December 22, 2024

ಕುಷ್ಟಗಿ ತಾಲೂಕಿನ 3ನೇಯ ವಾರ್ಡ್‌ನ ಸಮಸ್ಯೆ ಕುರಿತು ಜಿಲ್ಲಾ ಅಧಿಕಾರಿಗಳಿಗೆ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಇವರಿಗೆ ಮನವಿ

ಕುಷ್ಟಗಿ:ಜೂ ೨೭ ಕೊಪ್ಪಳ ಜಿಲ್ಲಾಧಿಕಾರಿ ನಳಿನಿ ಅತುಲ್ ಮತ್ತು ಸಹಾಯಕ ಆಯುಕ್ತರು ಹಾಗೂ ಕುಷ್ಟಗಿ ಪುರಸಭೆ ಆಡಳಿತಾಧಿಕಾರಿ ಕ್ಯಾ. ಮಹೇಶ್ ಮಾಲಗತ್ತಿ ರವರಿಗೆ ಇಂದು 3ನೆ ವಾರ್ಡಿನ ರಹವಾಸಿಗಳ ಸಂಘದ ಪದಾಧಿಕಾರಿಗಳು ಮೂಲಭೂತ ಸೌಕರ್ಯಗಳಾದ ರಾಜಕಾಲುವೆ ಸರ್ವೆ ಮತ್ತು ನಿರ್ಮಾಣ ಕಾಮಗಾರಿ, ಸಂಪರ್ಕ ರಸ್ತೆಗಳ ಜೋಡಣೆ,ಹಳೇ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸಿ ನೂತನವಾಗಿ ಅಳವಡಿಸುವುದು ಸೇರಿದಂತೆ ಉದ್ಯಾನವನಗಳಿಗೆ  ತಂತಿ ಬೇಲಿ ಹಾಕಿ ಸಂರಕ್ಷಣೆಗೆ ಸೂಕ್ತ  ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದರು..

ಜಿಲ್ಲಾಧಿಕಾರಿ ಮನವಿಗೆ ಪ್ರತಿಕ್ರಿಯೆ ನೀಡಿ , ಯೋಜನಾ ನಿರ್ದೇಶಕರು ಕೊಪ್ಪಳ, ಮತ್ತು ಕುಷ್ಟಗಿ ಲೋಕೋಪಯೋಗಿ ಇಲಾಖೆ, ಪುರಸಭೆ ಅಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮವಹಿಸಿ, ವರದಿ ನೀಡುವಂತೆ ಸೂಚಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಮಹೇಶ್ ರವರು ಮನವಿ ಸ್ವೀಕರಿಸಿ ಮಾತನಾಡಿ, ರಾಜಕಾಲುವೆ ನಕ್ಷೆ ಪ್ರಕಾರ ಹಾಗೂ ಸ್ಥಳ ಪರಿಶೀಲನೆ ವರದಿಯಂತೆ ಪುರಸಭೆಯ ಎನ್.ಎ ಪರಿವರ್ತನೆಯಾದ ಬಡಾವಣೆಗಳ ನಕ್ಷೆಗಳೊಂದಿಗೆ ತಾಳೆ ಮಾಡಿ, ಅತಿಕ್ರಮಣವಾಗಿದ್ದರೆ ತೆರವಿಗೆ ಆದೇಶಿಸಲಾಗುವುದು. ಇನ್ನುಳಿದ ಬೇಡಿಕೆಗಳಿಗೆ ಆದ್ಯತೆ ಮೇರೆಗೆ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಿ.ಬಿ ಗಡೇದ, ಕಾರ್ಯದರ್ಶಿ ಬಸವರಾಜ ಗಾಣಿಗೇರ, ಸದಸ್ಯರಾದ ನಾಗರಾಜ ಶೆಟ್ಟಿ, ಡಾ.ಬಾಬು , ಈಶಪ್ಪ ತಳವಾರ, ಅನೀಲ್ ಆಲಮೇಲ, ಬಾಬು ಘೋರ್ಪಡೆ, ಮಹಾಂತೇಶ ಮಂಗಳೂರು, ಉಮೇಶ ಶೆಟ್ಟರ ಮತ್ತು ತಿರುಮಲರಾವ್ ದಂಡಿನ ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!