December 23, 2024

ಗಾವರಾಳ ಶಾಲೆಯಲ್ಲಿ ಯೋಗ ದಿನಾಚರಣೆ.

ಯೋಗ ದಿನಾಚರಣೆಯ ಪ್ರಯುಕ್ತ ಗಾವರಾಳ ಶಾಲೆಯಲ್ಲಿ ಯೋಗವನ್ನು ಮಾಡಲಾಯಿತು

ಕುಕನೂರತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ದಿನಾಚರಣೆಯ ದಿನದಂದು ಮಕ್ಕಳಿಗೆ ಯೋಗ ಮಾಡಿಸಲಾಯಿತು, ಯೋಗದ ಅರ್ಥ ಹನ್ನೆಲ್ಲೆ ಹಾಗೂ ಅದರಿಂದ ಆಗುವ ಆಧ್ಯಾತ್ಮಿಕ ಮತ್ತು ಆಯುರ್ವೇದ ಮಹತ್ವ ಕುರಿತು ಶ್ರೀ ಬಸವರಾಜ ಉಪ್ಪಿನ ಶಿಕ್ಷಕರು ಪ್ರಾಸ್ತಾವಿಕವಾಗಿ ಹೇಳಿದರು. ಶ್ರೀ ಖಾಜಾಸಾಬ್ ಹೊಸಳ್ಳಿ ಶಿಕ್ಷಕರು ಮಕ್ಕಳಿಗೆ ವಿವಿಧ ಪ್ರಕಾರಗಳ ಬಗ್ಗೆ ತಿಳಿಸುತ್ತಾ ಯೋಗವನ್ನು ಮಾಡಿಸಿದರು. ಕುಕನೂರ ಗ್ರಾಮೀಣ ಕ್ಲಸ್ಟರ್ ಸಿ,ಆರ್, ಪಿ ಗಳಾದ ಶ್ರೀ ದೇವಪ್ಒ ತಳವಾರ ಮಾತನಾಡಿ ಯೋಗ ಈ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿನಿತ್ಯ ಇದ್ದಾಗ ಮಾತ್ರ ಉತ್ತಮ ಪ್ರಯೋಜನ ದೊರೆಯುವದು ಎಂದು ಹೇಳಿದರು.ಶ್ರೀ ಶರಣಪ್ಪ ಹಡಪದ ಮುಖ್ಯೋಪಾಧ್ಯಾಯರು, ಶಿಕ್ಷಕರಾದ ಶ್ರೀ ನಾಗರಾಜ ಹನಸಿ, ಶ್ರೀ ಉಮಾಮಹೇಶ್ವರ ಜಡಿಮಠ ಅವರು ಯೋಗದ ಪ್ತಯೋಜನ ಮಾಡುಕೊಳ್ಳುವಂತೆ ಮಕ್ಕಳಿಗೆ ತಿಳಿಸಿ ತಪ್ಪದೆ ದಿನಾಲು ಮಾಡುವಂತೆ ಸಲಹೆ ನೀಡಿದರು ಕೊನೆಯದಾಗಿ ಯೋಗದ ವಿವಿಧ ಪ್ರಕಾರಗಳ ಕುರಿತು ಹೇಳುತ್ತಾ ಕು. ರಾಜೇಶ್ವರಿ ಗುರುಮಾತೆಯವರು ಯೋಗ ದಿನದ ಕಾರ್ಯಕ್ರಮಕ್ಕೆ ವಂದನಾರ್ಪಣೆ ಸಲ್ಲಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!