December 23, 2024

ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟನೆ

ದಿವ್ಯ ಸಾನಿಧ್ಯ ತ್ರಿವಿಧಿ ದಾಸೋಹಿ ಶ್ರೀ ಜಗದ್ಗುರು ಮುಂಡರಗಿ ಅನುದಾನೇಶ್ವರ ಮಹಾಸ್ವಾಮಿಗಳು ನೆರವೇರಿಸಿ ಕೊಪ್ಪಳದ ಗವಿಸಿದ್ದೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಪೂರ್ಣಗೊಂಡ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಇವರ ಜೊತೆ ಉದ್ಘಾಟನೆ ಅಕ್ಷರ ಸಂತ ಪದ್ಮ ಶ್ರೀ ಪುರಸ್ಕಾರ ಹಾಜಬ್ಬ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಈಗ ಉಳ್ಳಾಲ ಕಂದಾಯ ಗ್ರಾಮದ ಹರೆಕಳ ಗ್ರಾಮದ ನಿವಾಸಿ ಬಿಡಿ ಕಟ್ಟುತ್ತಲೆ ನಂತರ ಕಿತ್ತಳೆ ಹಣ್ಣು ಒತ್ತು ಮಾಡುತ್ತಿದ್ದರು ತಮ್ಮದೇ ಊರಿನಲ್ಲಿ ಒಂದು ಶಾಲೆ ಪ್ರಾರಂಭಿಸು ಬಯಕೆ ಊರಿನಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕೆಂಬುದು ಅವರ ಆಸೆ ಅದಕ್ಕಾಗಿ ನಿರಂತರ ಪ್ರಯತ್ನ ಮಾಡಿದ ಪರಿಣಾಮವಾಗಿ ಹರೆಕಳದ ನ್ಯೊಪಡ್ಡು ಗ್ರಾಮದಲ್ಲಿ 1999- 2000 ಇಸ್ವಿ ಯಲ್ಲಿ ಮಂಜೂರಿ ಆಯ್ತು ನ್ಯೊಪಡ್ಡು ಮಸದಿಯಲ್ಲಿ ಶಾಲೆ ಪ್ರಾರಂಭವಾಯಿತು ಹೀಗೆ ಕಿತ್ತಳೆ ಹಣ್ಣು ಮಾರಿಕೊಂಡು ಬಂದ ಉಳಿತಾಯ ದುಡ್ಡಿನ ಸೇರಿಸಿ ಶಾಲೆ ಕಟ್ಟಡ ಜಮೀನು ಖರೀದಿಸಿದರು ಶಾಲೆಯ ಮೇಲುವುಸ್ತವಾರಿ ಸಮಿತಿ ಅಧ್ಯಕ್ಷರು ಆಯ್ಕೆಯಾದರು ಸಿಏನ್ಎಲ್ ಐಬಿಎನ್ ರಿಯಲ್ ಹೀರೋ ಎನ್ನುವ ಪ್ರಶಸ್ತಿ ನೀಡಿ 5 ಲಕ್ಷ ನೀಡಿ ಗೌರವ ಪ್ರಶಸ್ತಿ ನೀಡಿ ಗೌರವಿಸಿತು ಪ್ರಶಸ್ತಿಯಿಂದ ಬಂದ ಹಣವನ್ನು ಶಾಲೆಯ ಅಭಿವೃದ್ಧಿಗೋಸ್ಕರ ಕೊಟ್ಟರು 2021 ನವಂಬರ್ 8 ರಂದು ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದಾರೆ ಇವರು ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಪೂರ್ಣಗೊಂಡ ಕಟ್ಟಡದ ಉದ್ಘಾಟನೆ ಮಾಡಿದರು
ಹಾಗೂ ದಾನ ಚಿಂತಾಮಣಿ ಖ್ಯಾತಿಯ ರಾಜ್ಯೋತ್ಸವ ಪುರಸ್ಕೃತ ಹುಚ್ಚಮ್ಮ ಅವರು ಅಕ್ಷರ ಬರೆದಿದ್ದರು ಅಕ್ಷರ ಕ್ರಾಂತಿ ಮಾಡಿದ ಮಹಾನ್ ತಾಯಿ ಕೊಪ್ಪಳ ಜಿಲ್ಲೆಯ ಕುಣಿಕೆರೆ ಗ್ರಾಮದ ಶಾಲೆಯ ನಿರ್ಮಾಣ ಮಾಡಲು ಸರ್ಕಾರ ಕಟ್ಟಡ ಮಂಜೂರಾತಿ ಮಾಡಿದ್ದು ಆದರೆ ಕಟ್ಟಡ ನಿರ್ಮಾಣಕ್ಕೆ ಜಮೀನು ಇರಲಿಲ್ಲ ಆಗ ಯಾರು ಸಹಾಯಕ್ಕಾಗಿ ಯಾರು ಮುಂದೆ ಬರಲಿಲ್ಲ ಆದರೆ ಹುಚ್ಚಮ್ಮ ಮಾತ್ರ ತನ್ನ ಹೆಸರಿನಲ್ಲಿದ್ದ ಎರಡು ಎಕರೆ ಭೂಮಿಯನ್ನು ಶಾಲೆಯ ಕಟ್ಟಡ ನಿರ್ಮಾಣಕ್ಕೆ ದಾನವಾಗಿ ನೀಡಿದರು ಈಗ ಈ ಭೂಮಿಯ ಬೆಲೆ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ನಮ್ಮೂರಿನಲ್ಲಿ ಶಾಲೆ ನಿರ್ಮಾಣ ಮಾಡಲು ದಾನ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಯಿತು ಇವರು ಕೂಡ ಇಂದು ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟಿಸಿದರು
ಇಂದು ಕೊಪ್ಪಳದ ಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಮಠದ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ

ಕಾರ್ಯಕ್ರಮದಲ್ಲಿ ಗವಿಮಠದ ಪೀಠಾಧಿಪತಿಗಳಾದ ಅಭಿನವ ಶ್ರೀ ಗವಿಸಿದ್ದೆವೇಶ್ವರ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್, ಗಂಗಾವತಿ ಶಾಸಕರಾದ ಶ್ರೀ ಜನಾರ್ಧನ ರಡ್ಡಿ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಎಸ್ ಪಿ ಯಶೋಧ ವಂಟಿಗೋಡಿ, ಮಾಜಿ ಸಂಸದರಾದ ಕರಡಿ ಸಂಗಣ್ಣ, ಮಾಜಿ ಸಚಿವರಾದ ಮಲ್ಲಿಕಾರ್ಜುನ್ ನಾಗಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ಆರ್ ಶ್ರೀನಾಥ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ನವೀನ ಗುಳಗಣ್ಣವರ ಪ್ರಮುಖರಾದ ಕೆ ಬಸವರಾಜ ಹಿಟ್ನಾಳ್, ಡಾ ಕೆ ಬಸವರಾಜ, ಸಿ.ವಿ ಚಂದ್ರಶೇಖರ್, ಅಮರೇಶ್ ಕರಡಿ, ಹಾಗೂ ಅನೇಕ ಮಠಗಳ ಪಿಠಾಧಿಪತಿಗಳು, ಗುರು-ಹಿರಿಯರು, ವಿದ್ಯಾರ್ಥಿಗಳು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!