December 23, 2024

ಖಾರದ ಪುಡಿ ಎರಚಿ 5 ಲಕ್ಷ ರೂಪಾಯಿ ದರೋಡೆ

 

 

ಖಾರದ ಪುಡಿ ಎರಚಿ 5 ಲಕ್ಷ ರೂಪಾಯಿ ದರೋಡೆ ಮಾಡಿದ ಸ್ಥಳ ಪರಿಶೀಲನೆ ಮಾಡುತ್ತಿರುವ ಕುಷ್ಟಗಿ ಪೊಲೀಸರು.

ಕೊಪ್ಪಳ

ಕಾರದಪುಡಿ ಎರಚಿ ಐದು ಲಕ್ಷಗಳನ್ನು ದರೋಡೆ ಮಾಡಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲಾರಿಹಟ್ಟಿ ಡಗ್ಗಿ ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರಿನಿಂದ ಕೊಪ್ಪಳಕ್ಕೆ ಬರುತ್ತಿದ್ದ ಇನೊವಾ ಕಾರಿನಲ್ಲಿದ್ದ ವಾನಂದ ಐದನಾಳ, ವಿಜಯಮಹಾಂತೇಶ ಪಲ್ಲೇದ, ಚಾಲಕ ಖಾಲೀದ್ ಚಾವೋಸ್ ಎಂಬುವರ  ಮೇಲೆ ನಂಬರ್ ಪ್ಲೇಟ್ ಇಲ್ಲದ ಬ್ಲಾಕ್ ಕಲರ್ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಾರ್ ಅಡ್ಡಗಟ್ಟಿ ನಿಂತು ಬ್ಲೇಡ್ ನಿಂದ ದಾಳಿ ನಡೆಸಿ, ಮೆಣಸಿನ ಪುಡಿ ದಾಳಿ ಮಾಡಿ ಕಾರಿನಲ್ಲಿದ್ದ ಐದು ಲಕ್ಷ ರೂಪಾಯಿ ನಗದು ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

 

ಕಾರದಪುಡಿ ಹಾಗೂ ಚಾಕು ದಾಳಿಗೆ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳಗಳನ್ನು ತಾವರಗೇರಾ ಆಸ್ಪತ್ರೆಗೆ ದಾಖಲು.

 

ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಬಂಧನಕ್ಕಾಗಿ ಪೊಲೀಸರು ಬಲೇಬಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!