December 23, 2024

ಮಲೇರಿಯಾ ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಮೊದಲ ಆದ್ಯತೆ ನೀಡಿ…

ಗಂಗಾವತಿ.26
ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಸೊಳ್ಳೆಗಳ ನಿಯಂತ್ರಣ ಹಾಗೂ ಇತರೆ ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು,ನಗರಸಭೆ ಸಿಬ್ಬಂದಿ ಅರಿವು ಮೂಡಿಸಬೇಕು ಎಂದು ನಗರಸಭೆ ಸದಸ್ಯಮಹಮದ್ ಉಸ್ಮಾನ್ ಸೂಚನೆ ನೀಡಿದರು. ಗಂಗಾವತಿ ನಗರದ ಕಿಲ್ಲಾ ಏರಿಯ ಸಬ್ ಸೆಂಟರ್ ವ್ಯಾಪ್ತಿಯಲ್ಲಿ ಮಳೆಗಾಲ ಹೆಚ್ಚಾಗುತ್ತಿರುವದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟುವ ಕುರಿತು ವಹಿಸಬೇಕಾದ ಮುಂಜಾಗ್ರತೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೊಳ್ಳೆಗಳ ತಾಣ ನಾಶವಾಗುತ್ತೆ ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಗ್ ಚಿಕೂನ್‌ ಗುನ್ಯಾ, ಮೆದುಳು ಜ್ವರ ಮತ್ತಿತರ ಕಾಯಿಲೆಗಳು ಹರಡದಂತೆ ಎಚ್ಚರವಹಿಸಬೇಕು ಸೊಳ್ಳೆಗಳ ತಾಣಗಳನ್ನು ನಾಶಪಡಿಸಬೇಕು ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರು ಗ್ರಾಮದ ಪ್ರತಿಮನೆಗೂ ಭೇಟಿ ನೀಡಿ ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಿ, ಗುಂಪು ಸಭೆಗಳನ್ನು ನಡೆಸಿ
ಆರೋಗ್ಯ ಶಿಕ್ಷಣ ನೀಡಿ ಎಂದು ಹೇಳಿದರು.
ಸೊಳ್ಳೆಗಳ ನಿಯಂತ್ರಣಕ್ಕೆ ಸಂಜೆ ಸಮಯದಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಲು ಸಲಹೆ ನೀಡಿ, ಮನೆಗಳಲ್ಲಿ ತಪ್ಪದೇ ಸೊಳ್ಳೆ ಪರದೆಗಳನ್ನು ಕಟ್ಟಿಕೊಳ್ಳಲು ಅರಿವು ಮೂಡಿಸಿ, ಮನೆಯ ಪಕ್ಕದ ಕುಂಟೆಗಳಲ್ಲಿ ಸೊಳ್ಳೆಗಳ ಲಾರ್ವ ನಾಶಕಗಳ ಬಳಕೆಗೆ ಸೂಚಿಸಿದ ಅವರು, ಸೊಳ್ಳೆಗಳನಿಯಂತ್ರಣದಿಂದ ಈ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು ಎಂದರು. ಸೊಳ್ಳೆಗಳ ನಿಯಂತ್ರಣ ಅತಿ ಮುಖ್ಯವಾಗಿದ್ದು, ಮನೆಗಳಲ್ಲಿ ಟೈರುಗಳು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಮನೆಯ ನೀರಿನ ಮೂಲಗಳನ್ನು ಸೊಳ್ಳೆ ಪ್ರವೇಶಿಸದಂತೆ ಭದ್ರಪಡಿಸಿ ಎಂದು ಸಲಹೆ ನೀಡಿ, ಮನೆಯ ಪಕ್ಕ ಇರುವ ಚರಂಡಿಗಳು ಮುಚ್ಚಿರಬೇಕು ಕೊಳಚೆ ನೀರು ನಿಲ್ಲದಂತೆ ಗ್ರಾಮೀಣ ಪ್ರದೇಶದಲ್ಲಿ ರೋಗಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿ, ಸ್ವತ್ಛತೆಯ ಪರಿಸರ
ನಿರ್ಮಾಣಕ್ಕೆ ಶ್ರಮಿಸಿ, ಗ್ರಾಮದ ನೀರಿನ ಮೂಲಗಳ ಬಳಿ ಕೊಳಚೆ ನಿಲ್ಲದಂತೆ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಸಾವಿತ್ರಿ,ಹನಮೇಶ,ಮಲೇರಿಯಾ ಲಿಂಕ್ ವರ್ಕರ್ ರಮೇಶ ಸಾಲ್ಮಾನಿ,ಆಶಾ ಕಾರ್ಯಕರ್ತೆ ,ಲಾಲಬಿ, ರಾಧಾ,ಗೌಸೀಯಾ,ರೈಮಾನಬಿ,ನಾಗವೇಣಿ ಸೇರಿದಂತೆ ಇತರರು ಇದ್ದರು

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!