ಮುಂಗಾರು ಮರು ಬಿತ್ತನೆ ಪರಿಹಾರಕ್ಕಾಗಿ ಅಂದಪ್ಪ ಕೋಳೂರ ಆಗ್ರಹ.
ಕೊಪ್ಪಳ.
ಯಾರೇ ಭಾಗಗಳ ಗ್ರಾಮಗಳಲ್ಲಿ ರೈತರು ಕಳೆದ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದರು.
ಕಳೆದ ವರ್ಷ ಕೃಷಿಗಾಗಿ ರೈತರು ಮಾಡಿದ ಸಾಲವನ್ನು ತೀರಿಸಲಿಕ್ಕಾಗದೇ ಇನ್ನೂ ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ರೈತರಿಗೆ ಬರ ಪರಿಹಾರ ಕೊಡದೇ ಇದ್ದರು ಸಹ ಚುಣಾವಣೆ ಮುನ್ನವೇ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮೂರೂವರೆ ಸಾವಿರ ಕೋಟಿ ರೂಪಾಯಿ ಬರ ಪರಿಹಾರದ ಹಣ ಬಂದರು ಸಹ ರಾಜ್ಯ ಸರ್ಕಾರ ಒಬ್ಬ ರೈತರಿಗೆ ಹಾಕಿದರೆ ಇನ್ನೊಬ್ಬ ರೈತರಿಗೆ ಹಾಕಿರುವುದಿಲ್ಲ ಕೂಡಲೇ ರಾಜ್ಯ ಸರ್ಕಾರ ಎಲ್ಲಾ ರೈತರಿಗೆ ಮುಟ್ಟುವಂತೆ ಬರ ಪರಿಹಾರವನ್ನು ಹಾಕಬೇಕೆಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಆಗ್ರಹಿಸಿದರು
ಇಂತಹ ಸಂದರ್ಭದಲ್ಲಿ, ಈ ವರ್ಷ ಮಳೆ ಆದರು ಕೂಡ ಕುಕುನೂರು ತಾಲೂಕಿನ ಅನೇಕ ಗ್ರಾಮಗಳ ರೈತರ ಸ್ಥಿತಿ. ಕಳೆದ ವರ್ಷ ಬರಗಾಲದಿಂದ ಕೈ ಸುಟ್ಟುಕೊಂಡಿದ್ದ ರೈತರಿಗೆ, ಈ ಬಾರಿ ಮುಂಗಾರು ಮಳೆ ಹೊಸ ಆಶಾಭಾವನೆ ಮೂಡಿಸಿದೆ. ಇದೇ ಕಾರಣಕ್ಕಾಗಿ ರೈತರು ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದಾರೆ. ಬೀಜ ಮೊಳಕೆ ಒಡೆದಿದ್ದು,ಚೆನ್ನಾಗಿ ಬೆಳೆ ಕೂಡಾ ಬರುತ್ತಿದೆ. ಎನ್ನುವ ನಿರೀಕ್ಷೆಯಲ್ಲಿದ್ದರೂ ಆದರೆ ಈ ಬಾರಿ ಹೆಸರು ಬೆಳೆ ಮೊಳಕೆ ಒಡೆದು ಎರಡರಿಂದ ನಾಲ್ಕು ಎಲೆ ಹೆಸರು ಬೆಳೆ ಮೇಲೆ ಬಂದಾಗ ಇಪರಿತ ಮಳೆಯಿಂದ ಬಿತ್ತನೆ ಮಾಡಿದ ಹೆಸರು ಬೆಳೆಗೆ ನೀರಿನ ತೇವಾಂಶ ಹೆಚ್ಚಾದ್ದರಿಂದ ಎಳೆ ಹೆಸರು ಬೆಳೆ ಹಾಳಾದ ಹಿನ್ನೆಲೆಯಲ್ಲಿ ರೈತರು ಪುನಃ ಸಾಲಸೂಲ ಮಾಡಿ ಮುಂಗಾರು ಹಂಗಾಮಿನಲ್ಲಿ ರೈತಾಪಿ ಜನ ಮೆಕ್ಕೆಜೋಳ ಸೇರಿದಂತೆ ಇತರೇ ಬೆಳೆಗಳನ್ನು. ಮರು ಬಿತ್ತನೆ ಕಾರ್ಯ ಮಾಡಿದ್ದಾರೆ. ಇದು ರೈತರಿಗೆ ಈ ಬಾರಿಯು ಮಳೆ ಆದ್ರುಕೂಡ ಸಂಕಷ್ಟವನ್ನು ಎದುರುಸಬೇಕಾಗಿದೆ ಇದರಿಂದ ನೊಂದ ರೈತರಿಗೆ ಸರ್ಕಾರ ಹಾಳಾದ ಪರಿಹಾರ ಕೊಡಬೇಕು ರೈತರು ತುಂಬಿದ ಬೆಳೆವಿಮೆ ಬಂದಿಲ್ಲ ಕೂಡಲೇ ಬೆಳೆವಿಮೆ ಕೊಡಬೇಕು ಜಿಂಕೆ ಹಾಳು ಮಾಡಿದ ಪರಿಹಾರ ಕೊಡಬೇಕೆಂದು ಗ್ರಾಮದ ರೈತನಾದ ಮಲ್ಡರಡೆಪ್ಪ ಹನಸಿ ಹಾಗೂ ರೈತ ಮಹಿಳೆಯರಾದ ಮಲ್ಲಮ್ಮ ಅಸೂಟಿ ಇವರು ಸರ್ಕಾರಕ್ಕೆ ಪರಿಹಾರ ಕೊಡಲು ಆಗ್ರಹಿಸಿದರು.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು