December 23, 2024

ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನ ಆಚರಣೆ.

 

ಕುಕನೂರು.

 

ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾವರಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನ ಆಚರಿಸಿ ಕೂಲಿಕಾರರಿಗೆ ಯೋಜನೆಯ ಬಗ್ಗೆ ಹಾಗೂ ರಾಷ್ಟ್ರೀಯ ಇನ್ಸೂರನ್ಸ ಗಳ ಬಗ್ಗೆ, ಅಟಲ್ ಪೆನ್ ಶೆನ್ ಹಾಗೂ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು.

ಈ ವೇಳೆ ತಾಲೂಕು ಪಂಚಾಯತಿ ಐ.ಇ.ಸಿ ಸಂಯೋಜಕರಾದ ಲಕ್ಷ್ಮಣ್ ಕೆರಳ್ಳಿ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅರೇಕುಶಲ ಕಾರ್ಮಿಕರರಿಗೆ 100 ದಿನಗಳ ಕೆಲಸ ನೀಡುತ್ತಿದ್ದು ಪುರುಷ/ ಮಹಿಳಾ ಕಾರ್ಮಿಕರಿಗೆ ಸಮಾನ ಕೂಲಿ 349 ರೂಪಾಯಿಗಳನ್ನು ನೀಡುತ್ತದೆ.

ನೆರೇಗಾ ಕಾಮಗಾರಿಯಿಂದ ಜಲ ಸಂಪನ್ಮೂಲ ಮೂಲಗಳಾದ ಕೆರೆ,ಹಳ್ಳ, ಕೊಳ್ಳ ಗಳ ಉಳು ಎತ್ತುವ ಮೂಲಕ ಜಲ ಸಂರಕ್ಷಣೆ ಕಾರ್ಯಯಾಗುತ್ತಿದೆ.

 

ಇದಲ್ಲದೆ ನೆರೇಗಾ ಕಾಮಗಾರಿಯಡಿ ವೈಯಕ್ತಿಕ ಕೆಲಸಗಳಿಗೂ ಪ್ರಾಮುಖ್ಯತೆ ನಡೆದಿದ್ದು ಜಮೀನುಗಳ ಬದು ನಿರ್ಮಾಣ,ಕುರಿ ಶೇಡ್,ದನದ ಕೊಟ್ಟಿಗೆ ಗಳಂತ ಗಳನ್ನು ಸಹ ಮಾಡುತ್ತಿದ್ದೇವೆ.

ನೆರೇಗಾ ಕಾಮಗಾರಿ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸುವಂತೆ ನೆರೇಗಾ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.

ಇದಲ್ಲದೆ ಕಾರ್ಮಿಕರಿಗೆ ರಾಷ್ಟ್ರೀಯ ಇನ್ಸೂರೆನ್ಸ್ ಗಳಾದ ಅಟಲ್ ಪೆನ್ಷನ್, ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ದನ್ ಯೋಜನೆಗಳು ಜಾರಿಯಲ್ಲಿದ್ದು ಇವುಗಳು ಕಾರ್ಮಿಕರ ಭವಿಷ್ಯವನ್ನು ಭದ್ರ ಪಡಿಸುವ ಯೋಜನೆಗಳಾಗಿವೆ. ಪ್ರತಿಯೊಬ್ಬ ಕಾರ್ಮಿಕರು ಇನ್ಸೂರೆನ್ಸ್ ಗಳನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

 

ಕಾಮಗಾರಿ ಸ್ಥಳದಲ್ಲಿ ಗ್ರಾಮ ಕಾಯಕ ಮಿತ್ರರು ಕಾಯಕ ಬಂಧುಗಳಯ ಕೂಲಿಕಾರರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!