅಲ್ಲಿಯ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ವ್ಯವಸ್ಥೆಯನ್ನು ಮಾಡುತ್ತೇವೆ. ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದೇವೆ ಮಾನ್ಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಹಕ್ಕು ಪತ್ರ ನೀಡುವಂತ ಕೆಲಸ ಮಾಡುತ್ತೇವೆ ಜೊತೆಗೆ ಅಲ್ಲಿಯ ಮೂಲಭೂತ ಸೌಕರ್ಯಗಳನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸುವೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ಕೂಡ ಮಾಡುತ್ತೇವೆ ನಿಮ್ಮ ಒಂದು ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತೇವೆ ಎಂದರು.

 

ಹಕ್ಕು ಪತ್ರ ವಿತರಣೆ ಕುರಿತು ಪ್ರತಿಭಟನೆಯು ಶಾಂತಿಯುತವಾಗಿ ಜರಗಿತು

 

 

 

 

ಈ ಸಂದರ್ಭದಲ್ಲಿ ಕುಕನೂರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್, ಪಿಡಿಓ ನೀಲಂ ಟೀ ಚಳಗೇರಿ, ಗ್ರಾಮ್ ಪಂಚಾಯತಿ ಅಧ್ಯಕ್ಷರು ಮುತ್ತಣ್ಣ ಸಕ್ರಪ್ಪ ಚಿನ್ನೂರು. ಗ್ರಾಮ ಪಂಚಾಯತಿಯ ಸದಸ್ಯರುಗಳು, ಪ್ರತಿಭಟನೆಯ ಉಸ್ತುವಾರಿಯನ್ನು ವಹಿಸಿರತಕ್ಕಂತಹ ರವಿ ನಿಂಗಪ್ಪ ಆಗೋಲಿ , ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗ ಫಲಾನುಭವಿಗಳು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!