December 23, 2024

ಚುನಾವಣಾ ಅವಲೋಕನಾ ಸಭೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ.

ವರದಿ ಲೋಕೇಶ್ ಭಜಂತ್ರಿ

ಕೊಪ್ಪಳ

 

ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಕೊಪ್ಪಳ ಲೋಕಸಭೆಯ ಚುನಾವಣಾ ಜಿಲ್ಲಾ ಅವಲೋಕನಾ ಸಭೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷರಾದ ನವೀನಕುಮಾರ ಗುಳಗಣ್ಣವರ ಭಾಗವಹಿಸಿ ಮಾತನಾಡಿ ಬಿಜೆಪಿ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಸತತವಾಗಿ ಮೂರು ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಗೆದ್ದಿದ್ದು, ಕ್ಷೇತ್ರದ ಮತದಾರ ಆಶಿರ್ವಾದ ಸದಾ ನಮ್ಮ ಮೇಲಿದ್ದು,ಈ ಬಾರಿಯ ಸೋಲಿನಿಂದ ಪುಟಿದೆದ್ದು ಪಕ್ಷ ಸಂಘಟನೆ ಮಾಡಿ ಮತ್ತೊಮ್ಮೆ ಪಕ್ಷದ ಬಾವುಟವನ್ನು ಕೊಪ್ಪಳದಲ್ಲಿ ಆರಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿದ್ದು ಎಂದು ಹೇಳಿದರು.

 

 

ಈ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ,ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ, ವಿಭಾಗ ಸಹ ಪ್ರಭಾರಿಗಳಾದ ಚಂದ್ರಶೇಖರ ಪಾಟೀಲ್, ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಭೂಮರಡ್ಡಿ, ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರೆಶೇಖರ್, ಪ್ರಮುಖರಾದ ಮಹಾಂತೇಶ್ ಪಾಟೀಲ್ ಮೈನಹಳ್ಳಿ, ಅಪ್ಪಣ್ಣ ಪದಕಿ, ಪ್ರದೀಪ್ ಹಿಟ್ನಾಳ್,ಸುನೀಲ ಹೆಸರೂರ, ರಮೇಶ್ ಕವಲೂರ, ಈಶಪ್ಪ ಮಾದಿನೂರ, ವಿರೇಶ್ ಸಜ್ಜನ್, ಪಕ್ಕೀರಪ್ಪ ಆರೇರ್, ನೀಲಕಂಠಯ್ಯ ಹಿರೇಮಠ, ಕರಿಯಪ್ಪ ಮೇಟಿ, ಪುಟ್ಟರಾಜ್ ಚಕ್ಕಿ,ಸೇರಿದಂತೆ ಉಭಯ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!