December 22, 2024

ಬಿಸಿಲಿನ ತಾಪಮಾನ ನಿಯಂತ್ರಣಕ್ಕೆ ಪರಿಸರ ಕಾಳಜಿ ಅವಶ್ಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಸಿ ನೇಡುವ ಕಾರ್ಯಕ್ರಮಕ್ಕೆ ಚಾಲನೆ.

ಯಲಬುರ್ಗಾ : ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕು ನಿರ್ಮಿಸಿಕೊಳ್ಳಲು ಸ್ವಚ್ಚ ಹಾಗೂ ಉತ್ತಮ ಪರಿಸರ ಅತ್ಯಗತ್ಯವಾಗಿದ್ದು,ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ವಲಯ ಮೇಲ್ವಿಚಾರಕಿ ಚನ್ನಮ್ಮ ಗೌಡ್ರ ಹೇಳಿದರು

ತಾಲೂಕಿನ ಮಂಡಲಮರಿ ಗ್ರಾಮದಲ್ಲಿ ಶ್ರೀ ಕ್ಷೇತ್ರಧರ್ಮಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ “ನಮ್ಮೂರ ನಮ್ಮ ಕರೆ ‘ ಯೋಜನೆಯಡಿ ಕೆರೆ ನಿರ್ಮಿಸಲಾಗಿದ ಕೆರೆಯಲ್ಲಿ ನೀರು ಸಹ ಸಂಗ್ರಹವಾಗಿದೆ ಇಂದು ಕೆರೆಯ ದಡದ ಸುತ್ತಲು ನೂರಾರು ವಿವಿಧ ತಳಿಯ ಸಸಿಗಳನ್ನ ನೆಡುವ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು

ಇದೇ ವೇಳೆ ಕೆರೆ ಮಕ್ಕಳ್ಳಿ ಶಿವಾನಂದ ಮಠ ಪಿಠಾಧಿಪತಿ ಶಿವಾನಂದ ಮಹಾಸ್ವಾಮಿಜಿ ಹಾಗೂ ಕೆರೆ ಅಭಿವೃದ್ದಿ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಪತ್ತಾರ ಸಸಿ ನೇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಮಕ್ರಮದಲ್ಲಿ ಕ್ಷೇತ್ರ ಮಂಜುನಾಥ ಗ್ರಾಮೀಣ ಅಭಿವೃದ್ದಿ ಯೋಜನೆಯ ತಾಲೂಕ ವ್ಯವಸ್ಥಾಪಕ ಸತೀಶ ಗಾಂವಕರ ಮಾತನಾಡಿ, ಕೃಷಿ ಮೇಲ್ವಿಚಾರಕ ಪ್ರಸನ್ನ ಕುಮಾರ ,ಗ್ರಾಮ ಪಂಚಾಯತ ಸದಸ್ಯ ಸೋಮಲಿಂಗಪ್ಪ ಕುರಿ,ಗ್ರಾಮದ ಮುಖಂಡರಾದ ಈರಪ್ಪ ಮುಂಡರಗಿ , ಯಮನೂರಪ್ಪ ಕಾಗಿ , ಪತ್ರಕರ್ತ ಬಸವರಾಜ ಮುಂಡರಗಿ ಮೌನೇಶ ಬಡಿಗೇರ, ನೀಲಪ್ಪ ಪಟ್ಟೇದ ವೀರನಗೌಡ ಪೋಲಿಸ ಪಾಟೀಲ್, ಯಮನಪ್ಪ ಹೊಸಮನಿ,ರಂಗಪ್ಪ ತೆಗ್ಯಾಳ,ನೀರುಪಾದಿ ಮಕ್ಕಳ್ಳಿ,
ಶೇಕರಗೌಡ ಮಾಲಿ ಪಾಟಿಲ್ ,
ಮೈಲಾರಗೌಡ ಪೊಲಿಸ ಪಾಟೀಲ್ ,ನಿಂಗಪ್ಪ ದಳಪತಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!