December 22, 2024

ಮದ್ಯಪಾನ ತಂಪಾಕು ಸೇವನೆ ಇತರೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ

ಯಲಬುರ್ಗಾ :ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಆದ್ದರಿಂದ ದುಶ್ಚಟದಿಂದ ದೂರವಿರ ಬೇಕೆಂದು ಜಿ.ಪ.ಮಾಜಿ ಸದಸ್ಯೆ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾದಕ ವ್ಯಸನ ಮುಕ್ತ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯೆ ಶಕುಂತಲಾದೇವಿ ಮಾಲಿಪಾಟೀಲ್ ಕರೆ ನೀಡಿದರು.

ತಾಲೂಕಿನ ಕರಮುಡಿ ಗ್ರಾಮದ ಶಾಂತಮ್ಮ ಶರಣಪ್ಪ ಕಂಪಗೌಡ್ರ ಸರಕಾರಿ ಪ್ರೌಢ ಶಾಲೆಯಲ್ಲಿ ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ ವತಿಯಿಂದ ಆಯೋಜಿಸಿದ ಮುಧೋಳ ವಲಯ ಮಟ್ಟದ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಗಳ ಮುಖಾಂತರ ಮದ್ಯ ಮತ್ತು ಮಾದಕ ವಸ್ತುಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವದು ಅತ್ಯವಶ್ಯವೆಂದು ಹೇಳಿದರು

ವಲಯ ಮೇಲ್ವಿಚಾರಕ ರುದ್ರೇಶ ಕೂಬ್ಯಾಳ ಪ್ರಾಸ್ತಾವಿಕ ಮಾತನಾಡಿದರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ˌಜಿಲ್ಲಾ ಜನ ಜಾಗೃತಿ ಸಮೀತಿ ಸದಸ್ಯ ಶರಣಬಸಪ್ಪ ದಾನಕೈ ˌ ಮುಖ್ಯ ಶಿಕ್ಷಕ ಬಸವರಾಜ ಕರಾಟೆ

ಎಸ್ˌಡಿ. ಎಂ.ಸಿ ಅಧ್ಯಕ್ಷ ಶ್ಯಾಮೀದಸಾಬ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು ಎಸ್.ಡಿ.ಎಂ.ಸಿ.ಸದಸ್ಯರುಗಳಾದ ˌಕಳಕಮ್ಮ ಬಾವೂರು, ದೇವಮ್ಮರಾಟಿ, ಸೇವಾ ಪ್ರತಿನಿಧಿ ಪ್ರೇಮಾ ಕರಮುಡಿ,ವಿಜಯಲಕ್ಷ್ಮಿ ಚವಡಿ ಶಿಕ್ಷಕರುಗಳಾದ ಶರಣಪ್ಪ ಮೂಗನೂರು ವೆಂಕಟೇಶ ಪಾಟೀಲ್. ಶಿಕ್ಷಕಿ ವೀರಮ್ಮ ನಿಡಶೇಸಿ ಶಿಕ್ಷಕ ಬಸವರಾಜ ಕೊಂಡಗುರಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!