December 23, 2024

ಚಿರತೆ ಕಾಟಕ್ಕೆ ಬೇಸತ್ತ ಕುರಿಗಾಹಿಗಳು, ಗಣಿ ಕಾರ್ಮಿಕರು

 

 

ಕುಕನೂರು.

 

ದಿನನಿತ್ಯ ರಾತ್ರಿಯ ವೇಳೆ ಗಣಿಗಾರಿಕಾ ಪ್ರದೇಶಗಳಲ್ಲಿ ಸಂಚರಿಸಿ ಶ್ವಾನಗಳು,ಮಂಗಗಳು ಹಾಗೂ ಕುರಿಗಳ ಮೇಲೆ ದಾಳಿ ನಡೆಸಿ ಕುರಿಗಾಯಿಗಳ ಮತ್ತು ಗಣಿ ಕಾರ್ಮಿಕರ ಎದೆಯಲ್ಲಿ ನಡಕ ಹುಟ್ಟಿಸಿರುವ ಚಿರತೆಗಳ ಕಾಟಕ್ಕೆ ಗಣಿ ಕಾರ್ಮಿಕರು ಹಾಗೂ ಗಾವರಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಜನಸಾಮಾನ್ಯರು ಬೇಸತ್ತಿದ್ದು ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.

 

ಹೌದು ತಾಲೂಕಿನ ಗಣಿಗಾರಿಕಾ ಪ್ರದೇಶದ ಗಾವರಾಳ, ಗುದ್ನೇಪ್ಪನ ಮಠ, ತಿಪ್ಪರಸನ ಹಾಳ, ಗ್ರಾಮಗಳಲ್ಲಿ ದಿನನಿತ್ಯ ರಾತ್ರಿಯ ಸಮಯದಲ್ಲಿ ಚಿರತೆಗಳು ಸಂಚಾರ ನಡೆಸಿ ಶ್ವಾನಗಳು ಹಾಗೂ ಕುರಿಗಳ ಭಕ್ಷಣೆ ಮಾಡುತ್ತಿದ್ದು, ಕುರಿಗಾಯಿಗಳು ಜೀವ ಬೆದರಿಕೆಯಲ್ಲಿ ಕುರಿಗಳನ್ನು ಮೇಯಿಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗಾವರಾಳ ಗ್ರಾಮದ ಜಂಪ್ ಗ್ರಾನೈಟ್ ಹಾಗೂ ಪೂಜಾರ ಗ್ರಾನೆಟ್ಗಳಲ್ಲಿ ಚಿರತೆಗಳು ಕಾಟ ಅತಿರೇಖಕ್ಕೆ ಏರಿದ್ದು, ಗ್ರಾನೆಟ್ ಗಳ ಕಾವಲಿ ಎಂದು ಸಾಕಿದ 25ಕ್ಕೂ ಅಧಿಕ ಶ್ವಾನಗಳು ಚಿರತೆಗಳು ಅವತ್ತು ಪಡೆದಿವೆ.

ಚಿರತೆಗಳ ಕಾಟದಿಂದ ಗ್ರಾನೈಟ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಜೀವವನ್ನು ಅಂಗೈಯಲ್ಲಿ ಹಿಡಿದು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಳೆದ ವರ್ಷ ಅರಣ್ಯ ಇಲಾಖೆ ಸಿಬ್ಬಂದಿಗಳು ಎರಡು ಚಿರತೆಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಕೂಡ ಅವುಗಳ ಸಂತತಿ ಬೆಳೆದು ನಿಂತಿದ್ದು ಈಗ ಎಲ್ಲೊಂದರಲ್ಲಿ ಚಿರತೆಗಳು ಸಂಚಾರ ಮಾಡಿ ಮನಬಂದಂತೆ ಶ್ವಾನಗಳ, ಮಂಗಗಳು ಹಾಗೂ ಕುರಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಣಿ ಕಾರ್ಮಿಕರು ಕುರಿಗೈಗಳು ಹಾಗೂ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!