December 23, 2024

ತಾಲೂಕಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಿ ಖಾಯಂ ನ್ಯಾಯಾಧೀಶರನ್ನು ನೇಮಕ ಮಾಡಿ.

 

ಕುಷ್ಟಗಿ:

 

ತಾಲೂಕು ವಕೀಲರ ಸಂಘದ ವತಿಯಿಂದ ತಾಲೂಕಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸುವಂತೆ ಮತ್ತು ಕುಷ್ಟಗಿ ತಾಲೂಕಿನ ಹಿರಿಯ ನ್ಯಾಯಾಲಯಕ್ಕೆ ಖಾಯಂ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಕುಷ್ಟಗಿ ವಕೀಲರ ಸಂಘದ ಪದಾಧಿಕಾರಿಗಳು ಮನವಿಯನ್ನು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಂ ಜಿ ಎಸ್ ಕಮಲ್ ಅವರನ್ನು ಗೌರವಪೂವ೯ಕವಾಗಿ ಅಭಿನಂದಿಸಿ ಮನವಿಯನ್ನು ಸಲ್ಲಿಸಿದರು.

 

ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ ಕುಷ್ಟಗಿ ಉಪಾಧ್ಯಕ್ಷ ಶಿವಕುಮಾರ್ ದೊಡ್ಡಮನಿ ಕಾರ್ಯದರ್ಶಿ ಮೈನುದ್ದಿನ್ ತಳವಗೇರಿ ಹಾಗೂ ಹಿರಿಯ ವಕೀಲರಾದ ಸಿ ಪಿ ಪಾಟೀಲ್ ಕೆ ವಿ ಆಶ್ರೀತ ಅಮರೇಗೌಡ ಪಾಟೀಲ ಬಸವರಾಜ ಬಿ ಎ. ಎಚ್ ಪಲೇದ ಪರಸಪ್ಪ ಗುಜಮಾಗಡಿ ಬಿ ಡಿ ಅಪ್ಪಾಜಿ ಪ್ರಭುರಾಜ ವೆಂಕಟೇಶ್ ಕುಲಕರ್ಣಿ ರಾಮಣ್ಣ ಮೇಟಿ ಸರ್ವ ಸದಸ್ಯರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!